ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಜೆ ಅಕ್ಬರ್ ವಿರುದ್ಧ ಹೇಳಿಕೆ ನೀಡಲು 20 ಪತ್ರಕರ್ತೆಯರು ಸಿದ್ಧ

|
Google Oneindia Kannada News

ನವದೆಹಲಿ, ಅಕ್ಟೋಬರ್ 17 : ವಿದೇಶಾಂಗ ಖಾತೆ ರಾಜ್ಯ ಸಚಿವ ಎಂಜೆ ಅಕ್ಬರ್ ಅವರು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ ನಂತರ, ಇಪ್ಪತ್ತಕ್ಕೂ ಹೆಚ್ಚು ಸಹೋದ್ಯೋಗಿಗಳು ಪ್ರಿಯಾ ಅವರ ಬೆಂಬಲಕ್ಕೆ ನಿಂತಿದ್ದು, ತಾವು ಕೂಡ ಅಕ್ಬರ್ ವಿರುದ್ಧ ಸಾಕ್ಷ್ಯ ಹೇಳಲು ಸಿದ್ಧರಿರುವುದಾಗಿ ಹೇಳಿದ್ದಾರೆ.

97 ವಕೀಲರ ಬೆಂಬಲದೊಂದಿಗೆ ಕಾನೂನು ಕದನಕ್ಕೆ ನಿಂತಿರುವ ಎಂಜೆ ಅಕ್ಬರ್ ವಿರುದ್ಧ, ಅವರಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇವೆ ಎಂದು ಹೇಳಿರುವ ಮಹಿಳೆಯರು ತಿರುಗಿಬಿದ್ದಿರುವುದು ಪ್ರಕರಣಕ್ಕೆ ಭಾರೀ ರೋಚಕತೆ ತಂದಿದೆ. ಹೆಣ್ಮಕ್ಳೇ ಸ್ಟ್ರಾಂಗು ಗುರು ಅಂತ ಒಗ್ಗಟ್ಟಿನಿಂದ ಹೋರಾಟಕ್ಕೆ ಸಜ್ಜಾಗಿದ್ದಾರೆ.

#MeToo : ಎಂಜೆ ಅಕ್ಬರ್ ವಿರುದ್ಧ ತಿರುಗಿಬಿದ್ದ ಸಂತ್ರಸ್ತ ವನಿತೆಯರು#MeToo : ಎಂಜೆ ಅಕ್ಬರ್ ವಿರುದ್ಧ ತಿರುಗಿಬಿದ್ದ ಸಂತ್ರಸ್ತ ವನಿತೆಯರು

ಈ ಮಹಿಳೆಯರಲ್ಲಿ ಕೆಲವರು ಸ್ವತಃ ಲೈಂಗಿಕ ಕಿರುಕುಳಕ್ಕೆ ಈಡಾಗಿದ್ದರೆ, ಇನ್ನು ಕೆಲವರು ಇದನ್ನೆಲ್ಲ ಕಣ್ಣಾರೆ ಕಂಡವರಿದ್ದಾರೆ. ತಮ್ಮ ಹೇಳಿಕೆಗಳನ್ನು ಕೂಡ ಈ ಪ್ರಕರಣದಲ್ಲಿ ನ್ಯಾಯಾಲಯ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ ಮತ್ತು ಮನವಿ ಪತ್ರಕ್ಕೆ ಎಲ್ಲರೂ ಸಹಿ ಹಾಕಿ ಇದನ್ನು ಸಾಕ್ಷ್ಯವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ. ಇವರೆಲ್ಲ 1990ರ ದಶಕದಲ್ಲಿ ಏಷ್ಯನ್ ಏಜ್, ಡೆಕ್ಕನ್ ಕ್ರಾನಿಕಲ್ ಮುಂತಾದ ಪತ್ರಿಕೆಗಳಲ್ಲಿ ಎಂಜೆ ಅಕ್ಬರ್ ಜೊತೆ ಪದಗಳನ್ನು ಪೋಣಿಸಿದವರಿದ್ದಾರೆ.

ಏನೂ 'ಮಾಡಲಿಲ್ಲ'ವೆಂದರೆ ಎಂಜೆ ಅಕ್ಬರ್ ಏನೂ ಮಾಡಲಿಲ್ಲವೆ?ಏನೂ 'ಮಾಡಲಿಲ್ಲ'ವೆಂದರೆ ಎಂಜೆ ಅಕ್ಬರ್ ಏನೂ ಮಾಡಲಿಲ್ಲವೆ?

