ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾನ್ ರಿಟರ್ನ್ಸ್: ಭಾರತದಲ್ಲಿ ಛೋಟಾ ರಾಜನ್, ಟ್ವೀಟ್ ಪ್ರತಿಕ್ರಿಯೆ

By Mahesh
|
Google Oneindia Kannada News

ನವದೆಹಲಿ, ನ. 06: ಕೊಲೆ, ದರೋಡೆ, ಹಫ್ತಾ ವಸೂಲಿ, ಬೆದರಿಕೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಭೂಗತ ಜಗತ್ತಿನ ಪಾತಕಿ ಎನಿಸಿಕೊಂಡಿರುವ ಛೋಟಾ ರಾಜನ್ ನನ್ನು ಇಂಡೋನೇಷಿಯಾದಿಂದ ಭಾರತಕ್ಕೆ ಕರೆ ತರಲಾಗಿದೆ.

ಎರಡು ದಶಕಗಳ ನಂತರದ ಭಾರತ ನೆಲಕ್ಕೆ ಕಾಲಿರಿಸಿದ ಛೋಟಾ, ನೆಲವನ್ನು ಚುಂಬಿಸಿ ಧನ್ಯತೆ ಅನುಭವಿಸಿದ್ದಾನೆ. ಭಾರತಕ್ಕೆ ಬಂದ ಛೋಟಾ ರಾಜನ್ ಗೆ 'ಡಾನ್ ರಿಟರ್ನ್ಸ್' ಎಂದು ಟ್ವಿಟ್ಟರ್ ನಲ್ಲಿ ಕೆಲವರು ಸ್ವಾಗತಿಸಿದ್ದಾರೆ.

ಇಂಡೋನೇಷಿಯಾ ರಾಜಧಾನಿ ಬಾಲಿಯಿಂದ ಸಿಬಿಐ, ಮುಂಬೈ ಹಾಗೂ ನವದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ಭಾರೀ ಬಿಗಿಭದ್ರತೆ ನಡುವೆ ಪಾಲಂ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬೆಳಗ್ಗೆ 5.30ಕ್ಕೆ ಕರೆತಂದಿದ್ದಾರೆ.

ಛೋಟಾ ರಾಜನ್ ಸದ್ಯ ಸಿಬಿಐ ವಶದಲ್ಲಿದ್ದು, ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಲಿದ್ದಾರೆ. ಸದ್ಯಕ್ಕೆ ರಾಜನ್ ವಿರುದ್ಧ ಇರುವ ಎಲ್ಲಾ ಕೇಸುಗಳನ್ನು ಸಿಬಿಐ ವಶಕ್ಕೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಕಿರಜ್ ರಿಜಿಜು ಹೇಳಿದ್ದಾರೆ.

ರಾಜನ್ ಬರುವಾಗ ದೆಹಲಿಯ ಕೆಲವು ಪ್ರಮುಖ ರಸ್ತೆಗಳಲ್ಲಿ ಜೀರೋ ಟ್ರಾಫಿಕ್ (ಸಂಚಾರ ಮುಕ್ತ) ಒದಗಿಸಲಾಗಿತ್ತು. ಶಾರ್ಪ್ ಶೂಟರ್ಸ್, ಕಮಾಂಡೊ, ಎನ್‌ಎಸ್‌ಜಿ, ಶ್ವಾನದಳ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆ ನಡುವೆ ಸಿಬಿಐ ಕಚೇರಿಗೆ ಕರೆತರಲಾಗಿತ್ತು.

ಕಳೆದ ಅ.25ರಂದು ಛೋಟ ರಾಜನ್‌ನನ್ನು ಆಸ್ಟ್ರೇಲಿಯಾ ಮತ್ತು ಇಂಡೋನೇಷಿಯಾ ಪೊಲೀಸರ ಜಂಟಿ ಕಾರ್ಯಾಚರಣೆ ಫಲವಾಗಿ ಭಾರತದ ಮೋಸ್ಟ್ ವಾಂಟೆಡ್ ಡಾನ್ ರಾಜೇಂದ್ರ ಸದಾಶಿವ ನಿಕ್ಲಾಜೆ ಅಲಿಯಾಸ್ ಛೋಟಾ ರಾಜನ್‌ನನ್ನು ಬಂಧಿಸಲಾಗಿತ್ತು.

