ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿನಲ್ಲಿ ಟಿಆರ್‌ಎಸ್‌ ಆಕ್ರೋಶ: ರೈತರ ವಿಚಾರದಲ್ಲಿ ಬಿಜೆಪಿ ಎಡವಿತೇ?

|
Google Oneindia Kannada News

ನವದೆಹಲಿ, ಡಿಸೆಂಬರ್‌ 03: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ 2014 ರಲ್ಲಿ ಆರಂಭವಾದ ಬಳಿಕ ಸಂಸತ್ತಿನಲ್ಲಿ ತಟಸ್ಥವಾಗಿಯೇ ಇದ್ದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಈಗ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಗಮನಾರ್ಹ ಪ್ರತಿಭಟನಾಕಾರರಲ್ಲಿ ಒಂದು ಪ್ರಮುಖ ಪಕ್ಷವಾಗಿದೆ.

ಕೇಂದ್ರವು ತೆಲಂಗಾಣದಿಂದ ಭತ್ತವನ್ನು ಖರೀದಿಸಬೇಕು. ಹಾಗೆಯೇ ಭಾರತೀಯ ಆಹಾರ ನಿಗಮ (ಎಫ್‌ಸಿಐ) ರಾಜ್ಯದಿಂದ ಖಾರಿಫ್ ಮತ್ತು ರಬಿ ಋತುವಿನಲ್ಲಿ ಪ್ರತಿ ವರ್ಷ ಎಷ್ಟು ಭತ್ತವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿ ಟಿಆರ್‌ಎಸ್ ಸಂಸದರು ಬಾವಿಗೆ ಇಳಿದಿದ್ದಾರೆ.

ಬಂಪರ್ ಫಸಲು ರಾಜ್ಯದಲ್ಲಿ ಭತ್ತದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ನಡುವೆ ಪ್ರತಿಪಕ್ಷಗಳು ಈ ವಿಚಾರದಲ್ಲೇ ಹಿಡಿತವನ್ನು ಸಾಧಿಸಿಕೊಂಡಿದೆ. ಸಂಸತ್ತಿನಲ್ಲಿ ಟಿಆರ್‌ಎಸ್‌ ಆಂದೋಲನಕ್ಕೆ ಮುಂದಾಗಿದೆ. ಈ ನಡುವೆ ಕಳೆದ ತಿಂಗಳು ಹುಜೂರಾಬಾದ್ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲು ಲಭಿಸಿದೆ ಎಂಬುವುದನ್ನು ನಾವು ಗಮನಿಸಬಹುದು. ಇನ್ನು ಕೇಂದ್ರದಲ್ಲಿ ಬಿಜೆಪಿಯೊಂದಿವೆ ಯಾವುದೇ ಮನಸ್ತಾಪ, ಭಿನ್ನಾಭಿಪ್ರಾಯ ಇಲ್ಲ ಎಂದು ಟಿಆರ್‌ಎಸ್ ನಾಯಕರು ಹೇಳಿಕೊಂಡಿದ್ದಾರೆ. ಆದರೆ ತೆಲಂಗಾಣದಲ್ಲಿ ಮಾತ್ರ ನಡೆಯುತ್ತಿರುವ ಎಲ್ಲಾ ಘಟನೆಗಳು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ತಮ್ಮ ನಿಲುವಿನ ಬಗ್ಗೆ ಮರು ಚಿಂತನೆ ಮಾಡುವ ಒತ್ತಡವನ್ನು ಹೇರಿದಂತೆ ಕಂಡಿದೆ.

