ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಬೆಂಬಲಕ್ಕೆ ನಿಂತು ಭಾರತದ ಕೆಂಗಣ್ಣಿಗೆ ಗುರಿಯಾದ ಟರ್ಕಿ, ಮಲೇಶಿಯಾ

|
Google Oneindia Kannada News

ನವದೆಹಲಿ, ಅಕ್ಟೋಬರ್ 21: ಉಗ್ರ ಚಟುವಟಿಕೆಗೆಂದು ಅಕ್ರಮವಾಗಿ ಸಾಗಣೆಯಾಗುತ್ತಿರುವ ಹಣವನ್ನು ನಿಯಂತ್ರಿಸುವ ಪ್ಯಾರಿಸ್ ಮೂಲದ FATFಸಂಸ್ಥೆಯು ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಕಳಿಸುವುದನ್ನು ತಡೆದ ಟರ್ಕಿ ಮತ್ತು ಮಲೇಶಿಯಾ ದೇಶಗಳ ನಡೆಯನ್ನು ಭಾರತ ವಿರೋಧಿಸಿದೆ.

Recommended Video

Indian Army Retaliate to Pakistan, which Try to Infiltrate Terrorists | Oneindia Kannada

ಭಯೋತ್ಪಾದನೆಯನ್ನು ನಿಯಂತ್ರಿಸುವಲ್ಲಿ ವಿಫಲವಾದ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು FATF ಮುಂದಾಗಿತ್ತು. ಆದರೆ ಚೀನಾ, ಟರ್ಕಿ ಮತ್ತು ಮಲೇಶಿಯಾಗಳ ಸಹಾಯದಿಂದ ಕಪ್ಪುಪಟ್ಟಿಗೆ ಸೇರುವ ಸಂದರ್ಭದಿಂದ ಪಾಕಿಸ್ತಾನ ಪಾರಾಗಿತ್ತು.

ಕಪ್ಪುಪಟ್ಟಿಗೆ ಹೋಗದಿದ್ದರೂ ಪಾಕಿಸ್ತಾನಕ್ಕೆ ಅಮೆರಿಕದಿಂದ ಭಾರೀ ಆಘಾತ!ಕಪ್ಪುಪಟ್ಟಿಗೆ ಹೋಗದಿದ್ದರೂ ಪಾಕಿಸ್ತಾನಕ್ಕೆ ಅಮೆರಿಕದಿಂದ ಭಾರೀ ಆಘಾತ!

ಇದೀಗ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಬೆಂಬಲಕ್ಕೆ ನಿಂತಿ ಟರ್ಕಿ ಮತ್ತು ಮಲೇಶಿಯಾಗಳನ್ನು ದೂರಿರುವ ಭಾರತ ಮಲೆಶಿಯಾ ಮತ್ತು ಟರ್ಕಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ.

Turckey And Malaysia Will Face Heat From India After Supporting Pakistan

ಈಗಾಗಲೇ ಟ್ವಿಟ್ಟರ್ ನಲ್ಲಿ boycottmalaysia ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಮಲೆಶಿಯಾ ವಸ್ತುಗಳನ್ನು ಬಳಸದಿರುವಂತೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ ಮಲೇಶಿಯಾದಿಂದ ಭಾರೀ ಪ್ರಮಾಣದಲ್ಲಿ ರಫ್ತಾಗುತ್ತಿದ್ದ ತಾಳೆ ಎಣ್ಣೆ (ಪಾಮ್ ಆಯ್ಲ್) ಯನ್ನೂ ರಫ್ತು ಮಾಡಿಕೊಳ್ಳದಿರಲು ಭಾರತ ನಿರ್ಧರಿಸಿದೆ.

ಪಾಕಿಸ್ತಾನಕ್ಕೆ ಕೊನೆಯ ವಾರ್ನಿಂಗ್, ಡಾರ್ಕ್ ಗ್ರೇ ಲಿಸ್ಟ್ ಶಿಕ್ಷೆ!ಪಾಕಿಸ್ತಾನಕ್ಕೆ ಕೊನೆಯ ವಾರ್ನಿಂಗ್, ಡಾರ್ಕ್ ಗ್ರೇ ಲಿಸ್ಟ್ ಶಿಕ್ಷೆ!

ಪಾಕಿಸ್ತಾನ ಕಪ್ಪುಪಟ್ಟಿಸೇರಬೇಕಾದರೆ ಮೂರಕ್ಕಿಂತ ಕಡಿಮೆ ದೇಶಗಳು ಮಾತ್ರ ಅದರ ಪರ ನಿಲ್ಲಬೇಕು. ಆದರೆ ಇದೀಗ ಚೀನಾ, ಮಲೇಶಿಯಾ ಮತ್ತು ಟರ್ಕಿ ದೇಶಗಳ ಬೆಂಬಲದಿಂದಾಗಿ ಕಪ್ಪುಪಟ್ಟಿಯ ಶಿಕ್ಷೆಯನ್ನು ಪಾಕಿಸ್ತಾನ ತಪ್ಪಿಸಿಕೊಂಡಿತ್ತು.

English summary
Turckey And Malaysia Will Face Heat From India After Supporting Pakistan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X