ಡಾನ್ ಛೋಟಾಗೆ ಹುಷಾರಿಲ್ಲ

ಡಾನ್ ಛೋಟಾಗೆ ಹುಷಾರಿಲ್ಲ

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಛೋಟ ರಾಜನ್‌ಗೆ ಎರಡು ಕಿಡ್ನಿಯೂ ಕೈ ಕೊಟ್ಟಿವೆ. ಆತ ತಿಂಗಳಲ್ಲಿ ಎರಡು ಬಾರಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೂಲಗಳ ಪ್ರಕಾರ, ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯ ಒಂದು ತಂಡ ಸಿಬಿಐ ಮುಖ್ಯ ಕಚೇರಿಗೆ ಆಗಮಿಸಿ ಆತನಿಗೆ ವೈದ್ಯಕೀಯ ಚಿಕಿತ್ಸೆ ನೀಡಲಿದೆ

 ಒಟ್ಟು 75 ಪ್ರಕರಣಗಳು ದಾಖಲಾಗಿವೆ

ಒಟ್ಟು 75 ಪ್ರಕರಣಗಳು ದಾಖಲಾಗಿವೆ

ದೆಹಲಿ, ಮುಂಬೈ, ಲಕ್ನೋ, ಅಹಮದಾಬಾದ್, ಪುಣೆ ಸೇರಿದಂತೆ ಮತ್ತಿತರ ಕಡೆ ಹಫ್ತ ವಸೂಲಿ, ಕೊಲೆ, ಸುಲಿಗೆ, ಬೆದರಿಕೆ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳು ದಾಖಲಾಗಿವೆ. 20 ಕೊಲೆ ಪ್ರಕರಣಗಳಲ್ಲೂ ಈತ ನೇರ ಶಾಮೀಲಾಗಿದ್ದಾನೆ. ಈತನ ಮೇಲೆ ಟಾಡಾ, ಮೋಕಾ ಸೇರಿದಂತೆ ಮತ್ತಿತರ ಶಿಕ್ಷೆ ವಿಧಿಸಲಾಗಿದೆ.

ಯಾವುದೇ ದೊಡ್ದ ಕೇಸ್ ಹಾಕಲ್ಲ ಬಿಡಿ

ಯಾವುದೇ ದೊಡ್ದ ಕೇಸ್ ಹಾಕಲ್ಲ ಬಿಡಿ, ಚಾಲಾಕಿಯಾಗಿ ಛೋಟಾ ಎಲ್ಲಾ ಕೇಸುಗಳಿಂದ ಹೊರಬರುತ್ತಾನೆ. ಎಲೆಕ್ಷನ್ ನಿಂತರೂ ಅಚ್ಚರಿಪಡಬೇಕಾಗಿಲ್ಲ.

ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದು ಸರಿಯಾಗಿದೆ

ಪ್ರಕರಣಗಳನ್ನು ಸಿಬಿಐಗೆ ವಹಿಸಿ ಸರ್ಕಾರ ಸರಿಯಾದ ಕ್ರಮ ಜರುಗಿಸಿದೆ. ಮುಂಬೈ ಪೊಲೀಸರ ವಶದಲ್ಲಿ ಸುರಕ್ಷಿತವಾಗಿರಲು ಸಾಧ್ಯವಿರಲಿಲ್ಲ.

ಮಾಧ್ಯಮಗಳು ಒಂದೆರಡು ದಿನ

ಮಾಧ್ಯಮಗಳು ಒಂದೆರಡು ದಿನ ಛೋಟಾ ಸುದ್ದಿ ಬಿಟ್ಟು ಏನು ತೋರಿಸಲ್ಲ. ಇಂದ್ರಾಣಿ ಕೇಸ್ ಆದಂತೆ ಇದು ಆಮೇಲೆ ಸಾಯುತ್ತದೆ.

ದಾವೂದ್ ಗೆ ಹೆದರಿ ಓಡಿದ ಡಾನ್ ಏನ್ಮಾಡ್ತಾನೆ?

ದಾವೂದ್ ಗೆ ಹೆದರಿ ಓಡಿದ ಡಾನ್ 20 ವರ್ಷ ನಂತರ ದಾವೂದ್ ಹಿಡಿಯಲು ನೆರವಾಗುತ್ತಾನಾ?

ಭಾರತದ ನೆಲ ಚುಂಬಿಸಿದ ಛೋಟಾ ರಾಜನ್

ದೆಹಲಿ ಬಂದ ತಕ್ಷಣ ಭಾರತದ ನೆಲ ಚುಂಬಿಸಿದ ಛೋಟಾ ರಾಜನ್

ಸಿಬಿಐ ಕಚೇರಿಯಲ್ಲಿ ಬಿಗಿ ಭದ್ರತೆ

ದೆಹಲಿಯ ಸಿಬಿಐ ಕಚೇರಿ ಸುತ್ತಾ ಮುತ್ತಾ ಬಿಗಿ ಭದ್ರತೆ.

English summary
Gangster Chhota Rajan lands in Delhi after being deported from Indonesia. All the 70 cases against him now transferred to CBI. High Security provided to Lodhi Colony Special Cell Office in Delhi. Here are the tweets about Chhota Rajan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X