ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಶಿಕ್ಷೆ ಕೊಡಬೇಕು: ಜಯಾ ಬಚ್ಚನ್

|
Google Oneindia Kannada News

ನವದೆಹಲಿ, ಡಿಸೆಂಬರ್ 02: ತೆಲಂಗಾಣದಲ್ಲಿ ಪಶು ವೈದ್ಯೆ ಮೇಲೆ ಅತ್ಯಾಚಾರ ಎಸಗಿರುವ ಕಾಮುಕರಿಗೆ ಸಾರ್ವಜನಿಕವಾಗಿ ಶಿಕ್ಷೆಯನ್ನು ಕೊಡಬೇಕೆಂದು ರಾಜ್ಯಸಭೆ ಸದಸ್ಯೆ ಜಯಾ ಬಚ್ಚನ್ ಆಕ್ರೋಶ ಭರಿತರಾದರು.

ಈ ವಿಷಯವಾಗಿ ರಾಜ್ಯಸಭಾ ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ಜಯಾ ಬಚ್ಚನ್, ಇಂತಹ ಕಾಮುಕ, ಕ್ರೂರ, ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು, ಸರ್ಕಾರ ಮತ್ತು ನ್ಯಾಯಾಲಯ ಈ ಕೂಡಲೇ ಸ್ಪಷ್ಟ ಹಾಗೂ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಈ ಪ್ರಕರಣದಲ್ಲಿ ಏನಾಗಿದೆ ಎಂದು ದೇಶದ ಜನತೆಗೆ ಗೊತ್ತಾಗಿದೆ, ಸರ್ಕಾರ ಇದನ್ನು ಹೇಗೆ ನಿಭಾಯಿಸಿ, ಬೇಧಿಸುತ್ತದೆ ಮತ್ತು ಅತ್ಯಾಚಾರಕ್ಕೆ ಒಗಾದ ಕುಟುಂಬಕ್ಕೆ ಹೇಗೆ ನ್ಯಾಯ ಒದಗಿಸುತ್ತದೆ ಎಂಬುದನ್ನು ದೇಶದ ಜನತೆ ಕಾಯುತ್ತಿದೆ ಎಂದು ಭಾವುಕವಾಗಿ ನುಡಿದರು.

ತೆಲಂಗಾಣ ಅತ್ಯಾಚಾರ: ಆರೋಪಿಗಳಿಗೆ ಜೈಲಲ್ಲಿ ಮಟನ್ ಕರಿ ಭೋಜನತೆಲಂಗಾಣ ಅತ್ಯಾಚಾರ: ಆರೋಪಿಗಳಿಗೆ ಜೈಲಲ್ಲಿ ಮಟನ್ ಕರಿ ಭೋಜನ

ಘಟನೆ ನಡೆದ ಸ್ಥಳದಲ್ಲಿ ಅಧಿಕಾರಿಗಳು ಭದ್ರತೆ ಒದಗಿಸಲು ಯಾಕೆ ವಿಫಲರಾದರು, ಅವರು ತಮ್ಮ ಕೆಲಸ ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ ಎಂದು ಭದ್ರತಾ ವೈಫಲ್ಯ ಪ್ರಶ್ನಿಸಿದರು. ಆರೋಪಿಗಳು ಮಾಡಿರುವ ಕೆಲಸ ಹೇಯವಾದ ಕೃತ್ಯವಾಗಿದ್ದು, ಇವರನ್ನು ಗಲ್ಲಿಗೇರಿಸದೇ ಬಿಡಬಾರದು ಎಂದರು.

ಪೊಲೀಸ್ ಅಧಿಕಾರಿಗಳ ಭದ್ರತಾ ವೈಫಲ್ಯ

ಪೊಲೀಸ್ ಅಧಿಕಾರಿಗಳ ಭದ್ರತಾ ವೈಫಲ್ಯ

ಈ ಪ್ರಕರಣದಲ್ಲಿ ಏನಾಗಿದೆ ಎಂದು ದೇಶದ ಜನತೆಗೆ ಗೊತ್ತಾಗಿದೆ, ಸರ್ಕಾರ ಇದನ್ನು ಹೇಗೆ ನಿಭಾಯಿಸಿ, ಬೇಧಿಸುತ್ತದೆ ಮತ್ತು ಅತ್ಯಾಚಾರಕ್ಕೆ ಒಗಾದ ಕುಟುಂಬಕ್ಕೆ ಹೇಗೆ ನ್ಯಾಯ ಒದಗಿಸುತ್ತದೆ ಎಂಬುದನ್ನು ದೇಶದ ಜನತೆ ಕಾಯುತ್ತಿದೆ ಎಂದು ಭಾವುಕವಾಗಿ ನುಡಿದರು.

ಘಟನೆ ನಡೆದ ಸ್ಥಳದಲ್ಲಿ ಅಧಿಕಾರಿಗಳು ಭದ್ರತೆ ಒದಗಿಸಲು ಯಾಕೆ ವಿಫಲರಾದರು, ಅವರು ತಮ್ಮ ಕೆಲಸ ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ ಎಂದು ಭದ್ರತಾ ವೈಫಲ್ಯ ಪ್ರಶ್ನಿಸಿದರು. ಆರೋಪಿಗಳು ಮಾಡಿರುವ ಕೆಲಸ ಹೇಯವಾದ ಕೃತ್ಯವಾಗಿದ್ದು, ಇವರನ್ನು ಗಲ್ಲಿಗೇರಿಸದೇ ಬಿಡಬಾರದು ಎಂದರು.

