ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಆಘಾತ: ಹೆಣ್ಣುಹುಲಿಗೂ ಅಂಟಿಕೊಂಡಿತಾ ಕೊರೊನಾ ವೈರಸ್ ಸೋಂಕು?

|
Google Oneindia Kannada News

ನವದೆಹಲಿ, ಏಪ್ರಿಲ್.24: ಕೊರೊನಾ ವೈರಸ್ ಸೋಂಕಿಗೆ ಸಾವಿರ ಸಾವಿರ ಜನರು ಪ್ರಾಣ ಬಿಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸಿರುವ ಮಹಾಮಾರಿ ಕೊವಿಡ್-19 ಪ್ರಾಣಿಗಳಿಗೆ ಅಂಟಿಕೊಳ್ಳುತ್ತಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ನವದೆಹಲಿ ಮೃಗಾಲಯದಲ್ಲಿ ಕಿಡ್ನಿ ವೈಫಲ್ಯದಿಂದ ಹೆಣ್ಣುಹುಲಿಯೊಂದು ಪ್ರಾಣ ಬಿಟ್ಟಿದೆ. ಇದೀಗ ಆ ಹೆಣ್ಣುಹುಲಿಯ ರಕ್ತದ ಮಾದರಿ ಸಂಗ್ರಹಿಸಿದ್ದು ಕೊರೊನಾ ವೈರಸ್ ಸೋಂಕು ತಪಾಸಣೆಗೆ ಕಳುಹಿಸಿ ಕೊಡಲಾಗಿದೆ.

ತಬ್ಲಿಘಿಗಳ ಸಂಪರ್ಕದಿಂದ 13 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕುತಬ್ಲಿಘಿಗಳ ಸಂಪರ್ಕದಿಂದ 13 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಕಳೆದ ಏಪ್ರಿಲ್.22ರ ಬುಧವಾರ 14 ವರ್ಷದ ಕಲ್ಪನಾ ಹೆಸರಿನ ಹೆಣ್ಣುಹುಲಿಯು ಮೃತಪಟ್ಟಿದ್ದು, ಮರುದಿನ ಗುರುವಾರ ಹುಲಿಯ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಈ ವೇಳೆ ಭಾರತ ಲಾಕ್ ಡೌನ್ ಹಿನ್ನೆಲೆ ಕೆಲವೇ ಕೆಲವು ಅಧಿಕಾರಿಗಳು ಹೆಣ್ಣುಹುಲಿಯ ಅಂತ್ಯಸಂಸ್ಕಾರದ ವೇಳೆ ಸಾಮಾಜಿಕ ಅಂತರ ಸೇರಿದಂತೆ ಮಾರ್ಗಸೂಚಿಯನ್ನು ಉಲ್ಲಂಘಿಸಿ ನಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Tigress Dies In Delhi Zoo, Sample Sent For Coronavirus Test

ರಾಯ್ ಬರೇಲಿ ಸಂಶೋಧನಾ ಸಂಸ್ಥೆಗೆ ಮಾದರಿ ರವಾನೆ:

ಕೆಲ್ಪನಾ ಎಂಬ ಹೆಣ್ಣುಹುಲಿಯ ರಕ್ತದ ಮಾದರಿಯನ್ನು ರಾಯ್ ಬರೇಲಿಯಲ್ಲಿ ಇರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಿ ಕೊಡಲಾಗಿದೆ. ಇದರ ನಡುವೆ ಮೃಗಾಲಯದ ಸಿಬ್ಬಂದಿ ತೋರಿದ ನಿರ್ಲಕ್ಷ್ಯವೇ ಹೆಣ್ಣುಹುಲಿಯ ಸಾವಿಗೆ ಕಾರಣ ಎಂದು ಕೇಂದ್ರ ಮೃಗಾಲಯದ ಮಾಜಿ ಕಾರ್ಯದರ್ಶಿ ಡಿ.ಎನ್.ಸಿಂಗ್ ಆರೋಪಿಸಿದ್ದಾರೆ. ಹುಲಿಯ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಭಾರತ ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದು, ಯಾವುದೇ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ ಎಂದು ಡಿ.ಎನ್.ಸಿಂಗ್ ದೂರಿದ್ದಾರೆ.

English summary
Tigress Dies In Delhi Zoo, Sample Sent For Coronavirus Test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X