ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ ಎಸ್‌ ಎಸ್‌ ನಿಂದ ದೇಶದ ಮೊದಲ ಸೈನಿಕ ಶಾಲೆ

By Coovercolly Indresh
|
Google Oneindia Kannada News

ನವದೆಹಲಿ, ಜನವರಿ 30: ವಿಶ್ವದ ಅತ್ಯಂತ ದೊಡ್ಡ ಸ್ವಯಂ ಸೇವಕ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶದಲ್ಲಿ ತನ್ನ ಮೊದಲ ಸೈನಿಕ ಶಾಲೆಯನ್ನು ತೆರೆಯಲು ಸಿದ್ಧತೆ ನಡೆಸಿದೆ. ಈ ಶಾಲೆಯು ಉತ್ತರ ಪ್ರದೇಶದ ಬುಲಂದ್ ಶೆಹರ್‌ ನಲ್ಲಿ ಸ್ಥಾಪನೆ ಆಗಲಿದ್ದು, ಈಗಾಗಲೇ ಕಟ್ಟಡ ನಿರ್ಮಾಣಗೊಂಡಿದೆ. ಈ ಶಾಲೆಗೆ ಆರ್‌ ಎಸ್‌ ಎಸ್‌ ನ ಮಾಜಿ ಮುಖ್ಯಸ್ಥ ರಜ್ಜು ಭೈಯಾ ಸೈನಿಕ್ ವಿದ್ಯಾ ಮಂದಿರ (ಆರ್‌ಬಿಎಸ್ ‌ವಿಎಂ) ಎಂದು ಹೆಸರಿಡಲಾಗಿದ್ದು, ಈಗ ವಿದ್ಯಾರ್ಥಿಗಳಿಂದ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಶಾಲೆಯು ಆರನೇ ತರಗತಿಗೆ 160 ವಿದ್ಯಾರ್ಥಿಗಳ ಮೊದಲ ಬ್ಯಾಚ್ ‌ಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಸಂಪೂರ್ಣ ವಸತಿ ಶಾಲೆಯಾಗಲಿದೆ.

ಜನವರಿ 26ರಿಂದ ಶಾಲೆಗಳಲ್ಲಿ ಸಂವಿಧಾನದ ಮುನ್ನುಡಿ ಓದುವುದು ಕಡ್ಡಾಯಜನವರಿ 26ರಿಂದ ಶಾಲೆಗಳಲ್ಲಿ ಸಂವಿಧಾನದ ಮುನ್ನುಡಿ ಓದುವುದು ಕಡ್ಡಾಯ

"ನಾವು ಎನ್ಡಿಎ, ನೇವಲ್ ಅಕಾಡೆಮಿ ಮತ್ತು ಭಾರತೀಯ ಸೇನೆಯ 10+ 2 ತಾಂತ್ರಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತಿದ್ದೇವೆ" ಎಂದು ಆರ್ ಬಿಎಸ್ವಿಎಂ ನಿರ್ದೇಶಕ ಕರ್ನಲ್ ಶಿವ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

The First Military School In The Country By RSS In Delhi

"ನೋಂದಣಿ ಫೆಬ್ರವರಿ 23ರವರೆಗೆ ಮುಂದುವರಿಯುತ್ತದೆ. ಮಾರ್ಚ್ 1ರಂದು ನಡೆಯಲಿರುವ ಪ್ರವೇಶ ಪರೀಕ್ಷೆಯು ತಾರ್ಕಿಕತೆ, ಸಾಮಾನ್ಯ ಜ್ಞಾನ, ಗಣಿತ ಮತ್ತು ಇಂಗ್ಲಿಷ್‌ನಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಪರಿಶೀಲಿಸುತ್ತದೆ. ಲಿಖಿತ ಪರೀಕ್ಷೆಯ ನಂತರ ಲಿಖಿತ ಸಂದರ್ಶನ ಮತ್ತು ನಂತರ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಏಪ್ರಿಲ್ 6ರಿಂದ ಪೂರ್ಣ ಪ್ರಮಾಣದ ತರಗತಿಗಳು ಆರಂಭಗೊಳ್ಳಲಿವೆ" ಎಂದು ಸಿಂಗ್ ತಿಳಿಸಿದ್ದಾರೆ.

ದೇಶಭಕ್ತಿ ಕೇವಲ ಆಗಸ್ಟ್ 15 ಕ್ಕೆ ಸೀಮಿತವಾಗಬಾರದು: ಸುರೇಶ್ ಕುಮಾರ್ದೇಶಭಕ್ತಿ ಕೇವಲ ಆಗಸ್ಟ್ 15 ಕ್ಕೆ ಸೀಮಿತವಾಗಬಾರದು: ಸುರೇಶ್ ಕುಮಾರ್

ಯುದ್ಧದಲ್ಲಿ ಹುತಾತ್ಮರಾದ ಸಿಬ್ಬಂದಿಗಳ ಮಕ್ಕಳಿಗಾಗಿ ಎಂಟು ಸೀಟುಗಳನ್ನು ಕಾಯ್ದಿರಿಸಲಾಗಿದೆ. ಶಾಲೆಯಲ್ಲಿ ಬೇರೆ ಯಾವುದೇ ಮೀಸಲಾತಿ ಇರುವುದಿಲ್ಲ ಮತ್ತು ಅದು ಸಿಬಿಎಸ್ ‌ಇ ಮಾದರಿಯನ್ನು ಅನುಸರಿಸುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಬ್ಬರಿಗೂ ಇಲ್ಲಿ ಸಮವಸ್ತ್ರವಿದೆ. ತಿಳಿನೀಲಿ ಶರ್ಟ್ ಮತ್ತು ವಿದ್ಯಾರ್ಥಿಗಳಿಗೆ ಗಾಢ ನೀಲಿ ಪ್ಯಾಂಟ್; ಬೂದು ಬಣ್ಣದ ಪ್ಯಾಂಟ್ ಮತ್ತು ಶಿಕ್ಷಕರಿಗೆ ಬಿಳಿ ಶರ್ಟ್ ಸಮವಸ್ತ್ರ ಆಗಿರುತ್ತದೆ.

The First Military School In The Country By RSS In Delhi

ಶಾಲೆಯು ಉದ್ಘಾಟನಾ ಸಮಾರಂಭದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡರು ಮತ್ತು ಬಿಜೆಪಿ ಮುಖಂಡರು, ಮಂತ್ರಿಗಳು ಭಾಗವಹಿಸಲಿದ್ದಾರೆ. ಈ ಎಲ್ಲಾ ವಿಷಯಗಳು ಯೋಜನಾ ಹಂತದಲ್ಲಿವೆ ಮತ್ತು ಶೀಘ್ರದಲ್ಲೇ ಹೆಸರುಗಳನ್ನು ನಿರ್ಧರಿಸಲಾಗುತ್ತದೆ. ಇದೀಗ, ಮೊದಲ ಬ್ಯಾಚ್ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವತ್ತ ಗಮನ ಹರಿಸಲಾಗಿದೆ ಎಂದು ಮಾಹಿತಿ ನೀಡಿದರು ವಿದ್ಯಾ ಭಾರತಿ ಪ್ರಾದೇಶಿಕ ಕನ್ವೀನರ್ ಅಜಯ್ ಗೋಯಲ್.

English summary
Volunteering Organization The Rashtriya swayam sevaka sangha is preparing to open its first military school in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X