ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಮಸೂದೆ ಮಂಡನೆ: ಮತ್ತೆ ಸಂಸತ್ತಿನಲ್ಲಿ ಗುಡುಗಿದ ಮಹುವಾ ಮೊಯಿತ್ರಾ

|
Google Oneindia Kannada News

ನವದೆಹಲಿ, ಜುಲೈ 04: ಗುರುವಾರ ಲೋಕಸಭೆಯಲ್ಲಿ ಮಂಡಿಸಲಾದ ಆಧಾರ್ ಮಸೂದೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಈ ಮಸೂದೆಯಲ್ಲಿ ಪಾರದರ್ಶಕತೆಯ ಕೊರತೆ ಇದೆ ಎಂದು ದೂರಿದರು.

ಲೋಕಸಭೆಯಲ್ಲಿ ಇಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಆಧಾರ್ ಮಸೂದೆಯನ್ನು ಮಂಡಿಸಿದರು. ಇದೊಂದು ಸ್ವ ಇಚ್ಛೆಯ ನಿಯಮವಾಗಿದ್ದು, ಕಡ್ಡಾಯವಲ್ಲ. ಆಧಾರ್ ಇಲ್ಲವೆಂಬ ಕಾರಣಕ್ಕೆ ಯಾವ ಯೋಜನೆಯಿಂದಲೂ ಜನರು ವಂಚಿತರಾಗುವಂತಿಲ್ಲ. ಇದರಿಂದ ಖಾಸಗೀ ದಾಖಲೆಗಳಿಗೂ ಸಮಸ್ಯೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅರ್ನಬ್ ಗೋಸ್ವಾಮಿಗೆ ಮಧ್ಯದ ಬೆರಳು ತೋರಿಸಿದ್ದ ಟಿಎಂಸಿ ಸಂಸದೆಅರ್ನಬ್ ಗೋಸ್ವಾಮಿಗೆ ಮಧ್ಯದ ಬೆರಳು ತೋರಿಸಿದ್ದ ಟಿಎಂಸಿ ಸಂಸದೆ

ಆದರೆ ಇದನ್ನು ಒಪ್ಪದ ಮೊಯಿತ್ರಾ, "ಒಂದು ಮಸೂದೆಯ ಬಗ್ಗೆ ಸ್ಪಷ್ಟ ಚಿತ್ರಣವೇ ಇಲ್ಲದೆ, ಅದು ಪಾರದರ್ಶಕವೂ ಆಗಿರದೆ ಅದರ ಬಗ್ಗೆ ನಾನು ಹೇಗೆ ಚರ್ಚಿಸಲಿ?" ಎಂದು ಅವರು ಪ್ರಶ್ನಿಸಿದರು.

TMC MP Mahua Moitra in Lok Sabha questons transparency of aadhaar bill

"ಸುಪ್ರೀಂ ಕೋರ್ಟ್ ಸಹ ಈಗಾಗಲೇ ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ ಇದೆ ಎಂದಿದ್ದರೂ, ಅದು ಕಡ್ಡಾಯವಲ್ಲ ಎಂದಿದೆ. ಹೀಗಿರುವಾಗ ಆಧಾರ್ ಮಸೂದೆ ಮಂಡಿಸುವುದು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಹಾಗಲ್ಲವೇ?" ಎಂದು ಮೊಯಿತ್ರಾ ಹೇಳಿದರು.

ಸಂಸತ್ತಿನಲ್ಲಿ ಈ ಬಾರಿ ಮಹಿಳಾಮಣಿಯರ ಹವಾ, 78 ಸಂಸದೆಯರ ಆಯ್ಕೆಸಂಸತ್ತಿನಲ್ಲಿ ಈ ಬಾರಿ ಮಹಿಳಾಮಣಿಯರ ಹವಾ, 78 ಸಂಸದೆಯರ ಆಯ್ಕೆ

ಆಧಾರ್ ಎಂಬುದು ಬಡವರಿಗೆ ಸೇವೆ ನೀಡುವುದಕ್ಕೆ ಇರುವುದೇ ಹೊರತು, ಅದು ವ್ಯಕ್ತಿಗಳ ವೈಯಕ್ತಿಕ ದಾಖಲೆಗಳನ್ನು ಕಲೆ ಹಾಕುವುದಕ್ಕೆ ಇರಬಾರದು ಎಂದು ಅವರು ಅಭಿಪ್ರಾಯಪಟ್ಟರು.

English summary
Opposing the Aadhar Bill 2016 in Lok Sabha on Thursday, TMC MP Mahua Moitra said that the bill violates Supreme Court judgment and lacks transparency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X