ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಕೆಟ್ ನಲ್ಲಿ ಹಸಿರು ಪಟಾಕಿ ಎಂಬುದೇ ಇಲ್ಲ; ದೆಹಲಿಯಲ್ಲಿ ಮಾರಾಟಗಾರರ ಅಳಲು

|
Google Oneindia Kannada News

ನವದೆಹಲಿ, ನವೆಂಬರ್ 7: " 'ಹಸಿರು ಪಟಾಕಿ' ಅಂದರೇನು ಅಂತ ಸಹ ನಮಗೆ ಗೊತ್ತಿಲ್ಲ. ಮಾರ್ಕೆಟ್ ನಲ್ಲಿ ಆ ರೀತಿಯದು ಯಾವುದೂ ಇಲ್ಲ" ಎಂದು ಸದರ್ ಬಜಾರ್ ವೆಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಎಸ್.ಛಬ್ರಾ ಬುಧವಾರ ಹೇಳಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ದೆಹಲಿಯಲ್ಲಿ ಹಸಿರು ಪಟಾಕಿ (ಪರಿಸರಸ್ನೇಹಿ ಪಟಾಕಿ) ಮಾತ್ರ ಸಿಡಿಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಹಸಿರು ತರಕಾರಿಯೊಳಗೆ ಪಟಾಕಿಗಳನ್ನು ಇಟ್ಟು, ಆಕ್ರೋಶ ಹೊರ ಹಾಕಲಾಯಿತು.

ದೀಪಾವಳಿಗೆ ಇರುವ ಪಟಾಕಿ ದಾಸ್ತಾನು ಬಳಕೆ; ದೆಹಲಿ, ಎನ್ ಸಿಆರ್ ಗೆ ನಿರ್ಬಂಧದೀಪಾವಳಿಗೆ ಇರುವ ಪಟಾಕಿ ದಾಸ್ತಾನು ಬಳಕೆ; ದೆಹಲಿ, ಎನ್ ಸಿಆರ್ ಗೆ ನಿರ್ಬಂಧ

ನಮಗೆ ಹಸಿರು ಪಟಾಕಿಗಳು ಅಂದರೇನು ಅಂತಲೇ ಗೊತ್ತಿಲ್ಲ. ನಾವು ಈ ಬಗ್ಗೆ ಸುಪ್ರೀಂ ಕೋರ್ಟ್ ನ ಕೇಳಿದಾಗ, ಅಂಥ ಪಟಾಕಿಗಳ ಪಟ್ಟಿ ನೀಡುವುದಾಗಿ ತಿಳಿಸಿದರು. ಆದರೆ ಅದಾಗಿ ಮರುದಿನಕ್ಕೆ, ಪಟಾಕಿ ಪಟ್ಟಿ ನೀಡುವುದಕ್ಕೆ ಮತ್ತೆರಡು ದಿನ ಬೇಕಾಗುತ್ತದೆ ಎಂದು ಹೇಳಿದರು. ಮಾರ್ಕೆಟ್ ನಲ್ಲಿ ಹಸಿರು ಪಟಾಕಿ ಅಂತ ಯಾವುದೂ ಇಲ್ಲ ಎಂದು ಛಬ್ರಾ ಹೇಳಿದ್ದಾರೆ.

There is no green cracker in the market, protest against SC order

ಈ ಪಟಾಕಿಗಳಿಂದ ಮಾಲಿನ್ಯ ಆಗುವುದಿಲ್ಲ: 'ಹಸಿರು ಪಟಾಕಿ' ಹೊಸ ಫಾರ್ಮುಲಾ ಸಿದ್ಧಈ ಪಟಾಕಿಗಳಿಂದ ಮಾಲಿನ್ಯ ಆಗುವುದಿಲ್ಲ: 'ಹಸಿರು ಪಟಾಕಿ' ಹೊಸ ಫಾರ್ಮುಲಾ ಸಿದ್ಧ

ಸುಪ್ರೀಂ ಕೋರ್ಟ್ ಈ ಆದೇಶವನ್ನು ಒಂದು ವರ್ಷದ ಹಿಂದೆಯೇ ಮಾಡಬೇಕಾಗಿತ್ತು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

English summary
Sadar Bazar Welfare Association is staging a protest against the SC order on green crackers, by putting firecrackers inside green vegetables. President of the Association HS Chhabra says "We don't even know what green crackers are. There is no green cracker in the market."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X