ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ನನ್ನ ಕೊನೆಯ ಭಾಷಣ: ಲೋಸಕಸಭೆಯಲ್ಲಿ ದೇವೇಗೌಡ ಭಾವುಕ

|
Google Oneindia Kannada News

Recommended Video

ಸಂಸತ್ ನಲ್ಲಿ ಎಚ್ ಡಿ ದೇವೇಗೌಡ್ರ ಭಾವುಕವಾದ ಭಾಷಣ | Oneindia Kannada

ನವದೆಹಲಿ, ಫೆಬ್ರವರಿ 08: ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಬಗೆಗಿನ ಚರ್ಚೆ ವೇಳೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು, ಭಾಷಣದ ವೇಳೆ ಭಾವುಕರಾದರು.

ನಾನು 57 ವರ್ಷಗಳಿಂದ ರಾಜ್ಯ ಮತ್ತು ರಾಷ್ಟ್ರಕಾರಣದಲ್ಲಿದ್ದೇನೆ ಈಗ ಅದಕ್ಕೆ ಅಂತ್ಯ ಬಂದಿದೆ, ಸಂಸತ್ತಿನಲ್ಲಿ ಇದು ನನ್ನ ಕೊನೆಯ ಭಾಷಣ ಎಂದ ದೇವೇಗೌಡರು ಭಾವುಕರಾಗಿಯೇ ಸಂಸತ್ತಿನಲ್ಲಿ ತಮ್ಮ ಹಳೆಯ ದಿನಗಳನ್ನು ನೆನೆದರು.

ಸಂಸತ್ತಿನಲ್ಲಿ ಕೆಣಕಿದ ಮೋದಿಗೆ ಟ್ವಿಟ್ಟರ್‌ನಲ್ಲಿ ದೇವೇಗೌಡ ಉತ್ತರ ಸಂಸತ್ತಿನಲ್ಲಿ ಕೆಣಕಿದ ಮೋದಿಗೆ ಟ್ವಿಟ್ಟರ್‌ನಲ್ಲಿ ದೇವೇಗೌಡ ಉತ್ತರ

ತಾವು ಪ್ರಧಾನಿ ಆಗಿದ್ದ ದಿನಗಳು, ಆಗಿನ ತಮ್ಮ ಜೊತೆಗಾರರು, ಅಂದಿನ ರಾಜಕೀಯವನ್ನು ನೆನೆದ ದೇವೇಗೌಡ ಅವರು, ಜ್ಯೋತಿ ಬಸು ಮತ್ತು ವಿಪಿ ಸಿಂಗ್ ಅವರು ಪ್ರಧಾನಿ ಪಟ್ಟ ನಿರಾಕರಿಸಿದ್ದಕ್ಕಾಗಿ ನಾನು ಪ್ರಧಾನಿ ಆಗಬೇಕಾಯಿತು ಎಂದು ಆ ದಿನಗಳನ್ನು ಮೆಲುಕು ಹಾಕಿದರು.

This is my last speech: Deve Gowda emotional speech in Parliment

ನಿನ್ನೆ ಸಂಸತ್‌ನಲ್ಲಿ ಮಾತನಾಡಿ ಮಹಾಘಟಬಂಧನ್‌ ಅನ್ನು 'ಕಲಬೆರಕೆ' ಎಂದು ಟೀಕಿಸಿದ್ದ ಮೋದಿ ಅವರ ಮಾತಿಗೆ ಪ್ರತ್ಯುತ್ತರ ನೀಡಿದ ದೇವೇಗೌಡ ಅವರು, ವಾಜಪೇಯಿ ಅವರು ಸಹ ಮಹಾಘಟಬಂಧನ್‌ನ ನಾಯಕತ್ವ ಹೊತ್ತಿದ್ದರು ಎಂದು ಹೇಳಿದರು.

ದೇವೇಗೌಡರ ಭೇಟಿ ಆದ ನಟ ಶಿವರಾಜ್‌ ಕುಮಾರ್ ದಂಪತಿ ದೇವೇಗೌಡರ ಭೇಟಿ ಆದ ನಟ ಶಿವರಾಜ್‌ ಕುಮಾರ್ ದಂಪತಿ

ಮೈತ್ರಿ ಸರ್ಕಾರಗಳ ಬಗ್ಗೆ ಲಘುವಾದ ಧೋರಣೆ ಬೇಡ ಎಂದು ಮೋದಿ ಅವರಿಗೆ ಹೇಳಿದ ದೇವೇಗೌಡ ಅವರು, ಹೊಂದಾಣಿಕೆ ಉತ್ತಮವಾಗಿದ್ದರೆ ಮೈತ್ರಿ ಸರ್ಕಾರಗಳು ಅತ್ಯುತ್ತಮವಾಗಿ ಕಾರ್ಯ ಮಾಡಬಲ್ಲವು ಎಂದು ಹೇಳಿದ್ದಾರೆ.

ತಾಕತ್ತಿದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಿ: ಬಿಜೆಪಿಗೆ ದೇವೇಗೌಡ ಸವಾಲುತಾಕತ್ತಿದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಿ: ಬಿಜೆಪಿಗೆ ದೇವೇಗೌಡ ಸವಾಲು

ದೇವೇಗೌಡ ಅವರು ಹಾಸನ ಕ್ಷೇತ್ರದ ಪ್ರಸ್ತುತ ಸಂಸದರಾಗಿದ್ದಾರೆ. ಆದರೆ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಈ ಮುಂಚೆಯೇ ಅವರು ಸ್ಪಷ್ಟಪಡಿಸಿದ್ದಾರೆ. 'ವ್ಹೀಲ್‌ಚೇರ್‌ ನಲ್ಲಿ ಸಂಸತ್‌ಗೆ ಹೋಗುವುದಿಲ್ಲ' ಎಂದು ಅವರು ಹೇಳಿದ್ದರು. ಹಾಗಾಗಿಯೇ ಇದು ಲೋಕಸಭೆಯಲ್ಲಿ ಅವರ ಕೊನೆಯ ಭಾಷಣ ಆಗಿದೆ.

English summary
MP Deve Gowda did emotional speech in Parliment today. He said this is my last speech in parliment. I was in politics from 57 year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X