ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ ಕ್ಲೀನ್ ಚಿಟ್ ವಿರೋಧಿಸಿ ಸಭೆಯಿಂದ ಹೊರಗುಳಿದ ಚುನಾವಣಾ ಆಯುಕ್ತ

|
Google Oneindia Kannada News

ನವದೆಹಲಿ, ಮೇ 18: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಚುನಾವಣಾ ಆಯೋಗದ ಸಮಿತಿಯು ಮೋದಿ, ಅಮಿತ್ ಶಾ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ವಿರೋಧಿಸಿ ಸಮಿತಿಯ ಸದಸ್ಯರಾಗಿದ್ದ ಚುನಾವಣಾ ಆಯುಕ್ತ ಅಶೋಕ್ ಲಾವಾಸಾ ಅವರು ಸಮಿತಿಯ ಮುಂದಿನ ಸಭೆಗಳಿಂದ ಹೊರಗುಳುದಿದ್ದು, ಮೇ 04 ರಂದು ಚುನಾವಣಾ ಮುಖ್ಯ ಆಯುಕ್ತರಿಗೆ ಈ ಬಗ್ಗೆ ಪತ್ರಮುಖೇನ ಅಸಮಾಧಾನ ಹೊರಹಾಕಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಅತ್ಯಂತ ಮುಖ್ಯವಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬಗೆಗಿನ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಅವರು ಹಾಜರಾಗಿಲ್ಲ, 'ನಮ್ಮ ಅನಿಸಿಕೆಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿಲ್ಲ' ಎಂದು ಅವರು ಚುನಾವಣಾ ಆಯೋಗಕ್ಕೆ ದೂರು ಸಹ ನೀಡಿದ್ದಾರೆ.

ಆಂಧ್ರದ ಐದು ಮತಗಟ್ಟೆಗಳಲ್ಲಿ ಮರುಮತದಾನ, ನಾಯ್ಡು ಕೆಂಡಾಮಂಡಲ!ಆಂಧ್ರದ ಐದು ಮತಗಟ್ಟೆಗಳಲ್ಲಿ ಮರುಮತದಾನ, ನಾಯ್ಡು ಕೆಂಡಾಮಂಡಲ!

ನರೇಂದ್ರ ಮೋದಿ ಹಾಗೂ ಇನ್ನೂ ಕೆಲವು ಪ್ರಮುಖರ ಅವರ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಪರಾಮರ್ಶೆ ಮಾಡಲು ಮೂರು ಸದಸ್ಯರ 'ಪೂರ್ಣ ಸಮಿತಿ' ಯನ್ನು ರಚಿಸಲಾಗಿತ್ತು, ಇದರಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, ಇಬ್ಬರು ಚುನಾವಣಾ ಆಯುಕ್ತರಾದ ಅಶೋಕ್ ಲಾವಾಸಾ, ಸುಶೀಲ್ ಚಂದ್ರಾ ಅವರುಗಳು ಇದ್ದರು.

Top Poll Officer Skips Meetings : Dissent Over Clean Chits

ನನ್ನ ಅಭಿಪ್ರಾಯವನ್ನು ಸಮಿತಿಯು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಅಶೋಕ್ ಲಾವಾಸಾ ಅವರು ಮೇ 4 ರಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಇದೇ ಸಮಿತಿಯು ನರೇಂದ್ರ ಮೋದಿ ಅವರ ವಿರುದ್ಧ ಕೇಳಿ ಬಂದಿದ್ದ ಚುನಾವಣಾ ನೀತಿ ಉಲ್ಲಂಘನೆ ಪ್ರಕರಣಗಳ ಪರಾಮರ್ಶೆ ನಡೆಸಿ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.

English summary
Election Commissioner Ashok Lavasa has recused himself from attending meetings of the Election Commission on deciding violations of the Model Code over what he claimed was his "minority decisions going unrecorded".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X