ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಭಯಾ ಅತ್ಯಾಚಾರಿಗಳಿಗೆ ಜೈಲು ಅಧಿಕಾರಿಗಳ ಕೊನೆಯ ಪತ್ರ

|
Google Oneindia Kannada News

ನವದೆಹಲಿ, ಫೆಬ್ರವರಿ 22: ನಿರ್ಭಯಾ ಅತ್ಯಾಚಾರಿಗಳನ್ನು ಮಾರ್ಚ್ 3 ರಂದು ಗಲ್ಲಿಗೇರಿಸುತ್ತಿದ್ದು, ಜೈಲು ಅಧಿಕಾರಿಗಳು ಪತ್ರವೊಂದನ್ನು ರವಾನಿಸಿದ್ದಾರೆ.

Recommended Video

Nirbhaya Case : Plea of death-row convict Vinay Kumar Sharma dismissed by court

ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಮಾರ್ಚ್​ 3ರಂದು ಮರಣದಂಡನೆ ವಿಧಿಸಿ ದೆಹಲಿ ಪಟಿಯಾಲ ಕೋರ್ಟ್​ ಡೆತ್​ ವಾರಂಟ್ ಹೊರಡಿಸಿದೆ.

ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳಿಗೆ ಮಾರ್ಚ್.3ಕ್ಕೆ ಗಲ್ಲುಶಿಕ್ಷೆ ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳಿಗೆ ಮಾರ್ಚ್.3ಕ್ಕೆ ಗಲ್ಲುಶಿಕ್ಷೆ

ಅಪರಾಧಿಗಳ ಗಲ್ಲುಶಿಕ್ಷೆಯ ದಿನ ಹತ್ತಿರ ಬರುತ್ತಿದ್ದಂತೆ ತಿಹಾರ್​ ಜೈಲು ಅಧಿಕಾರಿಗಳು ನಾಲ್ವರಿಗೂ ಅವರವರ ಕುಟುಂಬದವರನ್ನು ಭೇಟಿಯಾಗುವ ಕುರಿತು ಪತ್ರ ಬರೆದಿದ್ದಾರೆ.

ಕುಟುಂಬದವರನ್ನು ಭೇಟಿಯಾಗಿರುವ ಪವನ್, ಮುಖೇಶ್

ಕುಟುಂಬದವರನ್ನು ಭೇಟಿಯಾಗಿರುವ ಪವನ್, ಮುಖೇಶ್

ಪವನ್​ ಮತ್ತು ಮುಕೇಶ್​ ಫೆ.1ಕ್ಕೂ ಮೊದಲೇ ತಮ್ಮ ಕುಟುಂಬದವರನ್ನು ಭೇಟಿಯಾಗಿದ್ದರು. ಈಗ ವಿನಯ್ ಶರ್ಮಾ ಮತ್ತು ಅಕ್ಷಯ್​ ಉಳಿದಿದ್ದಾರೆ. ಅವರು ಯಾವಾಗ ತಮ್ಮ ಕುಟುಂಬವನ್ನು ಭೇಟಿಯಾಗಲು ಇಷ್ಟಪಡುತ್ತಾರೋ ಆಗ ಸಿದ್ಧತೆ ಮಾಡಲಾಗುತ್ತದೆ ಎಂದು ಜೈಲು ಸಿಬ್ಬಂದಿ ತಿಳಿಸಿದ್ದಾರೆ. ಈ ಮೊದಲು ಅಪರಾಧಿಗಳನ್ನು ಫೆ.1ರಂದು ನೇಣಿಗೇರಿಸಬೇಕು ಎಂದು ಆದೇಶವಿತ್ತು.

