• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತಕ್ಕೆ ಎಚ್ಚರಿಕೆ ನೀಡಿದ ಟ್ರಂಪ್: ಮನವಿ ತಿರಸ್ಕರಿಸಿದರೆ 'ಪ್ರತೀಕಾರ'

|

ದೆಹಲಿ, ಏಪ್ರಿಲ್ 7: ಸಾಂಕ್ರಾಮಿಕ ರೋಗ ಕೊರೊನಾ ವೈರಸ್‌ನಿಂದ ಹೊರಬರಲು ವಿಶ್ವದ ಬಹುತೇಕ ರಾಷ್ಟ್ರಗಳು ದೊಡ್ಡ ಹೋರಾಟವನ್ನೇ ಮಾಡುತ್ತಿದೆ. ಅದರಲ್ಲೂ 'ವಿಶ್ವದ ದೊಡ್ಡಣ್'ಣ ಎಂದು ಬೀಗುತ್ತಿದ್ದ ಅಮೆರಿಕ ಎಲ್ಲ ಪ್ರಯತ್ನ ಮಾಡಿ, ಪರಿಹಾರ ಸಿಗದೆ ಒದ್ದಾಡುತ್ತಿದೆ.

   RCB ಸ್ಪಿನ್ನರ್ ಚಾಹಲ್ ಈಗ ಮನೆಯಲ್ಲಿ ಏನು ಮಾಡುತ್ತಿದ್ದಾರೆ ? | Oneindia Kannada

   ಅಮೆರಿಕದಲ್ಲಿ 3.6 ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡಿದೆ. 10 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಏರಿಕೆ ನೋಡುತ್ತಿದ್ದರೆ ಅಮೆರಿಕ ಸ್ಥಿತಿ ಬಹಳ ಗಂಭೀರವಾಗುವ ಎಲ್ಲ ಲಕ್ಷಣಗಳಿವೆ.

   ಕೊರೊನಾ ವೈರಸ್ ಚಿಕಿತ್ಸೆಗೆ ಭಾರತದಲ್ಲಿ ಔಷಧಿ ಕೋರಿದ ಅಮೆರಿಕಾ

   ಈ ನಡುವೆ ಭಾರತದಲ್ಲಿ ಕೊರೊನಾ ಎದುರಿಸುತ್ತಿರುವ ರೀತಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿರುವ ಟ್ರಂಪ್, ಹೈಡ್ರಾಕ್ಸಿಕ್ಲೋರೋಕ್ವಿನ್ (ಮಲೇರಿಯಾ ತಡೆ ಔಷಧ) ಔಷಧ ನೀಡುವಂತೆ ಬೇಡಿಕೆಯಿಟ್ಟು ಮೋದಿ ಬಳಿ ಚರ್ಚಿಸಿದ್ದಾರೆ. ಭಾರತ ಪ್ರಧಾನಿ ಮೋದಿ ಬಳಿ ದೂರವಾಣಿಯಲ್ಲಿ ಮನವಿ ಮಾಡಿಕೊಂಡ ಡೊನಾಲ್ಡ್ ಟ್ರಂಪ್, ಈಗ ಭಾರತಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ನಮ್ಮ ಮನವಿಯನ್ನು ತಿರಸ್ಕರಿಸಿದರೆ ಪ್ರತಿಕಾರಕ್ಕೆ ಸಿದ್ಧ ಎಂದು ಸವಾಲು ಎಸೆದಿದ್ದಾರೆ. ಮುಂದೆ ಓದಿ....

   ಔಷಧಕ್ಕಾಗಿ ಮನವಿ ಮಾಡಿದ ಟ್ರಂಪ್

   ಔಷಧಕ್ಕಾಗಿ ಮನವಿ ಮಾಡಿದ ಟ್ರಂಪ್

   ಭಾನುವಾರ ಬೆಳಿಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ತೆಗೆದುಕೊಳ್ಳುತ್ತಿರುವ ಕ್ರಮ ಶ್ಲಾಘಿಸಿದ ಟ್ರಂಪ್ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ Hydroxychloroquine (ಮಲೇರಿಯಾ ತಡೆ ಔಷಧ) ಔಷಧವನ್ನು ರಫ್ತು ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಪ್ರಧಾನಿ ಮೋದಿ ಭರವಸೆ ಕೊಟ್ಟಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

   ಭಾರತಕ್ಕೆ ಎಚ್ಚರಿಕೆ ನೀಡಿದ ಟ್ರಂಪ್

   ಈ ಕುರಿತು ಅಮೆರಿಕದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಟ್ರಂಪ್, ಭಾರತಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ''ನಾನು ಭಾರತದ ಪ್ರಧಾನಿ ಬಳಿ ಭಾನುವಾರ ಮಾತನಾಡಿದ್ದೇನೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಕ್ಕಾಗಿ ಮನವಿ ಮಾಡಿದ್ದೇನೆ, ಒಂದು ವೇಳೆ ಭಾರತ ಆ ಔಷಧ ನೀಡಿದ್ರೆ ಸಂತೋಷ. ಕೊಡಲು ನಿರಾಕರಿಸಿದರೆ ಪರವಾಗಿಲ್ಲ. ಆದರೆ ಅದಕ್ಕೆ ಪ್ರತಿಕಾರವೂ ಇರಬಹುದು. ಏಕೆ ಇರಬಾರದೇ?'' ಎಂದಿದ್ದಾರೆ.

