ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ, ಮಣಿಪುರದ ಬಳಿಕ ಮತ್ತೊಂದು ರಾಜ್ಯ ಕೊರೊನಾ ಮುಕ್ತ

|
Google Oneindia Kannada News

ದೆಹಲಿ, ಏಪ್ರಿಲ್ 24: ದೇಶದಲ್ಲಿ ಗಂಟೆ ಗಂಟೆಗೂ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೆ ಇದೆ. ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದ್ದು, ಆತಂಕ ಹೆಚ್ಚಿಸುತ್ತಿದೆ. ಮತ್ತೊಂದೆಡೆ ಡೆಡ್ಲಿ ಕೊರೊನಾದಿಂದ ಕೆಲವು ರಾಜ್ಯಗಳು ಮುಕ್ತವಾಗಿದೆ ಎನ್ನುವುದು ಸಂತಸದ ವಿಚಾರ.

ಗೋವಾ ಬಳಿಕ ಈಗ ತ್ರಿಪುರ ರಾಜ್ಯ ಕೊರೊನಾ ವೈರಸ್ ಮುಕ್ತ ರಾಜ್ಯ ಎಂದು ಘೋಷಿಸಿಕೊಂಡಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಸ್ಪಷ್ಟಪಡಿಸಿದ್ದು, 'ಕೊರೊನಾ ಸೋಂಕಿತರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ, ಈಗ ನಮ್ಮ ರಾಜ್ಯದಲ್ಲಿ ಯಾವುದೇ ಕೇಸ್ ಇಲ್ಲ' ಎಂದು ಮಾಹಿತಿ ನೀಡಿದ್ದಾರೆ.

ಕೊರೊನಾ ಮುಕ್ತವಾದ ತ್ರಿಪುರ

ತ್ರಿಪುರದಲ್ಲಿ ಈವರೆಗೂ ಎರಡು ಕೇಸ್ ಪತ್ತೆಯಾಗಿತ್ತು. ಇಬ್ಬರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದ್ದು, ಅವರಿಬ್ಬರನ್ನು ಐಸೋಲೇಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೀಗ, ಆ ಇಬ್ಬರು ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಕುರಿತು ಸ್ವತಃ ಸಿಎಂ ಮಾಹಿತಿ ನೀಡಿದ್ದಾರೆ.

ಹೋರಾಟದಲ್ಲಿ ಗೆದ್ದ ಗೋವಾ: ಕೊರೊನಾ ಮುಕ್ತ ರಾಜ್ಯಹೋರಾಟದಲ್ಲಿ ಗೆದ್ದ ಗೋವಾ: ಕೊರೊನಾ ಮುಕ್ತ ರಾಜ್ಯ

ಮೊದಲ ಕೊರೊನಾ ಮುಕ್ತ ರಾಜ್ಯ ಗೋವಾ

ಮೊದಲ ಕೊರೊನಾ ಮುಕ್ತ ರಾಜ್ಯ ಗೋವಾ

ಇದಕ್ಕೂ ಮುಂಚೆ ಗೋವಾ ಕೊರೊನಾ ಮುಕ್ತ ರಾಜ್ಯ ಎಂದು ಪ್ರಕಟಿಸಿಕೊಂಡಿತ್ತು. ಗೋವಾದಲ್ಲಿ ಒಟ್ಟು 7 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಬಳಿಕ, ಆ ಏಳು ಜನರು ಸೋಕಿನಿಂದ ಚೇತರಿಸಿಕೊಂಡಿದ್ದರು. ಈಗ ಗೋವಾದಲ್ಲೂ ಯಾವುದೇ ಸೋಂಕಿತ ಪ್ರಕರಣ ಇಲ್ಲ.

ಮಣಿಪುರ ಎರಡನೇ ಕೊರೊನಾ ಮುಕ್ತ ರಾಜ್ಯ

ಮಣಿಪುರ ಎರಡನೇ ಕೊರೊನಾ ಮುಕ್ತ ರಾಜ್ಯ

ಗೋವಾ ಬಳಿಕ ಮಣಿಪುರ ರಾಜ್ಯ ಕೊರೊನಾ ಮುಕ್ತವಾಗಿತ್ತು. ಬ್ರಿಟನ್‌ನಿಂದ ಮರಳಿದ್ದ 23 ವರ್ಷದ ಮಹಿಳೆ ಮತ್ತು ದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್‌ನಲ್ಲಿ ಪಾಲ್ಗೊಂಡಿದ್ದ ಒಬ್ಬ ವ್ಯಕ್ತಿಯಲ್ಲಿ ಸೋಂಕು ವರದಿಯಾಗಿತ್ತು. ಈ ಇಬ್ಬರು ಸೋಂಕಿನಿಂದ ಚೇತರಿಸಕೊಂಡಿದ್ದು, ಮಣಿಪುರದಲ್ಲೂ ಸದ್ಯಕ್ಕೆ ಯಾವುದೇ ಕೊರೊನಾ ಕೇಸ್ ಇಲ್ಲ.

ಗೋವಾ ಬಳಿಕ ದೇಶದ ಮತ್ತೊಂದು ರಾಜ್ಯ ಕೊರೊನಾ ಮುಕ್ತಗೋವಾ ಬಳಿಕ ದೇಶದ ಮತ್ತೊಂದು ರಾಜ್ಯ ಕೊರೊನಾ ಮುಕ್ತ

ಅರುಣಾಚಲ ಪ್ರದೇಶದಲ್ಲೂ ಯಾವುದೇ ಕೇಸ್ ಇಲ್ಲ

ಅರುಣಾಚಲ ಪ್ರದೇಶದಲ್ಲೂ ಯಾವುದೇ ಕೇಸ್ ಇಲ್ಲ

ಗೋವಾ, ಮಣಿಪುರ ಹಾಗೂ ತ್ರಿಪುರ ರಾಜ್ಯ ಸರ್ಕಾರಗಳು ಅಧಿಕೃತವಾಗಿ ಕೊರೊನಾ ಮುಕ್ತ ಎಂದು ಹೇಳಿದೆ. ಸದ್ಯಕ್ಕೆ ಇಲ್ಲಿ ಯಾವುದೇ ಕೊರೊನಾ ಕೇಸ್ ಇಲ್ಲ. ಮುಂದಿನ ದಿನದಲ್ಲಿ ಮತ್ತೆ ಬಂದರೂ ಅಚ್ಚರಿ ಇಲ್ಲ. ಇನ್ನು ಅರುಣಾಚಲ ಪ್ರದೇಶದಲ್ಲಿ ಒಂದು ಕೇಸ್ ಪತ್ತೆಯಾಗಿತ್ತು. ಈಗ ಆ ವ್ಯಕ್ತಿ ಚೇತರಿಕೆ ಕಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಬಹುಶಃ ಇದು ನಿಜವಾದರೇ, ಅರುಣಾಚಲ ಪ್ರದೇಶವೂ ಕೊರೊನಾ ಮುಕ್ತ ರಾಜ್ಯವಾಗಲಿದೆ.

English summary
Tripura becomes second state Corona-free in Northeastern region, 2nd patient tests negative again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X