ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಗೆಲುವು ನರೇಂದ್ರ ಮೋದಿಗೆ ಸ್ಪಷ್ಟ ಎಚ್ಚರಿಕೆ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಡಿಸೆಂಬರ್ 11: ಬಿಜೆಪಿ ಮುಕ್ತ ಭಾರತ ನಮ್ಮ ಗುರಿ ಅಲ್ಲ. ಭಿನ್ನಾಭಿಪ್ರಾಯದೊಂದಿಗೆ ಹೋರಾಡುತ್ತೇವೆ, ಪ್ರಜಾಸತ್ತಾತ್ಮಕವಾಗಿಯೇ ಅವರನ್ನು ಮಣಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗೆಲುವಿನ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಈ ಪಂಚ ರಾಜ್ಯ ಚುನಾವಣಾ ಸೋಲು ನರೇಂದ್ರ ಮೋದಿಗೆ ಹಾಗೂ ಬಿಜೆಪಿಗೆ ಸ್ಪಷ್ಟ ಸಂದೇಶ ಎಂದು ಅವರು ಹೇಳಿದರು.

ವಿಶ್ಲೇಷಣೆ : ನರೇಂದ್ರ ಮೋದಿ ಅಲೆಯ ಪ್ರಭಾವ ಕಡಿಮೆಯಾಗಿದೆಯೆ?ವಿಶ್ಲೇಷಣೆ : ನರೇಂದ್ರ ಮೋದಿ ಅಲೆಯ ಪ್ರಭಾವ ಕಡಿಮೆಯಾಗಿದೆಯೆ?

ಮೋದಿ ಅವರ ಯೋಜನೆಗಳು ಜನರ ಅಭಿವೃದ್ಧಿಯ ಗುರಿ ಹೊಂದಿಲ್ಲ, ಮೋದಿ ಅವರು ಜನರ ಬಳಿ ಸುಳ್ಳು ಹೇಳಿದ್ದಾರೆ, ರಫೆಲ್‌ನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬುದೆಲ್ಲದರ ಬಗ್ಗೆ ಬೇಸರಗೊಂಡಿರುವ ಜನರು ಇಂದು ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

'ಮಹಾಘಟಬಂಧನ್‌ ಗಟ್ಟಿಯಾಗಿದೆ'

'ಮಹಾಘಟಬಂಧನ್‌ ಗಟ್ಟಿಯಾಗಿದೆ'

ಮಹಾಘಟಬಂಧನ್‌ ಬಗ್ಗೆ ಮಾತನಾಡಿದ ಅವರು, ನಿನ್ನೆಯಷ್ಟೆ ನಾವು ಸಭೆ ಸೇರಿದ್ದೆವು. ನಾವೆಲ್ಲಾ ಬಹಳ ಒಗ್ಗಟ್ಟಾಗಿದ್ದೀವಿ. ಒಟ್ಟಾಗಿ ಮೋದಿ ಅವರನ್ನು ಸೋಲಿಸುತ್ತೇವೆ. ಮೋದಿ ಅವರಿಗೆ ಈ ಲೋಕಸಭಾ ಚುನಾವಣೆ ಅಷ್ಟು ಸುಲಭವಲ್ಲ ಎಂದು ಅವರು ಹೇಳಿದರು.

ಗೆಲ್ಲಿಸಿದ ತೆಲಂಗಾಣ ಜನರಿಗೆ ಭಾರಿ ಉಡುಗೊರೆ ನೀಡಿದ ಸಿಎಂ ಕೆಸಿಆರ್‌ ಗೆಲ್ಲಿಸಿದ ತೆಲಂಗಾಣ ಜನರಿಗೆ ಭಾರಿ ಉಡುಗೊರೆ ನೀಡಿದ ಸಿಎಂ ಕೆಸಿಆರ್‌

ರೈತರ ಸಾಲಮನ್ನಾ: ರಾಹುಲ್

ರೈತರ ಸಾಲಮನ್ನಾ: ರಾಹುಲ್

ಚುನಾವಣೆ ಸಮಯದಲ್ಲಿ ತಾವು ನೀಡಿದ್ದ ಎಲ್ಲ ಭರವೆಯನ್ನು ತಪ್ಪದೇ ಈಡೇರಿಸುತ್ತೇವೆ ಎಂದು ಹೇಳಿದ ರಾಹುಲ್ ಗಾಂಧಿ ಸರ್ಕಾರ ರಚನೆ ಆದ ಕೂಡಲೇ ರೈತರ ಸಾಲಮನ್ನಾ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