ಈ ಹೊಸ ಬೆಳವಣಿಗೆಯೊಂದಿಗೆ, 90ರ ದಶಕದಲ್ಲಿ ಕಿರಿಯ ಪತ್ರಕರ್ತರ ಕಣ್ಣಲ್ಲಿ ಹೀರೋ ಆಗಿದ್ದ 67 ವರ್ಷದ ಹಿರಿಯ ಮಾಜಿ ಪತ್ರಕರ್ತ ಮೊಬಶಾರ್ ಜಾವೇದ್ ಅಕ್ಬರ್ ಈಗ ಜೀರೋ ಆಗಿದ್ದಾರೆ ಮತ್ತು ಸುಳ್ಳು ಕಥೆಗಳನ್ನು ಪೋಣಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಅಬ್ಬರಿಸುತ್ತಿರುವ ಅವರ ಸುತ್ತಲೇ ಕೇಸು ಸುತ್ತಿಕೊಳ್ಳುತ್ತಿದೆ. ಮಹಿಳೆಯರಿಗೆ ನ್ಯಾಯ ಸಿಗುವುದೆ?

ಮೊದಲ #MeToo ಏಟು ಹಾಕಿದ ಪ್ರಿಯಾ ರಮಣಿ

ಮೊದಲ #MeToo ಏಟು ಹಾಕಿದ ಪ್ರಿಯಾ ರಮಣಿ

#MeToo ಅಭಿಯಾನ ಇಡೀ ದೇಶದಾದ್ಯಂತ ಹಬ್ಬಿಕೊಳ್ಳುತ್ತಿರುವ ಹೊತ್ತಿನಲ್ಲಿ, ಪ್ರಿಯಾ ರಮಣಿ ಅವರು ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪ ಎಸಗಿದ್ದರು. ಮೊದಲಿಗೆ ವೆಬ್ ತಾಣವೊಂದರಲ್ಲಿ ಅಕ್ಬರ್ ಹೆಸರು ಪ್ರಸ್ತಾಪಿಸದೆ ತಾವು ಅನುಭವಿಸಿದ ಯಾತನೆಯನ್ನು ಬರೆದಿದ್ದರು, ನಂತರ ಅಕ್ಟೋಬರ್ 8ರಂದು ಅಕ್ಬರ್ ಹೆಸರು ಪ್ರಸ್ತಾಪಿಸಿ ಪ್ರಿಯಾ ರಮಣಿ ಟ್ವೀಟ್ ಮಾಡಿದ್ದರು. ಸಂದರ್ಶನಕ್ಕೆಂದು ಹೋಟೆಲಿಗೆ ಕರೆದು ಮದ್ಯ ಸೇವಿಸಲು ಒತ್ತಾಯಿಸಿದ್ದಲ್ಲದೆ, ಮಂಚದ ಮೇಲೆ ತಮ್ಮ ಪಕ್ಕದಲ್ಲಿ ಕೂಡಬೇಕೆಂದು ಆಗ್ರಹಿಸಿದ್ದರು ಎಂದು ಪ್ರಿಯಾ ರಮಣಿ ಅವರು ಅಕ್ಬರ್ ವಿರುದ್ಧ ಆರೋಪಿ ಹೊರಿಸಿದ್ದಾರೆ.

ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಎಂಜೆ ಅಕ್ಬರ್ ಮಾನನಷ್ಟ ಮೊಕದ್ದಮೆಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಎಂಜೆ ಅಕ್ಬರ್ ಮಾನನಷ್ಟ ಮೊಕದ್ದಮೆ