   ತನ್ನದೇ ಪ್ರಜೆಗಳ ಮೇಲೆ ಮುನಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

   ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ನಿಷೇಧ

   ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ನಿಷೇಧ

   ಮಾರ್ಚ್ 25 ರಂದು ಭಾರತದ ವಿದೇಶಾಂಗ ವ್ಯಾಪಾರ ನಿರ್ದೇಶನಾಲಯವು ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡುವುದನ್ನು ನಿಷೇಧಿಸಿದೆ. ಆದರೆ ಮಾನವೀಯ ಆಧಾರದ ಮೇಲೆ ಕೆಲವು ಸಾಗಣೆಯನ್ನು ಕೇಸ್-ಬೈ-ಕೇಸ್ ಆಧಾರದ ಮೇಲೆ ಅನುಮತಿಸಬಹುದು ಎಂದು ಹೇಳಿದೆ. ಕೊವಿಡ್ ಹರಡುತ್ತಿರುವ ಈ ಸಂದರ್ಭದಲ್ಲಿ ಭಾರತಕ್ಕೆ ಔಷಧ ಪ್ರಮಾಣದಲ್ಲಿ ಕೊರತೆಯಾಗಬಾರದು ಎಂಬ ಕಾರಣಕ್ಕೆ ಭಾರತ ಸರ್ಕಾರ ಈ ಆದೇಶ ಹೊರಡಿಸಿತ್ತು.

   ಟ್ರಂಪ್ ಮನವಿಗೆ ಮೋದಿ ಉತ್ತರವೇನು?

   ಟ್ರಂಪ್ ಮನವಿಗೆ ಮೋದಿ ಉತ್ತರವೇನು?

   ಡೊನಾಲ್ಡ್ ಟ್ರಂಪ್ ಹಾಗೂ ಅಮೆರಿಕ ಜೊತೆ ಉತ್ತಮ ಬಾಂಧವ್ಯ ಕಾಪಾಡಿಕೊಂಡಿರುವ ನರೇಂದ್ರ ಮೋದಿ, ಯುಎಸ್‌ಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ರಫ್ತು ಮಾಡುವ ಬಗ್ಗೆ ಸ್ಪಷ್ಟ ನಿರ್ಧರ ಪ್ರಕಟಿಸಿಲ್ಲ. ದೇಶದಲ್ಲಿರುವ ಸ್ಥಿತಿ ಬಗ್ಗೆ ಮೊದಲು ಗಮನ ಕೊಡಬೇಕಾಗಿರುವ ಒತ್ತಡದಲ್ಲಿರುವ ಮೋದಿ, ಈ ವಿಷಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಪ್ರಮುಖ ವಿಚಾರವಾಗಿದೆ.

   ಕೊರೊನಾ ವಿರುದ್ಧ ಹೋರಾಟ; ಭಾರತಕ್ಕೆ 20 ಕೋಟಿ ಕೊಟ್ಟ ಅಮೆರಿಕಾ

   ಅಸಹಾಯಕತೆ ಹೊರಹಾಕುತ್ತಿದ್ಯಾ ಅಮೆರಿಕ?

   ಅಸಹಾಯಕತೆ ಹೊರಹಾಕುತ್ತಿದ್ಯಾ ಅಮೆರಿಕ?

   ವಿಶ್ವದ ಬಲಿಷ್ಠ ರಾಷ್ಟ್ರ ಎಂದು ಬೀಗುತ್ತಿದ್ದ ಅಮೆರಿಕ, ಈಗ ಕೊವಿಡ್ ರೋಗದ ಎದುರು ಹೋರಾಡುವುದಲ್ಲಿ ಕಷ್ಟಪಡುತ್ತಿದೆ. ದಿನದಿಂದ ದಿನಕ್ಕೆ ಯುಎಸ್‌ನಲ್ಲಿ ಸಾವಿನ ಸಂಖ್ಯೆ ಏರುತ್ತಲೆ ಇದೆ. ಸಹಜವಾಗಿ ಇದರಿಂದ ಆತಂಕಕ್ಕೆ ಒಳಗಾಗಿರುವ ಟ್ರಂಪ್ ಸರ್ಕಾರ, ಇತರೆ ದೇಶಗಳ ಮೇಲೆ ಅವಲಂಬಿತವಾಗಬೇಕಾದ ಸ್ಥಿತಿ ನಿರ್ಮಾಣವಾಗಲಿದ್ಯಾ ಎಂಬ ಅನುಮಾನ ಕಾಡುತ್ತಿದೆ.

   English summary
   America President Donald Trump talks of 'retaliation' if India turns down Covid19 drug request.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X