2012ರಲ್ಲಿ ನಿರ್ಭಯಾ ಮೇಲೆ ನಡೆದ ಅತ್ಯಾಚಾರ

2012ರಲ್ಲಿ ನಿರ್ಭಯಾ ಮೇಲೆ ನಡೆದ ಅತ್ಯಾಚಾರ

2012ರಲ್ಲಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್​​ನಲ್ಲಿ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರವಾಗಿತ್ತು. ಆಕೆ ಸಿಂಗಾಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಅದಾದ ಏಳುವರ್ಷಗಳ ಬಳಿಕ ಸುಪ್ರೀಂಕೋರ್ಟ್ ಅಪರಾಧಿಗಳಿಗೆ ಮರಣದಂಡನೆ ನಿಗದಿ ಮಾಡಿತ್ತು. ದೆಹಲಿ ಪಟಿಯಾಲಾ ಕೋರ್ಟ್​ ಮಾರ್ಚ್​ 3ರಂದು ಗಲ್ಲುಶಿಕ್ಷೆ ನಿಗದಿ ಮಾಡಿ ಡೆತ್​ವಾರಂಟ್​ ಜಾರಿಗೊಳಿಸಿದೆ.

ಜೈಲಿನಲ್ಲಿ ಕಿಟಕಿ ಮೂಲಕವಷ್ಟೇ ಮಾತನಾಡುತ್ತಿದ್ದ ಆರೋಪಿಗಳು

ಜೈಲಿನಲ್ಲಿ ಕಿಟಕಿ ಮೂಲಕವಷ್ಟೇ ಮಾತನಾಡುತ್ತಿದ್ದ ಆರೋಪಿಗಳು

ಇಷ್ಟುದಿನ ಕುಟುಂಬದವರು ಯಾರೇ ನೋಡಲು ಬಂದರೂ ಜೈಲಿನಲ್ಲಿ ಕಿಟಕಿಯ ಮೂಲಕವಷ್ಟೇ ಮಾತುಕತೆಗೆ ಅವಕಾಶ ನೀಡಲಾಗಿತ್ತು. ಇದೀಗ ಕೊನೇ ಭೇಟಿಯಾಗಿದ್ದರಿಂದ ಮುಖಾಮುಖಿ ಕುಳಿತು ಮಾತನಾಡಲು ಅವಕಾಶ ಇರುತ್ತದೆ ಎನ್ನಲಾಗಿದೆ.

ಹ್ಯಾಂಗ್‌ಮ್ಯಾನ್ ಕಳುಹಿಸಿಕೊಡುವಂತೆ ಪತ್ರ

ಹ್ಯಾಂಗ್‌ಮ್ಯಾನ್ ಕಳುಹಿಸಿಕೊಡುವಂತೆ ಪತ್ರ

ಈ ನಾಲ್ವರಲ್ಲಿ ವಿನಯ್​ ಶರ್ಮಾ ಫೆ.16ರಂದು ಜೈಲಿನ ಗೋಡೆಗೆ ತನ್ನ ತಲೆಯನ್ನು ಜಜ್ಜಿಕೊಂಡಿದ್ದ. ಆತನ ಮಾನಸಿಕ ಸ್ಥಿತಿ ಹದಗೆಟ್ಟಿದೆ ಎನ್ನಲಾಗಿತ್ತು. ಇದೇ ಕಾರಣಕ್ಕೆ ಆತನ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ ಎಂದು ಜೈಲು ಆಡಳಿತ ಮಾಹಿತಿ ನೀಡಿದೆ.

ಅಷ್ಟೇ ಅಲ್ಲ ತಿಹಾರ್​ ಜೈಲು ಅಧಿಕಾರಿಗಳು ಉತ್ತರ ಪ್ರದೇಶ ಜೈಲು ಆಡಳಿತಕ್ಕೆ ಪತ್ರ ಬರೆದಿದ್ದು, ಅಪರಾಧಿಗಳನ್ನು ಗಲ್ಲಿಗೇರಿಸುವ ದಿನ (ಮಾರ್ಚ್​ 3)ಕ್ಕೆ ಎರಡು ದಿನ ಮೊದಲೇ ಹ್ಯಾಂಗ್​ಮನ್​ನನ್ನು ಕಳಿಸಿಕೊಡುವಂತೆ ತಿಳಿಸಿದ್ದಾರೆ.

English summary
Tihar Jail Officials Have written to all four Nirbhaya case convicts in connection with their last meeting with families. Mukesh and Pawan were told that they had already met their families before February 1 death warrant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X