ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ದುಷ್ಟರನ್ನು ಜೀವಂತವಾಗಿ ಸುಡಬೇಕು: ನಿರ್ಭಯಾಳ ಕೊನೆ ಹೇಳಿಕೆ

ದೆಹಲಿಯಲ್ಲಿ ಅತ್ಯಾಚಾರಕ್ಕೀಡಾಗಿ, ಸಾವಿಗೀಡಾದ ನಿರ್ಭಯಾಳ ಮರಣಪೂರ್ವ ಹೇಳಿಕೆಯಲ್ಲಿ ಏನಿದೆ? ಆ ಹೆಣ್ಣುಮಗಳು ಹೇಳಿಕೊಂಡ ಅಂದಿನ ಘಟನೆಯ ವಿವರಗಳನ್ನು ಪೊಲೀಸರು ದಾಖಲಿಸಿದ್ದರು. ಅದರ ಮಾಹಿತಿ ಇಲ್ಲಿದೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮೇ 6: ನಿರ್ಭಯಾ ಪ್ರಕರಣದಲ್ಲಿ ತೀರಾ ಮಹತ್ವದ ಪಾತ್ರ ವಹಿಸಿದ್ದು ಆಕೆಯ ಮರಣಪೂರ್ವ ಹೇಳಿಕೆ. ಆಕೆ ನೀಡಿದ್ದ ಹೇಳಿಕೆ ಆಧಾರದಲ್ಲೇ ಸುಪ್ರೀಂ ಕೋರ್ಟ್ ನಾಲ್ವರು ಅಪರಾಧಿಗಳಿಗೆ ಗಲ್ಲು ಕಾಯಂ ಮಾಡಿದ್ದು, ನಿರ್ಭಯಾಳ ಅತ್ಯಾಚಾರಿಗಳು ಈ ಭೂಮಿ ಮೇಲಿನ ಅತ್ಯಂತ ಕ್ರೂರಿಗಳು.

ಡಿಸೆಂಬರ್ 16,2012ರ ರಾತ್ರಿ 9ರಿಂದ 9.15ರ ಮಧ್ಯೆ ದಕ್ಷಿಣ ದೆಹಲಿಯಲ್ಲಿ ಬಸ್ ನಲ್ಲಿ ನಿರ್ಭಯಾಳ ಅತ್ಯಾಚಾರ ಮಾಡಿ, ಸಾಯುವ ಸ್ಥಿತಿಯಲ್ಲಿ ಆಕೆಯನ್ನು ರಸ್ತೆ ಬದಿ ಬಿಸಾಡಿ ಹೋಗಿದ್ದರು. ಧೆಹಲಿ ಪೊಲೀಸರು ನಿರ್ಭಯಾಳ ಮರಣ ಪೂರ್ವ ಹೇಳಿಕೆ ಆಧಾರದಲ್ಲೇ ಪ್ರಕರಣ ದಾಖಲಿಸಿದರು.[ರಕ್ಕಸರಿಗೆ ಗಲ್ಲು: ಸುಪ್ರೀಂ ತೀರ್ಪಿಗೆ ಟ್ವಿಟ್ಟಿಗರ ಹರ್ಷ]

They should be burnt alive: Read Nirbhaya's dying declaration

ಆರೋಪಿಗಳಿಗೆ ಮರಣದಂಡನೆ ಆಗಬೇಕು ಅನ್ನೋದನ್ನು ವಿಚಾರಣೆ ವೇಳೆ ಹಲವು ಬಾರಿ ಕೇಳಿಕೊಂಡಿದ್ದು ಅದರ ಆಧಾರದ ಮೇಲೆ. ಹೌದು, ಆ ಹೆಣ್ಣುಮಗಳು ತನ್ನ ಸಾವಿಗೂ ಮುನ್ನ ಪೊಲೀಸರಿಗೆ ಹೇಳಿದ್ದು ಏನು ಎಂಬುದನ್ನು ಇಲ್ಲಿ ಕೊಡಲಾಗಿದೆ. ಇದನ್ನು ಪೊಲೀಸರ ಮೂಲದಿಂದ ಪಡೆಯಲಾಗಿದೆ.

