ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಎಎಪಿ ಜೊತೆ ಮೈತ್ರಿ ಇಲ್ಲ: ಕಾಂಗ್ರೆಸ್ ಸ್ಪಷ್ಟನೆ

|
Google Oneindia Kannada News

ನವದೆಹಲಿ, ಏಪ್ರಿಲ್ 12: ರಾಜಧಾನಿ ದೆಹಲಿಯಲ್ಲಿ ಬಹಳ ದಿನಗಳಿಂದ ಲೋಕಸಭೆ ಚುನಾವಣೆಗಾಗಿ ನಡೆಯುತ್ತಿದ್ದ ಮೈತ್ರಿ ಮಾತುಕತೆಗೆ ಕೊನೆಗೂ ತೆರೆಬಿದ್ದಿದ್ದು, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಯಾವುದೇ ರೀತಿಯ ಮೈತ್ರಿಯಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

"ಕಾಂಗ್ರೆಸ್ ನೊಂದಿಗೆ ಎಲ್ಲಾ ರಾಜ್ಯಗಳಲ್ಲೂ ಮೈತ್ರಿ ಮಾಡಿಕೊಳ್ಳಲು ಎಎಪಿ ಬಯಸಿದೆ. ಆದರೆ ನಾವು ದೆಹಲಿಯಲ್ಲಿ ಮಾತ್ರವೇ ಮೈತ್ರಿ ಬೇಡಿಕೆ ಇಟ್ಟಿದ್ದೇವೆ. ಕೇವಲ ದೆಹಲಿಯಲ್ಲಷ್ಟೇ ಆದರೆ ನಾವು ಮೈತ್ರಿಗೆ ಸಿದ್ಧವಿಲ್ಲ ಎಂದು ಎಎಪಿ ಹೇಳಿದ್ದರಿಂದ ಕಾಂಗ್ರೆಸ್ ಸಹ ಮೈತ್ರಿ ಮಾತುಕತೆಗೆ ತೆರೆ ಎಳೆದು ಸ್ವತಂತ್ರವಾಗಿ ಸ್ಪರ್ಧಿಸಲಿದೆ" ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ದೆಹಲಿ ಉಸ್ತುವಾರಿ ಪಿ ಸಿ ಚಾಕೋ ಹೇಳಿದ್ದಾರೆ.

ದೆಹಲಿ: 'ಪೊರಕೆ' ಹಿಡಿಯಲು ಹೋದ 'ಕೈ'ಗೆ ಮುಖಭಂಗ, ಎಎಪಿ ಸೆಡ್ಡು ದೆಹಲಿ: 'ಪೊರಕೆ' ಹಿಡಿಯಲು ಹೋದ 'ಕೈ'ಗೆ ಮುಖಭಂಗ, ಎಎಪಿ ಸೆಡ್ಡು

"ದೆಹಲಿಯಲ್ಲಿ ಕಾಂಗ್ರೆಸ್ಸಿಗೆ ಮೂರು ಮತ್ತು ಎಎಪಿಗೆ ನಾಲ್ಕು ಕ್ಷೇತ್ರಗಳನ್ನು ಬಿಟ್ಟುಕೊಟ್ಟು ಮೈತ್ರಿ ಮಾಡಿಕೊಳ್ಳಲು ನಾವು ಈಗಲೂ ಸಿದ್ಧರಿದ್ದೇವೆ. ಆದರೆ ದೆಹಲಿಗೆ ಮಾತ್ರ ಇದು ಅನ್ವಯವಾಗುತ್ತದೆ. ಇದಕ್ಕೆ ಎಎಪಿ ಸಿದ್ಧವಿಲ್ಲ" ಎಂದು ಅವರು ಹೇಳಿದರು.

There will not be any alliance between AAP and Congress in Delhi

"ನಮ್ಮ ಉದ್ದೇಶ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು. ಎರಡೂ ಪಕ್ಷಗಳ ಉದ್ದೇಶವೂ ಅದೇ ಆಗಿರುವಾಗ ಮೈತ್ರಿಗೆ ಎಎಪಿ ಸಿದ್ಧವಾಗಬೇಕಿತ್ತು. ಆದರೆ ಅದು ಬಿಜೆಪಿಯನ್ನು ಸೋಲಿಸುವ ಗುರಿಯನ್ನು ಹೊಂದಿದಂತಿಲ್ಲ" ಎಂದು ಛಾಕೋ ಅಭಿಪ್ರಾಯಪಟ್ಟರು.

ದೆಹಲಿಯಲ್ಲಿ AAP-ಕಾಂಗ್ರೆಸ್ ದೋಸ್ತಿಗೆ ಪವಾರ್ ಮಧ್ಯಸ್ಥಿಕೆ! ದೆಹಲಿಯಲ್ಲಿ AAP-ಕಾಂಗ್ರೆಸ್ ದೋಸ್ತಿಗೆ ಪವಾರ್ ಮಧ್ಯಸ್ಥಿಕೆ!

ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿ ಮಾಡಿಕೊಳ್ಳಬೇಕೆಂದು ಇತ್ತೀಚೆಗಷ್ಟೆ ಎನ್ ಸಿಪಿ ನಾಯಕ ಶರದ್ ಪವಾರ್ ಅವರೇ ಖುದ್ದು ಮಧ್ಯಸ್ಥಿಕೆ ವಹಿಸಿ ಉಭಯ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿದ್ದರಾದರೂ, ಅದೂ ವಿಫಲವಾಗಿತ್ತು.

English summary
Congress told that there will not be any alliance between Congress and Aam Admi Party in Delhi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X