ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದ ಟಿಕ್‌ ಟಾಕ್

|
Google Oneindia Kannada News

ನವದೆಹಲಿ, ಆಗಸ್ಟ್‌ 08: ಕಿರು ವೀಡಿಯೋ ಆ್ಯಪ್ ಟಿಕ್‌ಟಾಕ್‌ ನಿಷೇಧಿಸುವುದಾಗಿ ಬೆದರಿಕೆ ಒಡ್ಡಿರುವ ಅಮೆರಿಕಾ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಟಿಕ್‌ ಟಾಕ್ ಕಂಪನಿ ಹೇಳಿದೆ.

ಮೆಸೇಜಿಂಗ್ ಅಪ್ಲಿಕೇಶನ್ ವೀಚಾಟ್‌(WeChat) ಮತ್ತು ವೀಡಿಯೊ ಹಂಚಿಕೆ ಅಪ್ಲಿಕೇಶನ್ ಟಿಕ್‌ಟಾಕ್ (TikTok) ವಿರುದ್ಧ ಅಮೆರಿಕಾ ಕೈಗೊಂಡ ಕ್ರಮದ ಕುರಿತು ಬೀಜಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅಮೆರಿಕಾ ದಮನಕಾರಿ ಕ್ರಮ ಕೈಗೊಳ್ಳುತ್ತಿದೆ ಎಂದು ಚೀನಾ ಆರೋಪಿಸಿದೆ.

ಫೇಸ್ಬುಕ್, ಟಿಕ್ ಟಾಕ್ ಬಳಕೆ ನಿಷೇಧಿಸಿದ ಭಾರತೀಯ ಸೇನೆಫೇಸ್ಬುಕ್, ಟಿಕ್ ಟಾಕ್ ಬಳಕೆ ನಿಷೇಧಿಸಿದ ಭಾರತೀಯ ಸೇನೆ

ನಿಷೇಧದ ಬಗ್ಗೆ ಯುಎಸ್ ಅಧ್ಯಕ್ಷರ ಕಾರ್ಯನಿರ್ವಾಹಕ ಆದೇಶದಿಂದ ಇದು ಆಘಾತಕ್ಕೊಳಗಾಗಿದೆ ಎಂದು ಕಂಪನಿ ಹೇಳಿದೆ. ಅಲ್ಲದೆ ಕಾನೂನಿನ ನಿಯಮವನ್ನು ತ್ಯಜಿಸಲಾಗುವುದಿಲ್ಲ ಎಂದು ಟಿಕ್ ಟಾಕ್ ಹೇಳಿದೆ.

TikTok Threatens Legal Action Against Trump

ವೀಚಾಟ್ ಜೊತೆಗೆ, ಟೆನ್ಸೆಂಟ್ ಸಹ ಪ್ರಮುಖ ಗೇಮಿಂಗ್ ಕಂಪನಿಯಾಗಿದೆ ಮತ್ತು ಅದರ ಹೂಡಿಕೆಗಳಲ್ಲಿ ಎಪಿಕ್ ಗೇಮ್ಸ್‌ನಲ್ಲಿ ಶೇ. 40ರಷ್ಟು ಪಾಲನ್ನು ಒಳಗೊಂಡಿದೆ. ಇದು ಅತ್ಯಂತ ಜನಪ್ರಿಯ ಫೋರ್ಟ್‌ನೈಟ್ ವಿಡಿಯೋ ಗೇಮ್‌ನ ಹಿಂದಿನ ಕಂಪನಿಯಾಗಿದೆ.

ಚೀನಾ ಸರ್ಕಾರದ ಪ್ರಕಾರ, ಟ್ರಂಪ್ ಆಡಳಿತವು ತನ್ನ ಅನಿಯಂತ್ರಿತ ಮನೋಭಾವದಿಂದ ಕಾನೂನುಬದ್ಧ ಚಟುವಟಿಕೆಗಳನ್ನು ನಿಗ್ರಹಿಸಲು ರಾಜಕೀಯ ತಂತ್ರಗಳನ್ನು ಬಳಸುತ್ತಿದೆ. ಅಮೆರಿಕಾದ ಅಧ್ಯಕ್ಷರಿಂದ ಬಂದಿರುವ ಪ್ರಸ್ತುತ ಆದೇಶದ ಬಳಿಕ ಚೀನಾ ತನ್ನ ಪ್ರತಿಕ್ರಿಯೆಯಲ್ಲಿ, ಸ್ವರಕ್ಷಣೆಗಾಗಿ ಕಾನೂನು ಮಾರ್ಗಗಳನ್ನು ಆಶ್ರಯಿಸುವ ಬಗ್ಗೆ ಹೇಳಿಕೊಳ್ಳಲಾಗಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟಿಕ್‌ ಟಾಕ್ ಕಂಪನಿಯನ್ನು ಸೆಪ್ಟೆಂಬರ್ 15ರೊಳಗೆ ಅಮೆರಿಕಾದ ಕಂಪನಿಗೆ ಮಾರಾಟ ಮಾಡಬೇಕು ಇಲ್ಲವೆ ಬ್ಯಾನ್ ಮಾಡುವುದಾಗಿ ಹೇಳಿದ್ದಾರೆ.

English summary
TikTok is threatening legal action against the US after Donald Trump ordered firms to stop doing business with the Chinese app within 45 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X