ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ, ಇದು ನಿಮ್ಮಿಂದ ಆಗಲ್ಲ ಎಂದು ಕಾಂಗ್ರೆಸ್ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಏಪ್ರಿಲ್ 25: ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರಿಕಾಗೋಷ್ಠಿ ನಡೆಸುತ್ತಾರೆ ಎಂಬ ಮಾಧ್ಯಮಗಳ ವರದಿಯನ್ನು ಬಿಜೆಪಿ ನಿರಾಕರಿಸಿದ ನಂತರ ಕಾಂಗ್ರೆಸ್ ಪಕ್ಷವು ಮೋದಿಯನ್ನು ಲೇವಡಿ ಮಾಡಿದೆ. ತನ್ನ ಅಧಿಕಾರಾವಧಿಯಲ್ಲಿ ಪತ್ರಿಕಾ ಗೋಷ್ಠಿಯನ್ನೇ ನಡೆಸದ ಮೋದಿಯನ್ನು ಟೀಕಿಸುತ್ತಿರುವ ಕಾಂಗ್ರೆಸ್, ಟ್ವಿಟ್ಟರ್ ನಲ್ಲಿ- "ತುಮ್ ಸೇ ನಾ ಹೋ ಪಾಯೇಗಾ" (ನಿಮ್ಮಿಂದ ಆಗಲ್ಲ) ಎಂದು ಹಾಕಿದೆ.

ಏಪ್ರಿಲ್ ಇಪ್ಪತ್ತಾರನೇ ತಾರೀಕು ವಾರಾಣಸಿಯಲ್ಲಿ ಪ್ರಧಾನಿ ಮೋದಿ ಪತ್ರಿಕಾ ಗೋಷ್ಠಿ ನಡೆಸುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆ ನಂತರ ಬಿಜೆಪಿಯಿಂದ ಸ್ಪಷ್ಟನೆ ನೀಡಿ, ಗುರುವಾರ ಅಥವಾ ಶುಕ್ರವಾರದಂದು ಯಾವುದೇ ಪತ್ರಿಕಾಗೋಷ್ಠಿ ನಿಗದಿ ಆಗಿಲ್ಲ ಎಂದು ತಿಳಿಸಿತ್ತು.

ಪ್ರಧಾನಿ ಮೋದಿ ಪುಂಗಿವೂದಿದ್ದನ್ನು ಕೇಳಿ ಸಾಕು ಸಾಕಾಗಿ ಹೋಗಿದೆ: ಚಿದಂಬರಂಪ್ರಧಾನಿ ಮೋದಿ ಪುಂಗಿವೂದಿದ್ದನ್ನು ಕೇಳಿ ಸಾಕು ಸಾಕಾಗಿ ಹೋಗಿದೆ: ಚಿದಂಬರಂ

ಮಾಧ್ಯಮಗಳ ವರದಿಯನ್ನು ರೀಟ್ವೀಟ್ ಮಾಡಿರುವ ಕಾಂಗ್ರೆಸ್, "ತುಮ್ ಸೇ ನಾ ಹೋ ಪಾಯೇಗಾ" ಎಂಬುದರ ಜತೆಗೆ ಹ್ಯಾಷ್ ಟ್ಯಾಗ್ #FekuModi ಎಂದು ಹಾಕಿದೆ. ಏಪ್ರಿಲ್ ಎರಡು ಹಾಗೂ ಇಪ್ಪತ್ತಾರನೇ ತಾರೀಕು ವಾರಾಣಸಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿ ಆಗಿತ್ತು. ನಾಮಪತ್ರ ಸಲ್ಲಿಸುವ ಸಲ್ಲಿಸುವ ಅಲ್ಲಿಗೆ ತೆರಳಬೇಕು.

Tum se na ho payega: Congress dig at BJP on reports of Narendra Modis press meet

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೇ ವಿಚಾರವನ್ನು ಎತ್ತಾಡಿ, ಮೋದಿಗೆ ಮಾಧ್ಯಮ ಅಂದರೆ ಭಯ ಎಂದಿದ್ದಾರೆ. ಏಪ್ರಿಲ್ ಎರಡನೇ ತಾರೀಕು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ, ಮೋದಿಗೆ ಏಕೆ ಪತ್ರಿಕಾ ಗೋಷ್ಠಿಗಳನ್ನು ಎದುರಿಸಲು ಭಯ ಎಂದು ಕೇಳುವಂತೆ ವರದಿಗಾರರಿಗೆ ಹೇಳಿದ್ದರು.

ಏಪ್ರಿಲ್ 26 ರಂದು ನಾಮಪತ್ರ ಸಲ್ಲಿಸಲಿರುವ ಪ್ರಧಾನಿ ಮೋದಿಏಪ್ರಿಲ್ 26 ರಂದು ನಾಮಪತ್ರ ಸಲ್ಲಿಸಲಿರುವ ಪ್ರಧಾನಿ ಮೋದಿ

ನೀವು ನನ್ನನ್ನು ಪ್ರಶ್ನೆ ಮಾಡುತ್ತೀರಿ. ಆದರೆ ಅವರಿಗೆ ಹೆದರುತ್ತೀರಿ. ಪ್ರಧಾನಿಗಳೇ ನಿಮಗೇಕೆ ಭಾರತದ ಜನರ ಬಗ್ಗೆ ಭಯ, ನಿಮಗೇಕೆ ಮಾಧ್ಯಮಗಳ ಬಗ್ಗೆ ಭಯ ಎಂದು ಕೇಳಿ. ಈ ಬಾರಿ ಚುನಾವಣೆಯಲ್ಲಿ ಅವರನ್ನು ಸೋಲಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

English summary
Congress on Wednesday took a swipe at the BJP minutes after the ruling party denied media reports of Prime Minister Narendra Modi holding a press conference in Varanasi. Often criticising the prime minister for not holding a press conference in his tenure, Congress took to Twitter with one-liner: "Tum se na ho payega (you will no be able to do it)".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X