ಸಂಸತ್‌ನಲ್ಲಿ ಟಿಆರ್‌ಎಸ್‌ ಪ್ರತಿಭಟನೆಯಿಂದ ಬಿಜೆಪಿಗೆ ಪೆಟ್ಟು

ಸಂಸತ್‌ನಲ್ಲಿ ಟಿಆರ್‌ಎಸ್‌ ಪ್ರತಿಭಟನೆಯಿಂದ ಬಿಜೆಪಿಗೆ ಪೆಟ್ಟು

ಸಂಸತ್‌ನಲ್ಲಿ ಟಿಆರ್‌ಎಸ್‌ ಪ್ರತಿಭಟನೆಯಿಂದ ತೆಲಂಗಾಣದ ಬಿಜೆಪಿಗೆ ಪೆಟ್ಟು ಬೀಳಲಿದೆ ಎಂದು ಟಿಆರ್‌ಎಸ್‌ ಸಂಸದರು ಹೇಳುತ್ತಾರೆ. ಟಿಆರ್‌ಎಸ್‌ನ ಹಿರಿಯ ನಾಯಕ ಮತ್ತು ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಮಾತನಾಡಿ, "ಸಂಸತ್ತಿನಲ್ಲಿ ಪಕ್ಷದ ಪ್ರತಿಭಟನೆಗಳು ತೆಲಂಗಾಣದಲ್ಲಿ ಬಿಜೆಪಿ ಮೇಲೆ ಭಾರಿ ಪರಿಣಾಮ ಬೀರಲಿದೆ," ಎಂದು ಹೇಳಿದ್ದಾರೆ. "ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಮತ್ತು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ತೆಲಂಗಾಣದಿಂದ ಪ್ರತಿ ಭತ್ತದ ಧಾನ್ಯವನ್ನು ಕೇಂದ್ರವು ಖರೀದಿಸಲಿದೆ ಎಂದು ಭರವಸೆ ನೀಡಿದ್ದಾರೆ. ಆದರೆ ಸಂಸತ್ತಿನಲ್ಲಿ ಕೃಷಿ ಸಚಿವ ಪಿಯೂಷ್ ಗೋಯಲ್ ಇನ್ನು ಮುಂದೆ ಭತ್ತವನ್ನು ಖರೀದಿಸುವುದಿಲ್ಲ ಎಂದಿದ್ದಾರೆ. ಬಿಜೆಪಿ ನಾಯಕರ ದ್ವಂದ್ವ ನಿಲುವನ್ನು ನಾವು ಬಯಲು ಮಾಡುತ್ತಿದ್ದೇವೆ. ಬಿಜೆಪಿಗೆ ತಕ್ಕ ಪಾಠ ಕಲಿಸುವವರೆಗೆ ನಮ್ಮ ಸಂಸದರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹಿಂದೆ ಸರಿಯುವುದಿಲ್ಲ," ಎಂದು ಹೇಳಿದರು.

ರೈತರ ಬಗ್ಗೆ ಬಿಜೆಪಿ ಕಾಳಜಿ ಸುಳ್ಳು ಎಂದು ನಾವು ಸಾಬೀತು ಮಾಡುತ್ತೇವೆ

ರೈತರ ಬಗ್ಗೆ ಬಿಜೆಪಿ ಕಾಳಜಿ ಸುಳ್ಳು ಎಂದು ನಾವು ಸಾಬೀತು ಮಾಡುತ್ತೇವೆ

ಇನ್ನು ಲೋಕಸಭೆಯಲ್ಲಿ ಪಕ್ಷದ ಉಸ್ತುವಾರಿಯನ್ನು ಮುನ್ನಡೆಸುತ್ತಿರುವ ಟಿಆರ್‌ಎಸ್ ಸಂಸದ ನಾಮಾ ನಾಗೇಶ್ವರ ರಾವ್ ಮಾತನಾಡಿ, "ಬಿಜೆಪಿ ರೈತರ ಮೇಲೆ ಇರುವ ಕಾಳಜಿ ಎಲ್ಲವೂ ಸುಳ್ಳು ಎಂದು ನಾವು ಸಾಬೀತು ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ನಡುವೆ, "ಹೊಸ ಮತ್ತು ಸಣ್ಣ ರಾಜ್ಯವಾಗಿರುವ ತೆಲಂಗಾಣ ಉದ್ದೇಶಪೂರ್ವಕವಾಗಿ ಕೇಂದ್ರದೊಂದಿಗೆ ಸಂಘರ್ಷರಹಿತ ವಿಧಾನವನ್ನು ಆಯ್ಕೆ ಮಾಡಿಕೊಂಡಿದೆ. ಆದರೆ ಬಿಜೆಪಿಯು ನಮ್ಮ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ," ಎಂದು ಕೂಡಾ ಟಿಆರ್‌ಎಸ್‌ನ ಹಿರಿಯ ನಾಯಕ ಮತ್ತು ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಆರೋಪ ಮಾಡಿದ್ದಾರೆ.