ನ್ಯಾಯಾಲಯದಿಂದ ಒಳ್ಳೆಯ ತೀರ್ಪು ಬರುವ ನಿರೀಕ್ಷೆ

ನ್ಯಾಯಾಲಯದಿಂದ ಒಳ್ಳೆಯ ತೀರ್ಪು ಬರುವ ನಿರೀಕ್ಷೆ

ರಾಜ್ಯಸಭೆಯಲ್ಲಿ ಇತರ ನಾಯಕರು ಇವರ ಮಾತಿಗೆ ಸಹಮತ ವ್ಯಕ್ತಪಡಿಸಿದರು. ಫಾಸ್ಟ್ ಟ್ರ್ಯಾಕ್ ಕೋರ್ಟಿಗೆ ಈ ಪ್ರಕರಣವನ್ನು ಬೇಗನೆ ಹಸ್ತಾಂತರಿಸಿ, ಸಾಧ್ಯವಾದಷ್ಟು ಬೇಗ ನ್ಯಾಯ ಕೊಡಿಸಬೇಕೆಂದು ಒಕ್ಕೊರಲಿನಿ೦ದ ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಶಾಂತನು ಸೇನ್ ಮಾತನಾಡಿ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯನ್ನು ಸಾರ್ವಜನಿಕವಾಗಿಯೇ ನೀಡಬೇಕು, ಅಂದಾಗ ಜನ ಇಂತಹ ತಪ್ಪು ಮಾಡಲು ಹಿಂಜರಿಯುತ್ತಾರೆ, ಮಾಡುವುದಕ್ಕೂ ಮುನ್ನ ಯೋಚನೆ ಮಾಡುತ್ತಾರೆ ಎಂದರು.

ವೈದ್ಯೆ ಅತ್ಯಾಚಾರ: ಆರೋಪಿಗಳ ಬಗ್ಗೆ ಇನ್ನಷ್ಟು ಆತಂಕಕಾರಿ ಮಾಹಿತಿವೈದ್ಯೆ ಅತ್ಯಾಚಾರ: ಆರೋಪಿಗಳ ಬಗ್ಗೆ ಇನ್ನಷ್ಟು ಆತಂಕಕಾರಿ ಮಾಹಿತಿ

ಆರೋಪಿಗಳಿಂದ ಒಂದೊಂದೆ ಸತ್ಯ ಹೊರಕ್ಕೆ

ಆರೋಪಿಗಳಿಂದ ಒಂದೊಂದೆ ಸತ್ಯ ಹೊರಕ್ಕೆ

ತೆಲಂಗಾಣ ಪಶು ವೈದ್ಯೆಯನ್ನು ಅತ್ಯಾಚಾರ ಮಾಡಿ ಉಸಿರುಗಟ್ಟಿ ಸಾಯಿಸಿದ ಮೇಲೂ ಪಾಪಿಗಳು ಅತ್ಯಾಚಾರ ಮಾಡಿದ್ದಾರೆ. ಶವ ಅನ್ನುವುದನ್ನು ನೋಡದೇ ಅತ್ಯಾಚಾರ ಮಾಡಿದ್ದಾರೆ, ಅವರದು ಕ್ರೂರ ಮನಸ್ಥಿತಿಯಾಗಿದೆ. ಆ ಸತ್ಯವೂ ಬಯಲಾಗಿದ್ದು ಅವರನ್ನು ಸುಮ್ಮನೇ ಬಿಡಬಾರದೆಂದರು.

ದಿನ ಕಳೆದಂತೆ ಆರೋಪಿಗಳು ಯಾವ ರೀತಿ ಹಿಂಸೆ ಕೊಟ್ಟು ಸಾಯಿಸಲಾಯಿತು, ಎಂಬ ಒಂದೊಂದೆ ಸತ್ಯವನ್ನು ಪೊಲೀಸರ ಬಳಿ ಬಾಯ್ಬಿಡುತ್ತಿದ್ದಾರೆ. ವೈದ್ಯೆಯ ಮೇಲೆ ಅವರು ಎಷ್ಟರ ಮಟ್ಟಿಗೆ ವಿಕೃತಿ ಮೆರೆದಿದ್ದಾರೆ ಎಂಬುದು ಗೊತ್ತಾಗುತ್ತೆ ಎಂದು ಗುಡುಗಿದರು.

14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ

14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ

26 ವರ್ಷದ ಪಶುವೈದ್ಯೆಯನ್ನು ಸ್ಕೂಟಿಗೆ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮೊಹಮ್ಮದ್ ಪಾಷಾ ಹಾಗೂ ಮೂವರು ಕ್ಲೀನರ್ ಗಳಾದ ನವೀನ್, ಕೇಶವ್ ಹಾಗೂ ಶಿವು ಎಂಬುವವರು ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈದಿದ್ದರು ಅಲ್ಲದೇ ಅಷ್ಟಕ್ಕೇ ಸುಮ್ಮನೆ ಬಿಡದೇ ಸುಟ್ಟು ಹಾಕಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರಾಬಾದ್ ಪೊಲೀಸರು ಎಫ್ಐಆರ್ ದಾಲಿಸಿಕೊಂಡಿದ್ದರು, ಅತ್ಯಾಚಾರಗೈದ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಆರೋಪಿಗಳಿಗೆ 14 ದಿನಗಳ ಕಾಲ ರಿಮ್ಯಾಂಡ್ ನಲ್ಲಿ ಇರಿಸುವಂತೆ ಕೋರ್ಟ್ ಆದೇಶ ನೀಡಿದೆ.

English summary
Rajya Sabha Member Jaya Bachchan Has Been Outraged Over The Public Punishment For The Rape Of a Veterinarian In Telangana. The Government And The Court Demanded a Clear And Bold Decision Immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X