ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಂಕಾಸ್ಪದ ಚೀನಾ ಹಡಗನ್ನು ಓಡಿಸಿದ ಭಾರತೀಯ ಸೇನೆ

|
Google Oneindia Kannada News

ನವದೆಹಲಿ, ಡಿಸೆಂಬರ್ 03: ಚೀನಾದ ಶಂಕಾಸ್ಪದ ಹಡಗೊಂದು ಪೋರ್ಟ್ ಬ್ಲೇರ್ ಸಮುದ್ರ ತೀರದ ಬಳಿ ಸಂಚರಿಸುತ್ತಿದ್ದ ವೇಳೆ ಭಾರತೀಯ ಸೇನೆ ಓಡಿಸಿದೆ. ಈ ಬೆಳವಣಿಗೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಚೀನಾದ ಸಂಶೋಧನಾ ಹಡಗು ಶಿ-ಯಾನ್1 ಇದು ಅಂಡಮಾನ್ ಮತ್ತು ನಿಕೋಬಾರ್ ಸಮುದ್ರ ದ್ವೀಪ ಪ್ರದೇಶ ತೀರದ ಬಳಿ ಸಂಶೋಧನಾ ಕಾರ್ಯದಲ್ಲಿ ತೊಡಗಿತ್ತು, ಕೂಡಲೇ ಭಾರತೀಯ ಕಡಲು ಕಣ್ಗಾವಲು ವಿಮಾನವೊಂದು ಪತ್ತೆ ಹಚ್ಚಿ ಸೇನೆ ಮಾಹಿತಿ ನೀಡಿತ್ತು. ಆಗ ಎಚ್ಚೆತ್ತುಕೊಂಡು ಅದನ್ನು ವಾಪಸ್ ಕಳುಹಿಸಿದೆ.

ಯಾರಿಗೆಲ್ಲ ಸಿಗಲಿದೆ ಎಸ್ ಪಿಜಿ ಭದ್ರತೆ: ಸ್ಪಷ್ಟಪಡಿಸಿದ ಅಮಿತ್ ಶಾಯಾರಿಗೆಲ್ಲ ಸಿಗಲಿದೆ ಎಸ್ ಪಿಜಿ ಭದ್ರತೆ: ಸ್ಪಷ್ಟಪಡಿಸಿದ ಅಮಿತ್ ಶಾ

ಜಲ ಗಡಿ ಭಾಗ ಹಾಗೂ ಆಗ್ನೇಯ ಏಷ್ಯಾ ವಲಯದಲ್ಲಿ ಕಣ್ಗಾವಲು ಇಟ್ಟಿರುವಂತೆ ಈ ಭಾಗದಲ್ಲಿನ ಭಾರತದ ಚಟುವಟಿಕೆಗಳ ಬಗ್ಗೆ ಕಣ್ಣೀಡಲು ಈ ಹಡಗನ್ನು ಚೀನಾ ಬಳಸುತ್ತಿತ್ತು ಎಂದು ತಿಳಿದುಬಂದಿದೆ.

The Indian Army, Which Drove The Sarcastic Chinese Ship

ಕಡಲು ಕಣ್ಗಾವಲು ವಿಮಾನದಿಂದ ಹಡಗನ್ನು ಪತ್ತೆ ಹಚ್ಚಿದ ನಂತರ ಭಾರತೀಯ ಎಕ್ಸ್ ಕ್ಲೂಸಿವ್ ಆರ್ಥಿಕ ವಲಯಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ನಂತರ ಅದನ್ನು ವಾಪಸ್ ಕಳುಹಿಸಲಾಗಿದೆ.

ಪ್ರಧಾನಮಂತ್ರಿ ಮೋದಿ ರಕ್ಷಣಾ ಕೋಟೆ ಎಸ್ ಪಿಜಿ ಬಗ್ಗೆ ನಿಮಗೆಷ್ಟು ಗೊತ್ತು?ಪ್ರಧಾನಮಂತ್ರಿ ಮೋದಿ ರಕ್ಷಣಾ ಕೋಟೆ ಎಸ್ ಪಿಜಿ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತೀಯ ಆರ್ಥಿಕ ವಲಯದ ಮೇಲೆ ಸಂಶೋಧನೆ ನಡೆಸಲು ವಿದೇಶಗಳಿಗೆ ಆವಕಾಶವಿಲ್ಲ. ಆದರೂ ಸಹ ಈ ಭಾಗದಲ್ಲಿ ಚೀನಾ ಏಕೆ ಸಂಶೋಧನೆ ನಡೆಸುತ್ತಿದೆ ಎಂಬುದನ್ನು ಭಾರತೀಯ ನೌಕಾ ಪಡೆ ಪ್ರಶ್ನಿಸಿದೆ. ಭಾರತ ನೌಕಾ ಪಡೆಯ ಸೂಚನೆಯ ಮೇರೆಗೆ ಶಿ-ಯಾನ್1 ಹಡಗು ಅಲ್ಲಿಂದ ವಾಪಸ್ ಹೋಗಿದೆ.

English summary
The Indian Army Has Been Driven By a Chinese Frigate Ship Near The Port Of Blair. This Growth Is Of Almost Importance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X