ಗಝಾಲಾ ವಹಾಬ್, ಮಜಲಿ ಮತ್ತಿತರರು

ಗಝಾಲಾ ವಹಾಬ್, ಮಜಲಿ ಮತ್ತಿತರರು

ಪ್ರಿಯಾ ರಮಣಿ ಅವರು ಸಂದರ್ಶನದ ಹಂತದಲ್ಲಿಯೇ ಎಂಜಿ ಎಕ್ಬರ್ ಅವರಿಂದ ಲೈಂಗಿಕ ಕಿರುಕುಳದ ಯಾತನೆ ಅನುಭವಿಸಿದ್ದರೆ, ಉಳಿದ 20 ಪತ್ರಕರ್ತೆಯರಲ್ಲಿ ಕೆಲವರು ಅಕ್ಬರ್ ಜೊತೆ ಇದ್ದುಕೊಂಡೇ ಲೈಂಗಿಕ ದೌರ್ಜನ್ಯದ ಅವಮಾನವನ್ನು ಅನುಭವಿಸಿರುವುದಾಗಿ ಹೇಳಿದ್ದಾರೆ. ಈಗಾಗಲೆ ಗಝಾಲಾ ವಹಾಬ್, ಅಮೆರಿಕಾದ ಪತ್ರಕರ್ತೆ ಮಜಲಿ ಡೇ ಪುಯ್ ಕಂಪ್ ಮುಂತಾದವರು ತಮ್ಮ ದಾರುಣ ಕಥೆಗಳ ಸುರುಳಿ ಬಿಚ್ಚಿಟ್ಟಿದ್ದಾರೆ. ಇವರಲ್ಲಿ ಈಗ ಹಲವರು ಬೇರೆಬೇರೆ ಪತ್ರಿಕೆಗಳಲ್ಲಿ ಉದ್ಯೋಗಿಯಾಗಿದ್ದಾರೆ. ಆದರೆ, ಈ ಪ್ರಕರಣ ಎಲ್ಲರನ್ನೂ ಒಗ್ಗೂಡಿಸಿದೆ.

'ಅಕ್ಬರ್ ತುಟಿಗೆ ತುಟಿಯೊತ್ತಿ ಗಂಟಲೊಳಗೆ ನಾಲಿಗೆ ತುರುಕಿದ್ದರು!''ಅಕ್ಬರ್ ತುಟಿಗೆ ತುಟಿಯೊತ್ತಿ ಗಂಟಲೊಳಗೆ ನಾಲಿಗೆ ತುರುಕಿದ್ದರು!'

ಮತ್ತೊಬ್ಬ ಮಹಿಳಾ ಪತ್ರಕರ್ತೆಯಿಂದ #MeToo

ಮತ್ತೊಬ್ಬ ಮಹಿಳಾ ಪತ್ರಕರ್ತೆಯಿಂದ #MeToo

ಈಗಾಗಲೆ ಹನ್ನೊಂದಕ್ಕೂ ಹೆಚ್ಚಿನ ಮಹಿಳೆಯರು ಅಕ್ಬರ್ ವಿರುದ್ಧ ವಿವಿಧ ಹಂತದಲ್ಲಿ ಲೈಂಗಿಕ ದೌರ್ಜನ್ಯ ಅನುಭವಿಸಿದ್ದನ್ನು ಹೇಳಿಕೊಂಡಿದ್ದಾರೆ. ಮಂಗಳವಾರ ಮತ್ತೊಬ್ಬ ಮಹಿಳಾ ಪತ್ರಕರ್ತೆ ತುಷಿತಾ ಪಟೇಲ್ ಅವರು ಈ ಮಹಿಳೆಯರನ್ನು ಸೇರಿಕೊಂಡಿದ್ದು, ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ. 1990ರ ದಶಕದಲ್ಲಿ ಇನ್ನೂ ತರಬೇತಿಯಲ್ಲಿದ್ದಾಗ ಅಕ್ಬರ್ 22 ವರ್ಷದ ತುಷಿತಾ ಅವರನ್ನು ಕೋಲ್ಕತಾದಲ್ಲಿ ತಾವಿದ್ದ ಹೋಟೆಲಿಗೆ ಕರೆಯಿಸಿಕೊಂಡಿದ್ದರು. ಆಗ ಕೇವಲ ಒಳಚಡ್ಡಿಯಲ್ಲಿ ನಿಂತಿದ್ದರಂತೆ ಅಕ್ಬರ್. ಇದನ್ನು ನೋಡಿ ತೀವ್ರ ಆಘಾತಕ್ಕೊಳಗಾಗಿದ್ದರಂತೆ. ನಂತರ ಹೈದರಾಬಾದ್ ನಲ್ಲಿ ಡೆಕ್ಕನ್ ಕ್ರಾನಿಕಲ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಮತ್ತೆರಡು ಬಾರಿ ತಮ್ಮನ್ನು ಲೈಂಗಿಕವಾಗಿ ಅಕ್ಬರ್ ಕಿರುಕುಳ ನೀಡಿದ್ದರು ಎಂದು ಎಂದು ತುಷಿತಾ ಆರೋಪಿಸಿದ್ದಾರೆ.

