ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಕೊರೊನಾದ ಮೂರನೇ ಅಲೆ: ಸಚಿವರು ಹೇಳಿದ್ದೇನು?

|
Google Oneindia Kannada News

ನವದೆಹಲಿ, ಅಕ್ಟೋಬರ್ 29: ದೆಹಲಿಯಲ್ಲಿ ಕೊರೊನಾದ ಮೂರನೇ ಅಲೆ ಆರಂಭವಾಗುವ ಎಲ್ಲಾ ಸಾಧ್ಯತೆಯಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.

ಒಂದೇ ದಿನ 5673 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಕೊರೊನಾದ ಮೂರನೇ ಅಲೆ ಶುರುವಾಗಲಿದೆ ಎಂದರು.

60 ವರ್ಷ ಮೇಲ್ಪಟ್ಟವರು ಈ ಲಸಿಕೆ ಪಡೆದರೆ ಸಾಕು ಕೊರೊನಾ ಸೋಂಕಿನಿಂದ ಮುಕ್ತಿ 60 ವರ್ಷ ಮೇಲ್ಪಟ್ಟವರು ಈ ಲಸಿಕೆ ಪಡೆದರೆ ಸಾಕು ಕೊರೊನಾ ಸೋಂಕಿನಿಂದ ಮುಕ್ತಿ

ಆದರೆ ಈ ವಾರ ಪೂರ್ತಿಯಾಗಿ ಈ ಕುರಿತು ನಿಗಾ ಇಡಬೇಕು. ಅಲ್ಲಿಯವರೆಗೂ ಸರಿಯಾಗಿ ನಾವು ಏನನ್ನೂ ಊಹಿಸಲು ಸಾಧ್ಯವಿಲ್ಲ. ಈಗಲೇ ಇದನ್ನು ಮೂರನೇ ಅಲೆ ಎಂದು ಕರೆಯಲು ಸಾಧ್ಯವಿಲ್ಲ, ಎರಡೇ ದಿನಕ್ಕೆ ಹೊಸ ಸೋಂಕಿತರ ಸಂಖ್ಯೆ ಕಡಿಮೆಯೂ ಕೂಡ ಆಗಬಹುದು. ಆದರೆ ಸಾಧ್ಯತೆ ಇದೆ ಎಂದು ಹೇಳಬಹುದು.

Third Covid Wave In Delhi? Early To Say, But Possibility

ಕಳೆದ ಕೆಲ ವಾರಗಳಿಂದ 4 ಸಾವಿರಕ್ಕೂ ಕಡಿಮೆ ಪ್ರಕರಣಗಳು ಪತ್ತೆಯಾಗುತ್ತಿತ್ತು. ಸೋಮವಾರ 4853 ಪ್ರಕರಣಗಳು ಪತ್ತೆಯಾಗಿದ್ದವು. ದೇಶದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೆ ದೆಹಲಿಯಲ್ಲಿ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ.

ಈ ರೀತಿ ಒಂದೇ ಸಲ ಇಷ್ಟೊಂದು ಕೊರೊನಾ ಪ್ರಕರಣಗಳು ದಾಖಲಾಗುತ್ತವೆ ಎಂದುಕೊಂಡಿರಲಿಲ್ಲ. ಇದೀಗ ಚಳಿಗಾಲವೂ ಕೂಡ ಆರಂಭವಾಗಿದೆ. ಮುಂದಿನ ಮೂರು ತಿಂಗಳು ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆಯೂ ಕೂಡ ಇದೆ. ಒಂದೊಮ್ಮೆ ವ್ಯಕ್ತಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಬಂದರೆ ಕುಟುಂಬದ ಎಲ್ಲರನ್ನೂ ಪರೀಕ್ಷೆ ಮಾಡಬೇಕಾಗುತ್ತದೆ. ಎರಡು ಸಲ ಪರೀಕ್ಷೆ ಮಾಡಿಸಬೇಕು.

ಈ ಮೊದಲು ಮನೆಯಲ್ಲಿ ಲಕ್ಷಣಗಳು ಕಂಡುಬರುವವರಿಗೆ ಕಾಯಲಾಗುತ್ತಿತ್ತು, ಆದರೆ ಇದೀಗ ತಕ್ಷಣವೇ ಪರೀಕ್ಷೆ ಮಾಡಿಸಬೇಕು.
ಯಾವುದೇ ಸಿಂಗಲ್ ಪ್ರಕರಣಗಳು ಕೂಡ ಕಣ್ತಪ್ಪದಂತೆ ನೋಡಿಕೊಳ್ಳಬೇಕು. ಶೀಘ್ರವೇ ಉತ್ತಮ ಫಲಿತಾಂಶ ಲಭ್ಯವಾಗುವ ನಿರೀಕ್ಷೆ ಇದೆ. ದೆಹಲಿಯ ಆಸ್ಪತ್ರೆಗಳಲ್ಲಿ 10 ಸಾವಿರ ಹಾಸಿಗೆಗಳು ಖಾಲಿ ಇವೆ.

English summary
Delhi Health Minister Satyender Jain has said it was too early to say if the record one-day surge of 5,673 cases in the national capital indicated the start of a third wave of COVID-19 infections in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X