ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವೀಟ್ ಪ್ರತಿಕ್ರಿಯೆ: ಗೋಸ್ವಾಮಿ ವಜಾ, ಸಿಕ್ತು ಸರಿಯಾದ ಸಜಾ

By Mahesh
|
Google Oneindia Kannada News

ನವದೆಹಲಿ, ಫೆ.5: ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಅವರನ್ನು ಕೇಂದ್ರ ಸರ್ಕಾರ ಬುಧವಾರ ರಾತ್ರಿ ವಜಾ ಮಾಡಿ, ಅವರ ಸ್ಥಾನಕ್ಕೆ ಎಲ್.ಸಿ. ಗೋಯಲ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು ಎಲ್ಲರಿಗೂ ತಿಳಿದಿದೆ. ಕೇರಳ ಕೇಡರ್ ನ ಅಧಿಕಾರಿ ಗೋಯಲ್ ಅವರು ಗುರುವಾರ ಮಧ್ಯಾಹ್ನ ಅಧಿಕಾರ ಸ್ವೀಕರಿಸಿದ್ದಾರೆ.

ಕಳೆದ ತಿಂಗಳು ಡಿಆರ್‌ಡಿಒ ಮುಖ್ಯಸ್ಥ ಅವಿನಾಶ್ ಚಂದರ್ ಅವರನ್ನು ಮನೆಗೆ ಕಳುಹಿಸಲಾಗಿತ್ತು. ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅವರನ್ನು ಕೂಡಾ ಅವಧಿಗೆ ಮುನ್ನ ವಜಾಗೊಳಿಸಲಾಯಿತು. ಈಗ ಅನಿಲ್ ಗೋಸ್ವಾಮಿ ಅವರಿಗೆ ಮನೆ ದಾರಿ ತೋರಿಸಲಾಗಿದೆ. [ವಿದೇಶಾಂಗ ಕಾರ್ಯದರ್ಶಿ: ಸುಜಾತಾ ವಜಾ, ಜೈ ಶಂಕರ್ ಅಧಿಕಾರಕ್ಕೆ]

ಅನಿಲ್ ಗೋಸ್ವಾಮಿ ಅವರ ಹೆಸರು ಬಹುಕೋಟಿ ಶಾರದಾ ಚಿಟ್‌ಫಂಡ್ ಹಗರಣಕ್ಕೆ ನೆರವಾದವರ ಪಟ್ಟಿಯಲ್ಲಿ ಕೇಳಿ ಬಂದಿದೆ. ಸಿಬಿಐ ತನಿಖೆಯಲ್ಲಿ ಮೂಗು ತೂರಿಸಿದರು. ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಮಾತಾಂಗ್ ಸಿನ್ಹಾ ಬಂಧನ ತಡೆಯಲು ಸಿಬಿಐ ಮೇಲೆ ಅನಿಲ್ ಗೋಸ್ವಾಮಿ ಪ್ರಭಾವ ಬೀರಿದ್ದರು ಎಂದು ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. [ಚಿಟ್ ಫಂಡ್ ವಂಚನೆ, ಸಿಬಿಐ ವಶಕ್ಕೆ ರೂಪದರ್ಶಿ]

ಅಧಿಕಾರಿಗಳ ವರ್ಗಾವಣೆ, ವಜಾ ಮಾಡುವ ಅಧಿಕಾರ ಸರ್ಕಾರಕ್ಕೆ ಇದ್ದೇ ಇರುತ್ತದೆ. ಅದರೆ, ಇತ್ತೀಚೆಗೆ ಸರ್ಕಾರ ಮೂರನೇ ಬಾರಿ ಈ ರೀತಿ ಮಹತ್ವದ ನಡೆ ಇಡುತ್ತಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಗೊಳಗಾಗಿದೆ.ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನ ಗೋಯಲ್ ಪರ-ವಿರೋಧ ಚರ್ಚೆ ನಡೆಯುತ್ತಿದೆ.

ಚಿಟ್ ಫಂಡ್ ಹಗರಣ್: ತನಿಖೆ ಚುರುಕುಗೊಳಿಸಿದ ಸಿಬಿಐ

ಚಿಟ್ ಫಂಡ್ ಹಗರಣ್: ತನಿಖೆ ಚುರುಕುಗೊಳಿಸಿದ ಸಿಬಿಐ

ಶಾರದಾ ಚಿಟ್ ಫಂಡ್ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ, ಇಲಾಖಾ ಮಟ್ಟದ ತನಿಖೆಗೂ ಸೂಚನೆ ನೀಡಿದೆ. ಗೋಸ್ವಾಮಿ ವಜಾಗೊಳಿಸಲು ಪ್ರಧಾನಿ ಸಚಿವಾಲಯಕ್ಕೆ ಸಿಬಿಐ ಕೋರಿದ ಬೆನ್ನಲ್ಲೇ ಇನ್ನಷ್ಟು ಆರೋಪಿಗಳ ಬಂಧನ, ವಿಚಾರಣೆ ಮುಂದುವರೆಯಲಿದೆ ಎಂದು ಸಿಬಿಐ ಅಧಿಕಾರಿಗಳು ಒನ್ ಇಂಡಿಯಾ ಪ್ರತಿನಿಧಿಗೆ ತಿಳಿಸಿದ್ದಾರೆ.

ಸರ್ಕಾರದ ಕ್ರಮಕ್ಕೆ ಸಾರ್ವಜನಿಕರ ಸಮರ್ಥನೆ

ಸರ್ಕಾರದ ಕ್ರಮಕ್ಕೆ ಸಾರ್ವಜನಿಕರ ಸಮರ್ಥನೆ ಸಿಕ್ಕಿದ್ದು, ಆಡಳಿತದಲ್ಲಿ ಪಾರದರ್ಶಕತೆ ಮೂಡಿಸಲು ಇಂಥ ಕ್ರಮಗಳು ಅಗತ್ಯವಿದೆ ಎಂದಿದ್ದಾರೆ.

ಯುಪಿಎ ಕಾಲದಲ್ಲಿ ನೇಮಕವಾಗಿದ್ದ ಅಧಿಕಾರಿಗಳು

ಯುಪಿಎ ಕಾಲದಲ್ಲಿ ನೇಮಕವಾಗಿದ್ದ ಅಧಿಕಾರಿಗಳ ಮೇಲೆ ಎನ್ ಡಿಎ ಇನ್ನಷ್ಟು ನಿಗಾವಹಿಸಬೇಕು.

ಅಧಿಕಾರ ಸ್ವೀಕರಿಸಿದ ಎಲ್ ಸಿ ಗೋಯಲ್

ಗೃಹ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಎಲ್ ಸಿ ಗೋಯಲ್

ಇಂಥ ಅಧಿಕಾರಿಗಳಿದ್ದರೆ ಭ್ರಷ್ಟಾಚಾರ ನಿರ್ಮೂಲನೆ ಹೇಗೆ?

ಗೋಸ್ವಾಮಿಯಂಥ ಅಧಿಕಾರಿಗಳಿದ್ದರೆ ಭ್ರಷ್ಟಾಚಾರ ನಿರ್ಮೂಲನೆ ಹೇಗೆ? ಎಂದು ಪ್ರಶ್ನಿಸಿದ ಸಾರ್ವಜನಿಕರು.

English summary
Twitter Reaction: LC Goyal replaces Anil Goswami as Home Secretary The Central Bureau of Investigation has started a major clean up act after it was found that several officials had tried to interfere with the probe into the Saradha scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X