* ನಿಮ್ಮ ಹೆಸರೇನು, ನಿಮ್ಮ ತಂದೆ ಹೆಸರು ಮತ್ತು ವಿಳಾಸ ತಿಳಿಸಿ
ಇದನ್ನು ಓದುಗರಿಗೆ ತಿಳಿಸಬಾರದು ಎಂಬ ಕಾರಣದಿಂದ ತಿಳಿಸುತ್ತಿಲ್ಲ

They should be burnt alive: Read Nirbhaya's dying declaration

* ನೀವು ಕೆಲಸ ಮಾಡ್ತಿದಿರೋ ಅಥವಾ ಓದ್ತಿದೀರಾ?
ನಾನು ಬ್ಯಾಚುಲರ್ ಆಫ್ ಫಿಸಿಯೋಥೆರಪಿ ಪೂರ್ತಿ ಮಾಡಿದ್ದೀನಿ

* ಈ ಘಟನೆ ನಡೆದಿದ್ದು ಯಾವಾಗ?
ಡಿಸೆಂಬರ್ 16, 2012ರ ರಾತ್ರಿ 9ರಿಂದ 9.15ರ ಮಧ್ಯೆ[ನಿರ್ಭಯಾ ಪ್ರಕರಣದಲ್ಲಿ ಬಿಡುಗಡೆಯಾದವನಿಗೆ ಅದೆಲ್ಲಾ ನೆನಪೇ ಇಲ್ವಂತೆ!]

* ಆ ದಿನ ನೀವು ಎಲ್ಲಿಗೆ ಹೋಗಿದ್ದಿರಿ?
ನನ್ನ ಸ್ನೇಹಿತನ ಜತೆಗೆ ಸಿಟಿ ವಾಕ್ ಮಾಲ್ ಗೆ ಲೈಫ್ ಆಫ್ ಪೈ ಸಿನಿಮಾಗೆ ಹೋಗಿದ್ದೆ. ಆ ನಂತರ ಆಟೋರಿಕ್ಷಾದಲ್ಲಿ ಮುನಿರ್ಕಾಗೆ ಹೊರಟಿದ್ದೆ.

They should be burnt alive: Read Nirbhaya's dying declaration

* ಆ ನಂತರ ಏನಾಯಿತು?
ನಾನು ದ್ವಾರಕಾ ಸೆಕ್ಟರ್ ಗೆ ಹೋಗಬೇಕಿತ್ತು. ನಾನು ಹಾಗೂ ನನ್ನ ಸ್ನೇಹಿತ ಹತ್ತು ರುಪಾಯಿ ಚಾರ್ಜ್ ಕೊಟ್ಟು, ಒಂದು ಬಿಳಿ ಬಸ್ ಹತ್ತಿದ್ವಿ.

* ಆ ಬಸ್ ನಲ್ಲಿ ಎಷ್ಟು ಜನ ಇದ್ದರು?
ಆರೇಳು ಜನ ಇದ್ದರು

* ಬಸ್ ನಲ್ಲಿ ಏನಾಯಿತು?
ಆ ಬಸ್ ಮಲಯ್ ಮಂದಿರ್ ತಲುಪಿದಾಗ ಕಂಡಕ್ಟರ್ ಬಾಗಿಲು ಮುಚ್ಚಿ, ಲೈಟ್ ಆಫ್ ಮಾಡಿದ. ನನ್ನ ಸ್ನೇಹಿತನಿಗೆ ಅವರೆಲ್ಲ ಸೇರಿ ಹೊಡೆದರು. ನನ್ನನ್ನ ಹಿಂದಿನ ಸೀಟಿಗೆ ಎಳೆದುಕೊಂಡು ಹೋದರು, ನನ್ನ ಮೇಲೆ ಅತ್ಯಾಚಾರ ಮಾಡಿದರು. ನನ್ನ ಗೆಳೆಯನ ಪರ್ಸ್ ತೆಗೆದುಕೊಂಡರು. ಈ ರೀತಿ ಗಂಟೆಗಳ ಕಾಲ ನಡೆಯಿತು.['ನಿರ್ಭಯಾ 13 ದಿನ ಬದುಕುಳಿದಿದ್ದೇ ದೊಡ್ಡ ಪವಾಡ'!]

