ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ದೇಶದ ವಿರುದ್ಧ ಭಾರತದ ಮಿ.56" ಹೆದರಿದ್ದಾರೆ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ನವೆಂಬರ್ 12: ಚೀನಾ ದೇಶದ ಉಪಟಳ ಕುರಿತು ಭಾರತ ಸರ್ಕಾರ ಯಾವುದೇ ಕಾರ್ಯತಂತ್ರವನ್ನು ಹೊಂದಿಲ್ಲದ ಕಾರಣ ದೇಶದ ರಾಷ್ಟ್ರೀಯ ಭದ್ರತೆಯು ಕ್ಷಮಿಸಲಾಗದಷ್ಟು ರಾಜಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಪ್ರಧಾನಿ ನರೇಂದ್ರ ಮೋದಿಯವರ 56 ಇಂಚು ಎದೆ ಹೇಳಿಕೆ ವಿರುದ್ಧ ಟ್ವಿಟ್ಟರ್‌ನಲ್ಲಿ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಯಾವುದೇ ಕಾರ್ಯತಂತ್ರ ಹೊಂದಿಲ್ಲದ ಕಾರಣ ನಮ್ಮ ರಾಷ್ಟ್ರೀಯ ಭದ್ರತೆ ಕ್ಷಮಿಸಲಾಗದಷ್ಟು ರಾಜಿಯಾಗಿದೆ. ಮಿಸ್ಟರ್ 56" ಭಯಭೀತರಾಗಿದ್ದಾರೆ ಎಂದು ಟೀಕಿಸಿದ್ದಾರೆ.

ನನ್ನ ಆಲೋಚನೆಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಮ್ಮ ಗಡಿಯನ್ನು ಕಾವಲು ಕಾಯುತ್ತಿರುವ ಸೈನಿಕರ ಕಡೆಯಿದ್ದರೆ, ಭಾರತ ಸರ್ಕಾರ ಸುಳ್ಳುಗಳನ್ನು ಹೊರಹಾಕುತ್ತಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಚೀನಾ ಗಡಿ ಸಮಸ್ಯೆಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರು ವಿಭಿನ್ನ ಅಭಿಪ್ರಾಯ ಹೊಂದಿರುವ ವರದಿಯನ್ನೊಂದನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.

The Government Of India Has No Strategy Against China: Rahul Gandhi

ಇನ್ನು ಈ ವಿಷಯದ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಸಚಿವಾಲಯದಲ್ಲಿ ಒಂದು ಗೆರೆ ಎಳೆದಿದ್ದಾರೆ ಮತ್ತು ಸಿಡಿಎಸ್ ಅನ್ನು "ಎಲ್‌ಎಸಿಯ ತಮ್ಮ ಬದಿಯಲ್ಲಿಯೇ" ಇರುವಂತೆ ಕೇಳಿಕೊಂಡರು ಎಂದಿದ್ದಾರೆ.

ಚೀನಾವು ಭಾರತೀಯ ಭೂಪ್ರದೇಶವನ್ನು ಅಕ್ರಮವಾಗಿ ಸ್ವಾಧೀನ ಪಡಿಸಿದೆ ಎಂದು ಹೇಳಿದ್ದು, ಭಾರತವು 'ನ್ಯಾಯಸಮ್ಮತವಲ್ಲದ ಚೀನೀ ವಾದಗಳನ್ನು ಸ್ವೀಕರಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಇಲಾಖೆ ಹೇಳಿದೆ.