ತಲೆಬುಡವಿಲ್ಲದ ಆರೋಪಗಳು ಎಂದ ಅಕ್ಬರ್

ತಲೆಬುಡವಿಲ್ಲದ ಆರೋಪಗಳು ಎಂದ ಅಕ್ಬರ್

ಈ ಎಲ್ಲ ಆರೋಪಗಳು ಅಕ್ಬರ್ ಮೇಲೆ ದಾಳಿ ಮಾಡುತ್ತಿದ್ದಾಗ ಎಂಜೆ ಅಕ್ಬರ್ ಅವರು ಆಫ್ರಿಕಾ ಪ್ರವಾಸದಲ್ಲಿದ್ದರು. ಅವರನ್ನು ಕೂಡಲೆ ಸಂಪುಟದಿಂದ ಕಿತ್ತು ಬಿಸಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿತ್ತು, ವಿದೇಶಾಂಗ ಸಚಿವಾಲಯದ ಮೇಲೆ ಕೂಡ ಒತ್ತಡ ಇತ್ತು. ಅಮಿತ್ ಶಾ, ಸ್ಮೃತಿ ಇರಾಣಿ ಮತ್ತು ಸುಬ್ರಮಣಿಯನ್ ಸ್ವಾಮಿ ಅವರು ಪ್ರತಿಕ್ರಿಯಿಸಿದ್ದು ಬಿಟ್ಟರೆ ಉಳಿದವರು ಮೌನ ವಹಿಸಿದ್ದರು. ಆದರೆ, ಕಳೆದ ಭಾನುವಾರ ವಿದೇಶದಿಂದ ಹಿಂತಿರುಗುತ್ತಿದ್ದಂತೆ, ವಾಗ್ದಾಳಿ ಆರಂಭಿಸಿದ ಅಕ್ಬರ್ ಅವರು, ತನ್ನ ಮೇಲೆ ರಾಜಕೀಯ ದುರುದ್ದೇಶದಿಂದ ಸುಳ್ಳಿನ ಕಥೆಗಳನ್ನು ಕಟ್ಟಲಾಗುತ್ತಿದೆ. ಈ ಆರೋಪಗಳಲ್ಲಿ ಬುಡವೇ ಇಲ್ಲ, ತಾನು ಇವರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಅವರು ಹೇಳಿದ್ದರು. ಅದರಂತೆ ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.

ಸಾಮಾಜಿಕ ನ್ಯಾಯ ದೊರಕಿಸಿ ಕೊಡುವುದೆ?

ಸಾಮಾಜಿಕ ನ್ಯಾಯ ದೊರಕಿಸಿ ಕೊಡುವುದೆ?

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ಎ ಪ್ರಕಾರ, ಮತ್ತು ಮಹಿಳೆಯರು ಆರೋಪಿಸಿದಂತೆ ಅಕ್ಬರ್ ಅವರ ಕ್ರಿಯೆ ಲೈಂಗಿಕ ದೌರ್ಜನ್ಯದ ವಿವರಣೆಯಲ್ಲಿ ಬರುತ್ತದೆ. ಪ್ರಿಯಾ ರಮಣಿ ಅವರು ತಮ್ಮ ಮೇಲೆ ಯಾವುದೇ ರೀತಿ ದೈಹಿಕವಾಗಿ ಲೈಂಗಿಕ ಕಿರುಕುಳ ನೀಡಿಲ್ಲ ಎಂದಿರುವುದನ್ನೇ ಅಕ್ಬರ್ ಅವರು ತಮ್ಮ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ಪ್ರಕಾರ, ಲೈಂಗಿಕ ದೌರ್ಜನ್ಯ ದೈಹಿಕವಾಗಿಯೇ ಇರಬೇಕಂತಿಲ್ಲ, ಮಾನಸಿಕವಾಗಿ ಲೈಂಗಿಕ ಕಿರುಕುಳ ನೀಡಿದರೂ ಅದು ಲೈಂಗಿಕ ದೌರ್ಜನ್ಯವೇ. ಆದರೆ, ಈ ಎಲ್ಲ ಮಹಿಳೆಯರ ಬಳಿ ಯಾವುದೇ ಸಾಕ್ಷ್ಯಗಳಿಲ್ಲ. ನ್ಯಾಯಾಲಯ ಈ ಎಲ್ಲ ಮಹಿಳೆಯರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಾ? ಎಲ್ಲ ಆರೋಪಗಳಿಗೆ ಸಾಕ್ಷ್ಯ ಕೇಳುವುದಾ ಅಥವಾ ಸಮಾಜಿಕ ನ್ಯಾಯವನ್ನು ಎಲ್ಲ ಸಂತ್ರಸ್ತರಿಗೆ ಒದಗಿಸುವುದಾ?

English summary
Twenty women journalists, many of have faced sexual harassment in the hands of MJ Akbar, are ready to testify against Akbar, junior minister at External Affairs and former senior journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X