ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು

|
Google Oneindia Kannada News

ನವದೆಹಲಿ, ಏಪ್ರಿಲ್ 13: ದೆಹಲಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮತ್ತೆ ಮೂವರಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.

ಆಸ್ಪತ್ರೆಯ ವೈದ್ಯೆಯ ಸಹೋದರ ಯುಕೆಯಿಂದ ಆಗಮಿಸಿದ್ದರು, ಅವರಿಂದ ವೈದ್ಯೆ ಕೊವಿಡ್ 19 ರೋಗಕ್ಕೆ ತುತ್ತಾಗಿದ್ದರು. ಇಂದು ಬೆಳಗ್ಗೆ ಆಸ್ಪತ್ರೆಯ 3 ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಭಾರತದಲ್ಲಿ 9 ಸಾವಿರಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ ಭಾರತದಲ್ಲಿ 9 ಸಾವಿರಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ಓರ್ವ ಅಟೆಂಡೆಂಟ್, ಓರ್ವ ಭದ್ರತಾ ಸಿಬ್ಬಂದಿ ಮತ್ತೋರ್ವ ರೋಗಿ ಸೇರಿ ಒಟ್ಟು ಮೂವರಿಗೆ ಕೊರೊನಾ ತಗುಲಿದೆ.ಈ ವರೆಗೆ ಆಸ್ಪತ್ರೆಯಲ್ಲಿರುವ 22 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅದರಲ್ಲಿ 3 ರೋಗಿಗಳು, 3 ವೈದ್ಯರು ಸೇರಿದ್ದಾರೆ.

Three More COVID-19 Cases Were Reported In Cancer Hospital

ವೈದ್ಯೆಯ ಅಣ್ಣ ಹಾಗೂ ಅತ್ತಿಗೆ ಯುಕೆಯಿಂದ ಆಗಮಿಸಿದ್ದಾರೆ ಎಂದು ನೋಡಲು ಅವರ ಮನೆಗೆ ತೆರಳಿದ್ದರು ಆಗ ಅವರಿಗೆ ಕೊರೊನಾ ವೈರಸ್ ತಗುಲಿತ್ತು. ಏಪ್ರಿಲ್ 1ರಿಂದಲೇ ಆಸ್ಪತ್ರೆ ಬಾಗಿಲು ಮುಚ್ಚಲಾಗಿದೆ.

ಸಾಕಷ್ಟು ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ಆತಂಕವಿರುತ್ತದೆ. ಈಗಾಗಲೇ ರೋಗಿಗಳು ಕ್ಯಾನ್ಸರ್ ಎನ್ನುವ ಮಹಾಮಾರಿ ಜೊತೆಗೆ ಹೋರಾಡುತ್ತಿದ್ದು, ಈ ರೋಗದ ವಿರುದ್ಧ ಹೋರಾಡಲು ಶಕ್ತಿ ಇರುವುದಿಲ್ಲ.

ದೆಹಲಿಯಲ್ಲಿ 1154 ಕೊರೊನಾ ಸೋಂಕಿತ ಪ್ರಕರಣಗಳಿದ್ದು ಇದುವರೆಗೆ 28 ಮಂದಿ ಮೃತಪಟ್ಟಿದ್ದಾರೆ.ಭಾರತದಲ್ಲಿ 9152 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಕಳೆದ 24 ಗಂಟೆಗಳಲ್ಲಿ 30 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 308ಕ್ಕೇರಿದೆ.

English summary
Three more COVID-19 cases were reported this morning from the Delhi State Cancer Institute. These include a patient, an attendant and one security guard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X