ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ರಾತ್ರಿ ಗುಡುಗು ಸಹಿತ ಮಳೆ ಸಾಧ್ಯತೆ

|
Google Oneindia Kannada News

ನವದೆಹಲಿ, ಮೇ 23: ದೆಹಲಿಯಲ್ಲಿ ಮಂಗಳವಾರ ರಾತ್ರಿ ಹೆಚ್ಚಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ಮುಂಜಾನೆ ಸುರಿದ ಮಳೆಗೆ ರಾಷ್ಟ್ರ ರಾಜಧಾನಿ ಜನರಿಗೆ ಬಿಸಿಲಿನ ತಾಪಮಾನದಿಂದ ಕೊಂಚ ಮುಕ್ತಿ ಸಿಕ್ಕಿದೆ. ದೆಹಲಿಯಲ್ಲಿ ತಾಪಮಾನ 18 ವರ್ಷಗಳಲ್ಲಿ ಮೇ ತಿಂಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ.

ಇದರಿಂದ ಇನ್ನೂ ಆರು ದಿನಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ತೀವ್ರವಾದ ಶಾಖದ ಅಲೆಗಳು ಅಪ್ಪಳಿಸುವ ಸಾಧ್ಯತೆಯಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ವಾಯುವ್ಯ ಭಾರತದ ಮೇಲೆ ಪರಿಣಾಮ ಬೀರುವ ಪಶ್ಚಿಮದ ಅಡಚಣೆಯಿಂದಾಗಿ ಬೆಳಿಗ್ಗೆ ಹವಾಮಾನ ಪರಿಸ್ಥಿತಿಗಳು ಬದಲಾಗಿವೆ. 80 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸುವುದರೊಂದಿಗೆ ಸಾಧಾರಣದಿಂದ ಭಾರೀ ಮಳೆಯಾಗಲಿದೆ.

ಗುಡುಗು + ಮಿಂಚು + ಬಿರುಗಾಳಿ + ಭಾರೀ ಮಳೆ = ದೆಹಲಿಯಲ್ಲಿ ಏನಾಗ್ತಿದೆ?ಗುಡುಗು + ಮಿಂಚು + ಬಿರುಗಾಳಿ + ಭಾರೀ ಮಳೆ = ದೆಹಲಿಯಲ್ಲಿ ಏನಾಗ್ತಿದೆ?

ಇಂದು ಬೆಳಿಗ್ಗೆ ದೆಹಲಿಯ ಜನರು ಗುಡುಗು ಸಹಿತ ಮಳೆಯನ್ನು ಕಂಡಿದ್ದಾರೆ. ಇದರಿಂದ ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ 17.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಋತುವಿನ ಸರಾಸರಿಗಿಂತ ಒಂಬತ್ತು ಹಂತಗಳು ಕಡಿಮೆಯಾಗಿದೆ. ಮೇ 1, 2004 ರಿಂದ 16.7 ಡಿಗ್ರಿ ಸೆಲ್ಸಿಯಸ್ ತಾಪಮಾನವು ಇದ್ದ ನಂತರ ರಾಜಧಾನಿಯು ಮೇ ತಿಂಗಳ ಕನಿಷ್ಠ ತಾಪಮಾನವನ್ನು ದಾಖಲಿಸಿದೆ. ತಿಂಗಳಿನಲ್ಲಿ ಇದುವರೆಗಿನ ಕನಿಷ್ಠ ತಾಪಮಾನ 15.2 ಡಿಗ್ರಿ ಸೆಲ್ಸಿಯಸ್ ಆಗಿದೆ ಮತ್ತು ಇದು ಮೇ 2, 1982 ರಂದು ದಾಖಲಾಗಿದೆ.

New Delhi Rain: Thunder showers are likely in Delhi

ಇಂದು ಸುರಿದ ಗುಡುಗು ಸಹಿತ ಮಳೆಗೆ ರಸ್ತೆ ಮತ್ತು ವಿಮಾನ ಸಂಚಾರದ ಮೇಲೆ ಪರಿಣಾಮ ಬೀರಿದೆ. ಕೆಲವು ಸ್ಥಳಗಳಲ್ಲಿ ಮನೆಗಳು ಜಲಾವೃತಗೊಂಡು ಮತ್ತು ಮರಗಳು ಉರುಳಿದವು, ಕನಿಷ್ಠ ಎಂಟು ಜನರು ಗಾಯಗೊಂಡಿದ್ದಾರೆ. ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಹಂಚಿಕೊಂಡ ಮಾಹಿತಿಯ ಪ್ರಕಾರ, ಬಲವಾದ ಗಾಳಿಯು ಸುಮಾರು 44 ಸ್ಥಳಗಳಲ್ಲಿ ಮರಗಳು ಧರೆಗುರುಳಿವೆ. ಬೆಳಿಗ್ಗೆ 5.40 ರಿಂದ 7 ಗಂಟೆಯ ನಡುವೆ ತಾಪಮಾನವು 29 ಡಿಗ್ರಿ ಸೆಲ್ಸಿಯಸ್‌ನಿಂದ 18 ಡಿಗ್ರಿ ಸೆಲ್ಸಿಯಸ್‌ಗೆ 11 ಡಿಗ್ರಿಗಳಷ್ಟು ಕುಸಿದಿದೆ. ದೆಹಲಿಯಲ್ಲಿ ಬೆಳಿಗ್ಗೆ 8.30 ರವರೆಗೆ 12 ಮಿಮೀ ಮಳೆ ದಾಖಲಾಗಿದ್ದರೆ, ಸಂಜೆ 5.30 ರವರೆಗೆ 0.3 ಮಿಮೀ ಮಳೆಯಾಗಿದೆ.

New Delhi Rain: Thunder showers are likely in Delhi

ಹವಾಮಾನ ಇಲಾಖೆಯ ಪ್ರಕಾರ, ಇದು ಋತುವಿನ ಮೊದಲ ಮಧ್ಯಮ-ತೀವ್ರತೆಯ ಚಂಡಮಾರುತವಾಗಿದೆ. ಹೀಗಾಗಿ ಹವಾಮಾನ ಇಲಾಖೆಯು ಮಂಗಳವಾರ ಯೆಲ್ಲೋ ಅಲರ್ಟ್ ನೀಡಿದೆ ಮತ್ತು ಗುಡುಗು, 30-40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿಯೊಂದಿಗೆ ಮಳೆಯ ಮುನ್ಸೂಚನೆ ನೀಡಿದೆ. ಭಾನುವಾರ ದೆಹಲಿಯಲ್ಲಿ ಗರಿಷ್ಠ ತಾಪಮಾನ 39.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಋತುವಿನ ಸಾಮಾನ್ಯಕ್ಕಿಂತ ಒಂದು ಹಂತಕ್ಕಿಂತ ಕಡಿಮೆಯಾಗಿದೆ, ಆದರೆ ಕನಿಷ್ಠ ತಾಪಮಾನವು 23.1 ಡಿಗ್ರಿ ಸೆಲ್ಸಿಯಸ್ ಆಗಿದೆ.

English summary
Met Department has forecast heavy showers in Delhi with heavy thunderstorms overnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X