ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ: ನಿತಿನ್ ಗಡ್ಕರಿ

|
Google Oneindia Kannada News

ನವದೆಹಲಿ, ನವೆಂಬರ್ 23: ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಮತ್ತು ವೇಗಗೊಳಿಸುವ ಪರಿಸರ ವ್ಯವಸ್ಥೆಯನ್ನು ರಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮತ್ತು ಎಂಎಸ್‌ಎಂಇ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ.

ವರ್ಚುವಲ್ ಸಮ್ಮೇಳನ 'ಆಟೋ ಸರ್ವ್ 2020ರ 9ನೇ ಆವೃತ್ತಿ' ಎಲೆಕ್ಟ್ರಿಕ್ ಮೊಬಿಲಿಟಿ ಕಾನ್ಫರೆನ್ಸ್ 2020ನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ''ಆಟೋಮೋಟಿವ್ ಉದ್ಯಮವನ್ನು ಜಗತ್ತಿನೊಂದಿಗೆ ಸುಗಮಗೊಳಿಸುವ ಮೂಲಕ ಭಾರತದಲ್ಲಿ ಜಾಗತಿಕ ಸಾಮರ್ಥ್ಯವನ್ನು ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ'' ಎಂದು ಗಡ್ಕರಿ ಹೇಳಿದರು.

2021ಕ್ಕೆ ಮಾರುಕಟ್ಟೆ ಪ್ರವೇಶಿಸಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್2021ಕ್ಕೆ ಮಾರುಕಟ್ಟೆ ಪ್ರವೇಶಿಸಲಿದೆ ಓಲಾ ಎಲೆಕ್ಟ್ರಿಕ್ ಸ್ಕೂಟರ್

ಇದರ ಜೊತೆಗೆ ಮಾಲಿನ್ಯವನ್ನು ಕಡಿಮೆ ಮಾಡುವ ವಿಶಾಲ ರಾಷ್ಟ್ರೀಯ ಕಾರ್ಯಸೂಚಿಯನ್ನು ಸಾಧಿಸಲು ಜಂಟಿಯಾಗಿ ಕೆಲಸ ಮಾಡಲು ವಾಹನ ಉದ್ಯಮವು ಒಗ್ಗೂಡಬೇಕು ಎಂದು ಕರೆನೀಡಿ, ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

There Will Be At Least 1 EV Charging Kiosk Each At 69,000 Petrol Pumps Across Country: Nitin Gadkari

ಸರ್ಕಾರದ ಕಾರ್ಯ ಯೋಜನೆಗಳಿಂದಾಗಿ ಜಿಎಸ್‌ಟಿ ದರ ಶೇ.5ರಷ್ಟು ಇಳಿಕೆಯಾಗಿದೆ. ದ್ವಿಚಕ್ರ ಮತ್ತು ತಿಚಕ್ರ ವಾಹನಗಳ ಬ್ಯಾಟರಿ ವೆಚ್ಚವನ್ನು, ವಾಹನ ವೆಚ್ಚದೊಂದಿಗೆ ಡಿ-ಲಿಂಕ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಏಕೆಂದರೆ ಇದು ಸುಮಾರು ಶೇ. 30ರಷ್ಟು ವೆಚ್ಚವನ್ನು ಹೊಂದಿರುತ್ತದೆ ಎಂದಿದ್ದಾರೆ.

ಉತ್ತಮ ಪರಿಸರ ವ್ಯವಸ್ಥೆಗೆ ಬ್ಯಾಟರಿ ಚಾರ್ಜಿಂಗ್ ಬಹಳ ಮುಖ್ಯ, ಜನರನ್ನು ಎಲೆಕ್ಟ್ರಿಕ್ ವಾಹನಗಳ ಖರೀದಿ ಮತ್ತು ಬಳಕೆಗೆ ಪ್ರೇರೇಪಿಸಲು ದೇಶಾದ್ಯಂತ ಸುಮಾರು 69 ಸಾವಿರ ಪೆಟ್ರೋಲ್ ಪಂಪ್‌ಗಳಲ್ಲಿ ಕನಿಷ್ಠ ಒಂದು ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕಿಯೋಸ್ಕ್ ಸ್ಥಾಪಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಅವರು ಹೇಳಿದರು.

English summary
Government is trying to create an ecosystem to accelerate the uptake of electric vehicles in the country says Road Transport and Highways & MSME minister Nitin gadkari
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X