They should be burnt alive: Read Nirbhaya's dying declaration

* ಎಲ್ಲಾದರೂ ಬಸ್ ನ ನಿಲ್ಲಿಸಿದರಾ?
ಇಲ್ಲ

* ನೀವು ಯಾರಿಗಾದರೂ ಸಹಾಯ ಮಾಡುವಂತೆ ಕೇಳಿಕೊಂಡರಾ?
ಅವರು ನನ್ನ ಮೊಬೈಲ್ ನ ಕಸಿದುಕೊಂಡಿದ್ದರು. ನಾವು ಯಾರಿಗೂ ಸಹಾಯಕ್ಕಾಗಿ ಕರೆ ಮಾಡಲಿಲ್ಲ. ನಮ್ಮ ಅಳುವನ್ನು ಯಾರೂ ಕೇಳಿಸಿಕೊಳ್ಳಲಿಲ್ಲ.

They should be burnt alive: Read Nirbhaya's dying declaration

* ಅವರು ಮಾತನಾಡುವಾಗ ಯಾವುದಾದರೂ ಹೆಸರು ಕರೆಯುತ್ತಿದ್ದರಾ?
ರಾಮ್ ಸಿಂಗ್, ಠಾಕೂರ್, ಮುಕೇಶ್, ರಾಜು, ಪವನ್, ವಿನಯ್ ಎಂದು ಕರೆದುಕೊಳ್ಳುತ್ತಿದ್ದರು. ಕತ್ತಲೆ ಆಗಿದ್ದರಿಂದ ಅವರೆಲ್ಲ ಒಂದೇ ಥರ ಕಾಣ್ತಿದ್ದರು.

* ನಿಮಗೆ ಆಗ ಪ್ರಜ್ಞೆ ಇತ್ತೆ?
ನಾನು ಎಚ್ಚರವಾಗಿದ್ದೆ ಹಾಗೂ ಪ್ರಜ್ಞೆ ಇತ್ತು. ಆ ನಂತರ ಸುಸ್ತಾಗಿ ಕುಸಿದು ಬಿದ್ದೆ. ಅವರೆಲ್ಲ ನನ್ನನ್ನು ಒದೆಯುತ್ತಿದ್ದರು, ಗುದಿಯುತ್ತಿದ್ದರು.

* ಆ ನಂತರ ಏನಾಯಿತು?
ನಮ್ಮನ್ನು ಬಸ್ಸಿನಿಂದ ಬಿಸಾಡಿದರು[ನಿರ್ಭಯಾ ಪ್ರಕರಣ ನಡೆದು ಬಂದ ಹಾದಿ]

* ನಿಮಗೆ ಹೀಗೆ ಮಾಡಿದವರಿಗೆ ಏನಾಗಬೇಕು
ಅವರನ್ನು ನೇಣಿಗೆ ಹಾಕಬೇಕು ಅಥವಾ ಜೀವಂತವಾಗಿ ಸುಟ್ಟಹಾಕಬೇಕು. ಈ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದೀನಿ. ನನ್ನ ಮೇಲೆ ಯಾವುದೇ ಬಲವಂತ ಅಥವಾ ಒತ್ತಡ ಇಲ್ಲ.

English summary
The Delhi police case files have the dying declaration of Nirbhaya and the prosecution had cited the same several times while seeking a death penalty for the culprits. This is what her dying declaration available with the Delhi police states
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X