15 ವರ್ಷದ ಬಳಿಕ ಛತ್ತೀಸ್ ಗಢದಲ್ಲಿ ಮುಗ್ಗರಿಸಿದ ಬಿಜೆಪಿ: ಸೋಲಿಗೆ 5 ಕಾರಣಗಳು15 ವರ್ಷದ ಬಳಿಕ ಛತ್ತೀಸ್ ಗಢದಲ್ಲಿ ಮುಗ್ಗರಿಸಿದ ಬಿಜೆಪಿ: ಸೋಲಿಗೆ 5 ಕಾರಣಗಳು

ಇವಿಎಂ ಬಗ್ಗೆ ಅನುಮಾನ ತೀರಿಲ್ಲ: ರಾಹುಲ್

ಇವಿಎಂ ಬಗ್ಗೆ ಅನುಮಾನ ತೀರಿಲ್ಲ: ರಾಹುಲ್

ಇವಿಎಂ ಬಗ್ಗೆ ಕಾಂಗ್ರೆಸ್‌ ಅನುಮಾನ ಪಡುತ್ತಿತ್ತು ಆದರೆ ಈಗ ಅದು ಗೆದ್ದಿದೆ. ಈಗ ಇವಿಎಂ ಬಗ್ಗೆ ಅನುಮಾನ ಸ್ಪಷ್ಟವಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ. ಇವಿಎಂ ಬಗ್ಗೆ ಕೇವಲ ಕಾಂಗ್ರೆಸ್‌ ಮಾತ್ರ ಪ್ರಶ್ನೆ ಮಾಡುತ್ತಿಲ್ಲ. ವಿಶ್ವದಾದ್ಯಂತ ಹಲವು ದೇಶಗಳ ಹಲವು ಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಪೂರ್ಣ ಉತ್ತರ ಸಿಗುವವರೆಗೂ ಇವಿಎಂ ಬಗ್ಗೆ ಪ್ರಶ್ನೆಗಳು ಕೇಳುತ್ತಲೇ ಇರುತ್ತೇವೆ ಎಂದು ಅವರು ಹೇಳಿದರು.

ಪಂಚ ರಾಜ್ಯ ಸೋಲಿನ ಬಳಿಕ ಬಿಜೆಪಿಗೆ ಉಳಿದದ್ದು ಎಷ್ಟು ರಾಜ್ಯಗಳು?ಪಂಚ ರಾಜ್ಯ ಸೋಲಿನ ಬಳಿಕ ಬಿಜೆಪಿಗೆ ಉಳಿದದ್ದು ಎಷ್ಟು ರಾಜ್ಯಗಳು?

'ತೆಲಂಗಾಣದಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಿದ್ದೆ'

'ತೆಲಂಗಾಣದಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಿದ್ದೆ'

ಈ ಗೆಲುವು ಕಾಂಗ್ರೆಸ್‌ ಕಾರ್ಯಕರ್ತರ ಮತ್ತು ಪ್ರಜಾಪ್ರಭುತ್ವವನ್ನು ಪ್ರೀತಿಸುವ ಜನಗಳ ಗೆಲುವು ಎಂದ ರಾಹುಲ್ ಗಾಂಧಿ, ಕಾಂಗ್ರೆಸ್ ಸೋತ ರಾಜ್ಯಗಳಲ್ಲಿ, ಗೆದ್ದಿರುವ ಪಕ್ಷಗಳಿಗೆ ಅಭಿನಂದನೆಗಳು ಹಾಗೂ ಅಲ್ಲಿಯೂ ಸಹ ಅವಿರತ ದುಡಿದ ಕಾರ್ಯಕರ್ತರಿಗೆ ಅಭಿನಂದನೆ ಎಂದರು. ತೆಲಂಗಾಣದಲ್ಲಿ ಇನ್ನಷ್ಟು ಉತ್ತಮ ಫಲಿತಾಂಶವನ್ನು ನಿರೀ್ಕಷಿಸಿದ್ದೆ ಎಂದು ಅವರು ಹೇಳಿದರು.

ಪಂಚರಾಜ್ಯ ಫಲಿತಾಂಶ: ಬಿಜೆಪಿ ಧೂಳಿಪಟವಾಗೋಕೆ 5 ಕಾರಣಪಂಚರಾಜ್ಯ ಫಲಿತಾಂಶ: ಬಿಜೆಪಿ ಧೂಳಿಪಟವಾಗೋಕೆ 5 ಕಾರಣ

English summary
Five state election result and congress 's win is clear message to Narendra Modi said AICC president Rahul Gandhi. He said people lost faith in Narendra Modi. He also said we did not let Narendra Modi to win in Lok Sabha elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X