ಫೋರ್ಜರಿ ಪ್ರಕರಣ: 20 ವರ್ಷ ನಂತರ ನಟಿಗೆ ಶಿಕ್ಷೆ ಪ್ರಕಟ!

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 21: ಫೋರ್ಜರಿ ಕೇಸ್ ಎದುರಿಸುತ್ತಿದ್ದ ಹಿಂದಿ ಕಿರುತೆರೆ ನಟಿಯೊಬ್ಬರು 20 ವರ್ಷಗಳ ಕಾಲ ಕಾನೂನು ಸಮರದಲ್ಲಿ ಸೋಲು ಅನುಭವಿಸಿದ್ದಾರೆ. ನಟಿ ಇಂದು ವರ್ಮ ಅವರ ವಿರುದ್ಧದ ಆರೋಪ ಸಾಬೀತಾಗಿದ್ದು, 3 ವರ್ಷಗಳ ಶಿಕ್ಷೆ ವಿಧಿಸಿ ದೆಹಲಿ ಕೋರ್ಟ್ ಆದೇಶ ಹೊರಡಿಸಿದೆ.

ಮೋಸ, ವಂಚನೆ, ಚೆಕ್ ದುರ್ಬಳಕೆ ಆರೋಪ ಹೊತ್ತಿದ್ದ ಇಂದು ವರ್ಮ ಅವರು 20 ಲಕ್ಷ ರು ದಂಡ ರೂಪದಲ್ಲಿ ಥಾಮಸ್ ಕುಕ್ ಇಂಡಿಯಾ ಪ್ರೈ, ಲಿಮಿಟೆಡ್ ಕಂಪನಿಗೆ ಕಟ್ಟಬೇಕಾಗಿದೆ. ಇದೇ ಸಂಸ್ಥೆಯಲ್ಲಿ ಈ ಮುಂಚೆ ಆಕೆ ಉದ್ಯೋಗಿಯಾಗಿದ್ದರು. ಇಂದು ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 419, 403, 467, 468, 471 ಹಾಗೂ 420 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

TV actress Indu Verma gets three-year jail in 1996 forgery case

42 ವರ್ಷ ವಯಸ್ಸಿನ ವರ್ಮ ಅವರು ಶಿವಾನಿ ಅರೋರಾ ಎಂಬ ಹೆಸರಿಟ್ಟುಕೊಂಡು 17.50 ಲಕ್ಷ ರು ಮೌಲ್ಯದ ಆಭರಣವನ್ನು ಖರೀದಿಸಿದ್ದರು. 1996ರ ಸೆಪ್ಟೆಂಬರ್ 6 ರಿಂದ ಅಕ್ಟೋಬರ್ 3 ರ ಅವಧಿಯಲ್ಲಿ ನಡೆದ ಈ ಅವ್ಯವಹಾರದಲ್ಲಿ ಅನೇಕ ಚೆಕ್ ಗಳನ್ನು ಆಕೆ ಫೋರ್ಜರಿ ಮಾಡಿದ್ದಾರೆ. ತಾನು ಉದ್ಯೋಗದಲ್ಲಿದ್ದ ಥಾಮಸ್ ಕುಕ್ ಸಂಸ್ಥೆ ಹೆಸರು, ಚೆಕ್ ದುರ್ಬಳಕೆ ಮಾಡಿಕೊಂಡಿರುವುದು ಸಾಬೀತಾಗಿದೆ. ಆದರೆ, ಸದ್ಯಕ್ಕೆ ವರ್ಮಾ ಅವರಿಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಅವಕಾಶವನ್ನು ಕೋರ್ಟ್ ನೀಡಿದೆ.

ಇಂದು ವರ್ಮಾ ಪರ ವಕೀಲ ರಿಯಾಜ್ ಅಹ್ಮದ್ ಭಟ್ ಅವರು ವಾದ ಮಂಡಿಸಿ, ಎರಡು ದಶಕಗಳ ಕಾಲ ಕೇಸ್ ಸಂಬಂಧವಾಗಿ ನನ್ನ ಕಕ್ಷಿದಾರರು ಬಹಳಷ್ಟು ಹಿಂಸೆ ಅನುಭವಿಸಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕೃತ್ಯಕ್ಕೂ ಮುನ್ನ ಯಾವುದೇ ಕ್ರಿಮಿನಲ್ ರೆಕಾರ್ಡ್ ಕೂಡಾ ಹೊಂದಿಲ್ಲ. ಹೀಗಾಗಿ, ಇಂದು ಅವರಿಗೆ ಶಿಕ್ಷೆಯಲ್ಲಿ ವಿನಾಯಿತಿ ನೀಡಬೇಕು ಎಂದು ಕೇಳಿಕೊಂಡಿದ್ದರು. ಆದರೆ, ಇಂದು ಅವರ ಶಿಕ್ಷೆ ಪ್ರಮಾಣ ತಗ್ಗಿಸಿದರೆ ಕೆಟ್ಟ ಸಂದೇಶ ಹೊರಡಿಸಿದಂತಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.


(ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New Delhi: A court here has sentenced TV actress Indu Verma to three years’ rigorous imprisonment in a 1996 forgery case.
Please Wait while comments are loading...