ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಕರೆ, ಭದ್ರತೆ ಹೆಚ್ಚಳ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 11: ದೆಹಲಿ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಭದ್ರತೆ ಹೆಚ್ಚಿಸಲಾಗಿದೆ.

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನಾಮಧೇಯ ದೂರವಾಣಿ ಕರೆ ಬಂದಿದ್ದು, ಲಂಡನ್‌ಗೆ ಹೋಗುವ ಏರ್‌ ಇಂಡಿಯಾ ವಿಮಾನವನ್ನು ಸ್ಪೋಟಿಸುವ ಬೆದರಿಕೆ ಹಾಕಲಾಗಿದೆ.

ಅಮೆರಿಕದಲ್ಲಿ ನಡೆದ 9/11 ಭಯೋತ್ಪಾದಕ ದಾಳಿಯಂತೆ ಲಂಡನ್‌ಗೆ ತೆರಳುವ ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸುವುದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗುರುವಾರ ರಾತ್ರಿಯೇ ದೆಹಲಿಯ ಪೊಲೀಸ್‌ಠಾಣೆಗೆ ಬೆದರಿಕೆ ಕರೆ ಬಂದಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.

Threat Call Triggers Bomb Scare At Delhi Airport

ಲಂಡನ್‌ಗೆ ಹೋಗುವ ವಿಮಾನದ ಬಗ್ಗೆ ನಮಗೆ ಬಾಂಬ್ ಬೆದರಿಕೆ ಕರೆ ಬಂದಿತು. ಗುರುವಾರ ರಾತ್ರಿ 10.30ಕ್ಕೆ ದೆಹಲಿಯ ಹೊರಗಿನ ರನ್‌ಹೋಲಾ ಪೊಲೀಸ್ ಠಾಣೆಯ ಲ್ಯಾಂಡ್‌ಲೈನ್‌ಗೆ ಕರೆ ಬಂದಿತ್ತು.

ಅಮೆರಿಕದಲ್ಲಿ 9/11 ದಾಳಿಯಂತೆ ಲಂಡನ್‌ಗೆ ಹೋಗುವ ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ಹಾಗೆಯೇ ದೆಹಲಿ ಏರ್‌ಪೋರ್ಟ್‌ಗೂ ಕೂಡ ಶುಕ್ರವಾರ ಬೆದರಿಕೆ ಕರೆ ಬಂದಿತ್ತು. 2001ರ ಸೆಪ್ಪೆಂಬರ್‌ 11ರಂದು ನ್ಯೂಯಾರ್ಕ್‌ ಸಿಟಿ, ಅರ್ಲಿಂಗ್ಟನ್‌, ವರ್ಜಿನಿಯಾ, ಪೆನ್ಸಿಲ್ವೇನಿಯಾ ಮತ್ತು ಶಾಂಕ್ಸ್‌ವಿಲ್ಲೆಯಲ್ಲಿ 90 ದೇಶಗಳ 2,977 ಜನರು ಮೃತಪಟ್ಟಿದ್ದರು.

ಅಮೆರಿಕ ಇತಿಹಾಸದಲ್ಲೇ ಈ ದಾಳಿ ಅತ್ಯಂತ ಭೀಕರವಾಗಿದ್ದು, ಸುಮಾರು 102 ನಿಮಿಷಗಳಲ್ಲಿ ಅಲ್​ಖೈದಾ ಭಯೋತ್ಪಾದಕ ಸಂಘಟನೆಯಿಂದ ಅಪಹರಿಸಲ್ಪಟ್ಟಿದ್ದ ಎರಡು ವಿಮಾನಗಳು ಕೇವಲ 102 ನಿಮಿಷಗಳ ಅವಧಿಯಲ್ಲಿ ಅವಳಿ ಗೋಪುರಗಳಿಗೆ ಅಪ್ಪಳಿಸಿದ್ದವು.

ವಿಶ್ವದ ದೊಡ್ಡಣ್ಣ ಅಮೆರಿಕಾದ ಅವಳಿ ಗೋಪುರಗಳ ಮೇಲೆ ದಾಳಿ ನಡೆದು 20 ವರ್ಷಗಳು ಕಳೆದಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸಿದ್ದಾರೆ.

ಸಾವಿರಾರು ಮಂದಿ ಗಾಯಗೊಂಡಿದ್ದರು. ನಿಮ್ಮನ್ನು ಮತ್ತು ನಿಮ್ಮ ಪ್ರೀತಿ ಪಾತ್ರರನ್ನು ಅಮೆರಿಕ ಸ್ಮರಿಸುತ್ತದೆʼ ಎಂದು ಹೇಳಿರುವ ವಿಡಿಯೊವೊಂದನ್ನು ಬೈಡನ್‌ ಅವರು ಸಾಮಾಜಿಕ ಜಾಲತಾಣ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ದುರಂತದಿಂದಾಗಿ ಐಕ್ಯತೆಯು ನಮ್ಮ ದೊಡ್ಡ ಶಕ್ತಿಯಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ ಅವರು, ದಾಳಿಯ ನಂತರ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡಿದ ಭದ್ರತಾ ಪಡೆಗಳನ್ನು ಶ್ಲಾಘಿಸಿದರು.