ಘಟನೆಯ ಕೆಲವೇ ಗಂಟೆಗಳಲ್ಲಿ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು (ಸಿಡಿಎಸ್) ಚೀನಿಯರು 'ಎಲ್‌ಎಸಿಯ ನಮ್ಮ ಗ್ರಹಿಕೆಯನ್ನು ಎಲ್ಲಿಯೂ ಉಲ್ಲಂಘಿಸಿಲ್ಲ' ಮತ್ತು ಅವರು 'ಎಲ್‌ಎಸಿಯ ತಮ್ಮ ಗಡಿಯಲ್ಲಿದ್ದಾರೆ' ಎಂದು ಹೇಳಿರುವುದಾಗಿ ಚಿದಂಬರಂ ಸರಣಿ ಟ್ವೀಟ್ ಮಾಡಿದ್ದಾರೆ.

The Government Of India Has No Strategy Against China: Rahul Gandhi

ಬಿಪಿನ್ ರಾವತ್ ಹೇಳುವುದೇನು?
ದೇಶದ ಗಡಿ ಪ್ರದೇಶದೊಳಗೆ ಈಗಾಗಲೇ ಚೀನಾ ಆಗಮಿಸಿದ್ದು, ಹೊಸ ಹಳ್ಳಿಯೊಂದನ್ನು ನಿರ್ಮಾಣ ಮಾಡಿದೆ ಎಂಬುದು ಸತ್ಯವಲ್ಲ, ಹಳ್ಳಿಗಳು ಚೀನಾ ಕಡೆಯ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿವೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆ ನೀಡಿದ್ದಾರೆ.

ಎಲ್‍ಎಸಿಯ ಪೂರ್ವ ವಲಯ ಅರುಣಾಚಲ ಪ್ರದೇಶ ಮತ್ತು ಟಿಬೆಟ್ ವಲಯ ನಡುವಣದ ವಿವಾದಿತ ಪ್ರದೇಶದ ಒಳಗಡೆ ಚೀನಾ ಹೊಸ ಹಳ್ಳಿಯೊಂದನ್ನು ನಿರ್ಮಾಣ ಮಾಡುತ್ತಿರುವುದಾಗಿ ಅಮೆರಿಕಾ ರಕ್ಷಣಾ ಇಲಾಖೆ ಇತ್ತೀಚಿಗೆ ಹೇಳಿಕೆ ನೀಡಿತ್ತು. ಚೀನಾದ ಕಾನೂನುಬಾಹಿರ ಆಕ್ರಮಣವನ್ನು ಅಥವಾ ಯಾವುದೇ ನ್ಯಾಯಸಮ್ಮತವಲ್ಲದ ಹಕ್ಕುಗಳನ್ನು ಭಾರತ ಒಪ್ಪಿಕೊಂಡಿಲ್ಲ ಎಂದು ಅಮೆರಿಕ ವರದಿ ಕುರಿತಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು.

ಕಳೆದ ತಿಂಗಳು, ಉಭಯ ದೇಶಗಳ ನಡುವಿನ 13ನೇ ಸುತ್ತಿನ ಮಿಲಿಟರಿ ಮಾತುಕತೆಯ ಸಮಯದಲ್ಲಿ ಪೂರ್ವ ಲಡಾಖ್‌ನಲ್ಲಿ ಉಳಿದಿರುವ ಘರ್ಷಣೆ ಬಿಂದುಗಳಲ್ಲಿ 18 ತಿಂಗಳ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಭಾರತ ಮತ್ತು ಚೀನಾ ಯಾವುದೇ ಪ್ರಗತಿ ಸಾಧಿಸಲು ವಿಫಲವಾಗಿವೆ. ಪೂರ್ವ ಲಡಾಖ್‌ನ ಸೂಕ್ಷ್ಮ ವಲಯದಲ್ಲಿ ಎಲ್‌ಎಸಿ ಉದ್ದಕ್ಕೂ ಪ್ರತಿ ಬದಿಯು ಪ್ರಸ್ತುತ ಸುಮಾರು 50,000 ರಿಂದ 60,000 ಸೈನಿಕರನ್ನು ಹೊಂದಿದೆ.

English summary
The Government of India has no strategy against china, PM Narendra Modi fears against China, Congress Leader Rahul Gandhi Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X