ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಮೂರು ಸಮುದಾಯ ಎಸ್‌ಟಿ ಗೆ ಸೇರ್ಪಡೆ

|
Google Oneindia Kannada News

ನವದೆಹಲಿ, ಫೆಬ್ರವರಿ 11: 'ಪರಿವಾರ', 'ತಳವಾರ', 'ಸಿದ್ದಿ' ಸಮುದಾಯವನ್ನು ಎಸ್‌ಟಿ ಗೆ ಸೇರಿಸುವ ಮಸೂದೆಗೆ ಲೋಕಸಭೆ ಮಂಗಳವಾರ ಅಂಗೀಕಾರ ನೀಡಿತು.

ಈ ಮೂರೂ ಸಮುದಾಯವನ್ನು ಎಸ್‌ಟಿ ಗೆ ಸೇರ್ಪಡೆ ಮಾಡಬೇಕೆಂಬ ಮಸೂದೆಗೆ ಕಳೆದ ಡಿಸೆಂಬರ್‌ ನಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯು ಅಂಗೀಕಾರ ನೀಡಿತ್ತು. ಈಗ ಲೋಕಸಭೆಯು ಅಂಗೀಕಾರ ನೀಡಿದ್ದು, ರಾಷ್ಟ್ರಪತಿಗಳ ಅಂಕಿತ ಬಾಕಿ ಇದೆ.

ಯಡಿಯೂರಪ್ಪ ಸಂಪುಟ: ಯಾವ ಜಾತಿಯ ಎಷ್ಟು ಸಚಿವರಿದ್ದಾರೆ?ಯಡಿಯೂರಪ್ಪ ಸಂಪುಟ: ಯಾವ ಜಾತಿಯ ಎಷ್ಟು ಸಚಿವರಿದ್ದಾರೆ?

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 'ಪರಿವಾರ', 'ತಳವಾರ', 'ಸಿದ್ದಿ' ಜನಾಂಗದ ಜನರು ವಾಸಿಸುತ್ತಿದ್ದು. ಮಸೂದೆಯಿಂದ ಈ ಸಮುದಾಯದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ. ಸಮುದಾಯಕ್ಕೆ ಹೆಚ್ಚಿನ ಆದ್ಯತೆ ದೊರೆತಂತಾಗುತ್ತದೆ.

Three Communities Inclutioned Into Scheduled Tribe

ಮಸೂದೆ ಕುರಿತು ಲೋಕಸಭೆಯಲ್ಲಿ ಕನ್ನಡದಲ್ಲಿಯೇ ಮಾತನಾಡಿದ ಪ್ರತಾಪ್ ಸಿಂಹ, 'ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಈ ಸಮುದಾಯದ ಜನರು ಮಾಡಿದ್ದ ಬೇಡಿಕೆ 36 ವರ್ಷಗಳ ನಂತರ ಈಡೇರುತ್ತಿದೆ. ಇದಕ್ಕೆ ಯಡಿಯೂರಪ್ಪ, ಮೋದಿ, ಅಮಿತ್ ಶಾ, ಸಿದ್ದರಾಮಯ್ಯ ಸೇರಿ ಅನೇಕರು ಅಭಿನಂದನಾರ್ಹರು' ಎಂದರು.

ಜಗನ್ ಸರ್ಕಾರದಿಂದ ದೇಗುಲಗಳಲ್ಲಿ ಮೀಸಲಾತಿ ಜಾರಿ, ಮಹತ್ವದ ಆದೇಶಜಗನ್ ಸರ್ಕಾರದಿಂದ ದೇಗುಲಗಳಲ್ಲಿ ಮೀಸಲಾತಿ ಜಾರಿ, ಮಹತ್ವದ ಆದೇಶ

ವಿವಿಧ ರಾಜ್ಯಗಳ ಹಲವು ಸಂಸದರು ಮಸೂದೆ ಕುರಿತು ಮಾತನಾಡಿ, ವಿವಿಧ ರಾಜ್ಯಗಳಲ್ಲಿ ಈ ಜನಾಂಗದ ಜನರನ್ನು ಬೇರೆ-ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಇವರಿಗೆ ಎಸ್‌ಟಿ ಗೆ ಸೇರ್ಪಡೆಗೊಳಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

English summary
Three communities of Karnataka Siddi, Parivara, Talvara inclutioned into scheduled tribe. Bill approved in Lok Sabha and Rajya Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X