ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಎ ಪ್ರತಿಭಟನೆ: ನೀವು ದೆಹಲಿಯಲ್ಲಿದ್ದರೆ ಈ ರಸ್ತೆಗಳಲ್ಲಿ ಸಂಚರಿಸಬೇಡಿ

|
Google Oneindia Kannada News

ನವದೆಹಲಿ, ಫೆಬ್ರವರಿ 25: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟದ ಕಾವು ದೆಹಲಿಯಲ್ಲಿ ಹೆಚ್ಚಾಗುತ್ತಿದೆ.

ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಕಲ್ಲು ತೂರಾಟ, ಹಿಂಸಾಚಾರ ಮುಗಿಲುಮುಟ್ಟಿದ್ದು, ಪೊಲೀಸ್ ಕಾನ್‌ಸ್ಟೆಬಲ್ ಸೇರಿ ಐದು ಮಂದಿ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಎರಡು ಬಾರಿ ಕಲ್ಲು ತೂರಾಟ ನಡೆದಿದೆ. ಒಟ್ಟು 50ಕ್ಕೂಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ದೆಹಲಿಯಲ್ಲಿ ನಡೆದ ಘರ್ಷಣೆಯಲ್ಲಿ ಒಬ್ಬ ಪೊಲೀಸ್ ಸೇರಿ ಐವರು ಸಾವುದೆಹಲಿಯಲ್ಲಿ ನಡೆದ ಘರ್ಷಣೆಯಲ್ಲಿ ಒಬ್ಬ ಪೊಲೀಸ್ ಸೇರಿ ಐವರು ಸಾವು

ಟ್ರಾಫಿಕ್ ಜಾಮ್ ವಿಪರೀತವಾಗುತ್ತಿರುವ ಕಾರಣ ಈ ರಸ್ತೆಗಳನ್ನು ಬಳಸದಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.ದೆಹಲಿ ಕಂಟೋನ್ಮೆಂಟ್, ಎಸ್‌ಪಿ ಮಾರ್ಗ, ದೆಹಲಿ-ಗುರ್‌ಗಾಂವ್(ಎನ್‌ಎಚ್‌48)ಡೌಲಾ, ಚಾಣಕ್ಯಪುರಿ ರಸ್ತೆಯಲ್ಲಿ ಸಂಚರಿಸದಂತೆ ಮನವಿ ಮಾಡಲಾಗಿದೆ.

Traffic Jam Delhi Cops Warns To Avoid These Roads

ಫೆಬ್ರವರಿ 25ರಂದು ಸಂಜೆ 4 ಗಂಟೆ ಸುಮಾರಿಗೆ ಮೋತಿ ಬಾಗ್, ಚಾಣಕ್ಯಪುರಿ, ಇಂಡಿಯಾ ಗೇಟ್, ಐಟಿಓ, ದೆಹಲಿ ಗೇಟ್ ಬಳಿ ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.

+91-11-25844444 ಪೊಲೀಸ್ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಯ ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದು, ಸಂಜೆ 7.30ಕ್ಕೆ ಅಮೆರಿಕಕ್ಕೆ ವಾಪಸಾಗಲಿದ್ದಾರೆ. ಕೇವಲ ಕಲ್ಲು ತೂರಾಟ ಮಾತ್ರವಲ್ಲದೆ ಸೋಮವಾರ ವ್ಯಕ್ತಿಯೊಬ್ಬ ಎಂಟು ಸುತ್ತು ಗುಂಡು ಹಾರಿಸಿದ್ದಾನೆ.

English summary
The Delhi Traffic Police have issued an advisory to commuters to avoid some roads and warned of heavy traffic jams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X