ತೆಲಂಗಾಣದಲ್ಲಿ ಭತ್ತ ಬೆಲೆ ಹೆಚ್ಚಳ

ತೆಲಂಗಾಣದಲ್ಲಿ ಭತ್ತ ಬೆಲೆ ಹೆಚ್ಚಳ

ಟಿಆರ್‌ಎಸ್‌ಗೆ ರಕ್ಷಣಾತ್ಮಕ ಅಂಶವೆಂದರೆ, ಭತ್ತದ ಉಲ್ಬಣವು ತನ್ನ ಸರ್ಕಾರದ ಬೃಹತ್ ನೀರಾವರಿ ಯೋಜನೆಗಳು, ರೈತ ಬಂಧು ರೈತ ಕಲ್ಯಾಣ ಯೋಜನೆ ಆಗಿದೆ. ತೆಲಂಗಾಣ ಕೃಷಿ ಕ್ರಿಯಾ ಯೋಜನೆ, 2021-22, ಭತ್ತದ ಉತ್ಪಾದನೆಯು 2019-20 ರಿಂದ 2020-21 ರವರೆಗೆ 29.9% ರಷ್ಟು ಹೆಚ್ಚಾಗಿದೆ ಎಂದು ತೋರಿಸುತ್ತದೆ. 2018-19 ರವರೆಗೆ, ಎಫ್‌ಸಿಐ ಸ್ವಾಧೀನಪಡಿಸಿದ್ದರೂ ಕೂಡಾ ಈ ವರ್ಷ, ತೆಲಂಗಾಣ ರೈತರು ದಾಖಲೆಯ 1.40 ಕೋಟಿ ಮೆಟ್ರಿಕ್‌ ಟನ್‌ ಉತ್ಪಾದಿಸಿದ್ದಾರೆ. ಎಫ್‌ಸಿಐ 60 ಲಕ್ಷ ಮೆಟ್ರಿಕ್‌ಟನ್‌ಗಿಂತ ಹೆಚ್ಚು ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ ಈ ಬಳಿಕ ರಾಜ್ಯವು 2,000 ಕೋಟಿ ರೂಪಾಯಿಗಳನ್ನು 92 ಲಕ್ಷ ಟನ್‌ಗಳನ್ನು ಖರೀದಿಸಲು ಮುಂದಾಗಿದೆ. ಇದರು ರೈತರಿಗೆ ತೀವ್ರ ಸಂಕಷ್ಟವನ್ನು ಉಂಟು ಮಾಡಿದೆ.

Recommended Video

ಓಮಿಕ್ರಾನ್ ರೂಪಾಂತರ, ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. | Oneindia Kannada | Oneindia Kannada
ಹೆಚ್ಚು ಭತ್ತ ಬೆಳೆಯದಂತೆ ರೈತರಿಗೆ ಎಚ್ಚರಿಕೆ!

ಹೆಚ್ಚು ಭತ್ತ ಬೆಳೆಯದಂತೆ ರೈತರಿಗೆ ಎಚ್ಚರಿಕೆ!

ಈ ಪರಿಸ್ಥಿತಿಯ ಹಿನ್ನೆಲೆಯಿಂದಾಗಿ ಸಿಎಂ ಚಂದ್ರಶೇಖರ ರಾವ್, ರೈತರಿಗೆ ಹೆಚ್ಚು ಭತ್ತ ಬೆಳೆಯದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಈ ಜೂನ್‌ನಲ್ಲಿ, ಭತ್ತದ ಬಿತ್ತನೆಯು ಆತ್ಮಹತ್ಯೆಗೆ ಸಮಾನವಾದುದ್ದು ಎಂದು ರೈತರಿಗೆ ತಿಳಿಸಿದ್ದಾರೆ. "ಭತ್ತ ಬೆಳೆಯು ಅಧಿಕವಾದ ಕಾರಣದಿಂದಾಗಿ ಅಕ್ಕಿಯ ಬೆಲೆಗಳು ಕುಸಿಯಬಹುದು," ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ಇದು ರೈತ ಸಂಘಟನೆಗಳಿಂದ ಪ್ರತಿಭಟನೆಗೆ ಕಾರಣವಾಯಿತು. ಸೆಪ್ಟೆಂಬರ್‌ನಲ್ಲಿ, ಭತ್ತದ ಬೀಜಗಳ ಮಾರಾಟವನ್ನು ತಡೆಯಲು ಬೀಜ ಪೂರೈಕೆದಾರರಿಗೆ ತಿಳಿಸಲು ಜಿಲ್ಲಾಧಿಕಾರಿಗಳಿಗೆ ಸದ್ದಿಲ್ಲದೆ ಸೂಚನೆಯನ್ನು ಕೂಡಾ ನೀಡಲಾಗಿತ್ತು. ಈ ನಿಟ್ಟಿನಲ್ಲಿ ಟಿಆರ್‌ಎಸ್ ಪಾಲಿಟ್‌ಬ್ಯುರೊ ಸದಸ್ಯ ಬಿ ವಿನೋದ್ ಮಾತನಾಡಿ, "ಕೇಂದ್ರದಿಂದ ಬಂದ ವ್ಯತಿರಿಕ್ತ ಸಂಕೇತಗಳ ಪರಿಣಾಮವೇ ಈ ಬಿಕ್ಕಟ್ಟು ಉಂಟಾಗಿದೆ," ಎಂದು ಆರೋಪ ಮಾಡಿದ್ದಾರೆ. "ನೀರಾವರಿ ಯೋಜನೆಗಳಿಂದಾಗಿ ನೀರು ಲಭ್ಯವಿದ್ದು, ಬಂಪರ್ ಭತ್ತವನ್ನು ಉತ್ಪಾದಿಸುತ್ತಿದ್ದೇವೆ. ನಾವು ಭತ್ತವನ್ನು ಉತ್ಪಾದಿಸುವುದನ್ನು ಮುಂದುವರಿಸಬೇಕೇ ಅಥವಾ ಬೇಡವೇ? ಸ್ಪಷ್ಟತೆ ಇಲ್ಲ," ಎಂದಿದ್ದಾರೆ.

English summary
TRS MPs stage walk out in Rajya Sabha over parboiled rice procurement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X