ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್‌ನಲ್ಲಿ ಬಟ್ಟೆ ಖರೀದಿಗೆ ಮುಗಿಬಿದ್ದ ಜನ: ಅಸಲಿ ಕಥೆಯೇನು?

|
Google Oneindia Kannada News

ದೆಹಲಿ, ಮೇ 22: ಕೊರೊನಾ ವೈರಸ್ ಹರಡುವ ಭೀತಿ ಇಲ್ಲದೇ ನೂರಾರು ಜನ ಮಾರುಕಟ್ಟೆಯಲ್ಲಿ ಜಮಾಯಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹೈದರಾಬಾದಿನ ಮದೀನಾ ಮಾರ್ಕೆಟ್ ವಿಡಿಯೋ ಎನ್ನಲಾಗುತ್ತಿದೆ.

Recommended Video

ಶಿವಮೊಗ್ಗದಲ್ಲಿ ಇಬ್ಬರು ಮುಸ್ಲಿಂ ಯುವಕರನ್ನು ಅರೆಸ್ಟ್ ಮಾಡಿದ್ಯಾಕೆ?

ಸಾಲಾಗಿ ಬಟ್ಟೆ ಅಂಗಡಿಗಳಿದ್ದು, ಪ್ರತಿ ಅಂಗಡಿ ಮುಂದೆಯೂ ಜನ ತುಂಬಿದ್ದಾರೆ. ಯಾವುದೇ ಹಬ್ಬಕ್ಕೆ ಅಥವಾ ಸಮಾರಂಭಕ್ಕೆ ಬಟ್ಟೆ ಖರೀದಿಸುವಂತೆ ಜನ ಮುಗಿಬಿದ್ದಾರೆ. ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಯಾವುದೇ ಅಂಜಿಕೆ ಇಲ್ಲದೆ ಹೈದರಾಬಾದ್‌ ಜನ ಮಾರುಕಟ್ಟೆಯಲ್ಲಿ ಸೇರಿದ್ದಾರೆ ಎಂಬ ಟೀಕೆ ವ್ಯಕ್ತವಾಗಿತ್ತು.

Fake: ಲಾಕ್‌ಡೌನ್‌ನಿಂದ ರೈಲು ಬೋಗಿ ನಡುವೆ ಕುಳಿತು ಮಹಿಳೆ ಪ್ರಯಾಣFake: ಲಾಕ್‌ಡೌನ್‌ನಿಂದ ರೈಲು ಬೋಗಿ ನಡುವೆ ಕುಳಿತು ಮಹಿಳೆ ಪ್ರಯಾಣ

ಆದರೆ, ಈ ವಿಡಿಯೋ ಹೈದರಾಬಾದ್‌ ಮಾರ್ಕೆಟ್ ಅಲ್ಲ, ಇದು ಪಾಕಿಸ್ತಾನ ವಿಡಿಯೋ ಎಂದು ಖಚಿತವಾಗಿದೆ. ಪಾಕಿಸ್ತಾನಿ ಸುದ್ದಿ ವಾಹಿನಿಯ ಪತ್ರಕರ್ತರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದು, ಈದ್ ಹಬ್ಬಕ್ಕೆ ಪಾಕಿಸ್ತಾನದಲ್ಲಿ ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ' ಎಂದು ವಿವರಿಸಿದ್ದಾರೆ.

ದೇಶದಲ್ಲಿ ಲಾಕ್‌ಡೌನ್‌ ವಿನಾಯಿತಿ ನೀಡಿದ ಮೇಲೆ ಜನರು ಈದ್ ಹಬ್ಬಕ್ಕೆ ತಯಾರಾಗುತ್ತಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಮೇ 20ರಂದೇ ಪೋಸ್ಟ್ ಮಾಡಿದ್ದಾರೆ.

This Crowded Market Video from Pakistan

ಮುಂದಿನ ವಾರದಲ್ಲಿ ರಂಜಾನ್ ಹಬ್ಬವಿದೆ. ಕೊರೊನಾ ಭೀತಿಯಲ್ಲೂ ಹಬ್ಬದ ಆಚರಣೆಗೆ ಪಾಕಿಸ್ತಾನ ಮುಂದಾಗಿದೆ. ಈವರೆಗೂ ಪಾಕಿಸ್ತಾನದಲ್ಲಿ 50,694 ಜನರಿಗೆ ಕೊರೊನಾ ಸೋಂಕು ತಗುಲಿದೆ. 1067 ಜನರು ಸೋಂಕಿನಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

English summary
Fake News buster: Stores opening up, with a mad rush to stock up ahead of Eid. it's not hyderabad video, is from pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X