ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಹಾರ್ ಜೈಲಿನಲ್ಲಿ ಮತ್ತೆ ಕೈದಿ ಕೊಲೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 13 : ದೇಶದ ಅತೀ ಭದ್ರತೆಯ ಜೈಲು ಎಂಬ ಖ್ಯಾತಿ ಪಡೆದಿರುವ ತಿಹಾರ್ ಜೈಲಿನಲ್ಲಿ ಕೈದಿಯ ಹತ್ಯೆಯಾಗಿದೆ. 2015ರಲ್ಲಿ ಇದುವರೆಗೂ 21 ಕೈದಿಗಳು ಮೃತಪಟ್ಟಿದ್ದು, ಜೈಲಿನ ಸ್ಥಿತಿ-ಗತಿ, ರಕ್ಷಣೆ ಬಗ್ಗೆ ಕುರಿತು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಈ ವರ್ಷದ ತಿಹಾರ್ ಜೈಲಿನಲ್ಲಿ ಸಂಭವಿಸಿದ ಅನೇಕ ಸಾವುಗಳು ಅಸ್ವಾಭಾವಿಕವಾದವು. ಗ್ಯಾಂಗ್‌ ವಾರ್‌ಗೆ ಜೈಲು ಕುಖ್ಯಾತಿ ಪಡೆದಿದ್ದು, ಇದರಿಂದಲೇ ಅನೇಕ ಖೈದಿಗಳ ಕೊಲೆಯಾಗಿದೆ. ವಿಐಪಿ ಕೈದಿಗಳಿಗಳಿರುವ ಜೈಲಿನಲ್ಲಿ ಗ್ಯಾಂಗ್ ವಾರ್ ನಡೆಯುತ್ತದೆ ಎಂಬುದು ಜೈಲಿನ ಭದ್ರತೆಯ ಬಗ್ಗೆ ಪ್ರಶ್ನೆಯನ್ನು ಎತ್ತಿದೆ.

tihar jail

2014ರಲ್ಲಿ ಜೈಲಿನಲ್ಲಿ 25 ಸಾವುಗಳು ಸಂಭವಿಸಿದ್ದವು. ಗ್ಯಾಂಗ್ ವಾರ್ ಮತ್ತು ಬ್ಲೇಡ್‌ ನಿಂದ ಹಲ್ಲೆ ಮಾಡಿ ಕೈದಿಗಳನ್ನು ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣಗಳ ನಂತರ ಜೈಲಿನ 30 ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿತ್ತು. ಆದರೂ ಜೈಲಿನ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ.

ಕೈದಿಗಳ ಸಂಖ್ಯೆ ಹೆಚ್ಚಾಗಿದೆ : ತಿಹಾರ್ ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಕೈದಿಗಳಿಗೆ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತಿದೆ. 6,200 ಕೈದಿಗಳು ಇರಬಹುದಾದದ ಜೈಲಿನಲ್ಲಿ 14,000 ಕೈದಿಗಳಿದ್ದಾರೆ. ಕೈದಿಗಳಿಗೆ ಹೋಲಿಕೆ ಮಾಡಿದರೆ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದೆ.

English summary
The death toll in the Tihar jail this year has gone up to 21. Gang wars, drugs, health related and suicides are the causes for the deaths taking place in this so-called high security jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X