ದಾಳಿಯ ನಂತರ ರಕ್ಷಣಾ ಕಾರ್ಯದಲ್ಲಿ ತೊಡಗಿದ, ಅಗ್ನಿಶಾಮಕ ದಳದವರು, ಪೊಲೀಸ್ ಅಧಿಕಾರಿಗಳು, ಕಾರ್ಮಿಕರು, ವೈದ್ಯರು ಮತ್ತು ದಾದಿಯರು ಸೇರಿದಂತೆ ಎಲ್ಲರನ್ನೂ ನಾವು ಗೌರವಿಸುತ್ತೇವೆ ಎಂದು ಜೋ ಬೈಡನ್ ತಿಳಿಸಿದ್ದಾರೆ.

ಅಲ್‌ಖೈದಾ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆ ಅಧಿನಾಯಕ ಒಸಾಮಾ ಬಿನ್ ಲಾಡೆನ್ ನೇತೃತ್ವದಲ್ಲಿ ಅಮೆರಿಕದ ಮೇಲೆ ಉಗ್ರ ದಾಳಿ ನಡೆಸಿತ್ತು. ನ್ಯೂಯಾರ್ಕ್‌ನ ವರ್ಲ್ಡ್‌ ಟ್ರೇಡ್‌ ಸೆಂಟರ್ ಅವಳಿ ಗೋಪುರದ ಮೇಲೆ ವಿಮಾನ ದಾಳಿ ನಡೆದಿತ್ತು. ಸೆಪ್ಟೆಂಬರ್ 11, 2001 ಈ ಘಟನೆ ನಡೆದಿದ್ದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು.

ಅಮೆರಿಕದ 4 ವಿಮಾನಗಳನ್ನೇ ಹೈಜಾಕ್ ಮಾಡಿದ್ದ ಅಲ್‌ಕೈದಾ ಸಂಘಟನೆ ಉಗ್ರರು, ಒಂದು ವಿಮಾನವನ್ನು ನ್ಯೂಯಾರ್ಕ್‌ನ ವರ್ಲ್ಡ್‌ ಟ್ರೇಡ್‌ ಸೆಂಟರ್ ಅವಳಿ ಗೋಪುರಕ್ಕೆ ಡಿಕ್ಕಿ ಹೊಡೆಸಿದ್ದರು. ಮತ್ತೊಂದು ವಿಅಮಾನ ಅಮೆರಿಕದ ಮಿಲಿಟರಿ ಪ್ರಧಾನ ಕಚೇರಿ ಪೆಂಟಗಾನ್‌ಗೆ ಡಿಕ್ಕಿ ಹೊಡೆದಿತ್ತು.

ವರ್ಜೀನಿಯಾ ಕಡೆಗೆ ಹೊರಟಿದ್ದ ಮೂರನೇ ವಿಮಾನ, ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದಿತ್ತು. ವಾಷಿಂಗ್ಟನ್ ಡಿಸಿ ಕಡೆಗೆ ಹೊರಟಿದ್ದ ವಿಮಾನ ನೆಲಕ್ಕೆ ಅಪ್ಪಳಿಸಿತ್ತು. ಒಟ್ಟಾರೆಯಾಗಿ ಈ ಉಗ್ರ ದಾಳಿಯಿಂದಾಗಿ ಅಮೆರಿಕದಲ್ಲಿ ಒಟ್ಟು 2977 ಅಮಾಯಕರು ಮೃತರಾಗಿದ್ದರು.

ಅಫ್ಘಾನಿಸ್ತಾನದಲ್ಲಿ ಅಮೆರಿಕದ ದಾಳಿ, ಇರಾಕ್ ಯುದ್ಧ ಹಾಗೂ ತಾಲಿಬಾನ್ ವಿರುದ್ಧದ ಸಮರಕ್ಕೆ ಪ್ರತೀಕಾರವಾಗಿ ಅಲ್‌ಖೈದಾ ಈ ದಾಳಿ ಸಂಘಟಿಸಿತ್ತು. ಈ ಮೂಲಕ ಒಸಾಮಾ ಬಿನ್ ಲಾಡೆನ್, ಜಾಗತಿಕ ಮಹಾ ಉಗ್ರನ ಪಟ್ಟ ಗಿಟ್ಟಿಸಿಕೊಂಡ. ಅದಾದ ನಂತರ ನಡೆದ ಬೆಳವಣಿಗೆಗಳು ಅಮೆರಿಕದ ಮಿಲಿಟರಿ ಶಿಸ್ತು ಹಾಗೂ ಪ್ರತೀಕಾರ ಗುಣವನ್ನು ವಿಶ್ವಕ್ಕೇ ಜಗಜ್ಜಾಹೀರು ಮಾಡಿತು.

English summary
Security at Delhi’s Indira Gandhi International Airport has been beefed up after the police received an anonymous phone call threatening to “blow up” a London-bound Air India flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X