ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ.ಡಿ.ಅಧಿಕಾರಿಗಳು 198 ಗಂಟೆಗಳ ಕಾಲ ಡಿಕೆಶಿ ವಿಚಾರಣೆ ನಡೆಸಿದ್ದಾರೆ: ಮನುಸಿಂಘ್ವಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 21: ಇ.ಡಿ.ಅಧಿಕಾರಿಗಳು ಸುಮಾರು 198 ಗಂಟೆಗಳ ಕಾಲ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿಚಾರಣೆ ನಡೆಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಎಂದು ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಶನಿವಾರ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮೊದಲು ಇ.ಡಿ. ಪರ ವಕೀಲ ನಟರಾಜ್ ವಾದ ಮಂಡಿಸಿದ್ದು, ಇದೀಗ ಡಿ.ಕೆ. ಶಿವಕುಮಾರ್ ಅವರ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಡಿಕೆಶಿ ಪರ ವಾದ ಮಾಡುತ್ತಿದ್ದಾರೆ.

ನಟರಾಜ್ ವಾದ: ಡಿಕೆಶಿ ವಿಚಾರಣೆ ಕುರಿತ ಕೆಲವು ಇಂಟರೆಸ್ಟಿಂಗ್ ಸಂಗತಿಗಳುನಟರಾಜ್ ವಾದ: ಡಿಕೆಶಿ ವಿಚಾರಣೆ ಕುರಿತ ಕೆಲವು ಇಂಟರೆಸ್ಟಿಂಗ್ ಸಂಗತಿಗಳು

ಡಿಕೆ ಶಿವಕುಮಾರ್ ಅವರು 198 ಗಂಟೆಗಳ ಕಾಲ ವಿಚಾರಣೆಗೆ ಸ್ಪಂದಿಸಿದಿದ್ದಾರೆ. ಆದರೆ ಕೇವಲ 4ಗಂಟೆ ಮಾತ್ರ ಅವರು ಉತ್ತರ ನೀಡಿದ್ದಾರೆ ಎಂದು ಸುಳ್ಳು ಹೇಳಲಾಗುತ್ತಿದೆ. ಡಿಕೆ ಶಿವಕುಮಾರ್ ಅವರು ದಿನನಿತ್ಯ ತನಿಖೆಗೆ ಹಾಜರಾಗುತ್ತಿದ್ದಾರೆ, ಅವರು ಯಾವ ದಾಖಲೆಯನ್ನೂ ಫೋರ್ಜರಿ ಮಾಡಿಲ್ಲ. ಇಡಿ ವಾದ ಪೂವಾಗ್ರಹದಿಂದ ಕೂಡಿದೆ ಎಂದಿದ್ದಾರೆ.

The ED authorities Have Been Investigating The DK Shivakumar For 198 Hours

ಅಧಿಕಾರಿಗಳೇ ಊಹೆಯಿಂದ ಹೊರಬನ್ನಿ, ಬೇರೆಯವರ ಅಕೌಂಟ್‌ನ್ನು ಡಿಕೆಶಿ ಅಕೌಂಟ್ ಎಂದರೆ ಹೇಗೆ, ಭಯೋತ್ಪಾದನೆ, ಅತ್ಯಾಚಾರ ಕೇಸುಗಳಲ್ಲಿ ಜಾಮೀನು ಸಿಗದಿದ್ದರೆ ಓಕೆ ಆದರೆ ಇದು ಅಂತಹ ಪ್ರಕರಣವಲ್ಲ, ಸಾಕ್ಷ್ಯನಾಶ ಆರೋಪ ಹೊರಿಸಿ ಅವರೇ ಸಾಕ್ಷ್ಯವನ್ನು ತಿರುಚುವ ಕೆಲಸ ಮಾಡುತ್ತಿರುವುದು ಸರಿಯಲ್ಲ.

ಅಧಿಕಾರಿಗಳು ಎಲ್ಲಾ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಇನ್ಯಾವ ಸಾಕ್ಷ್ಯಗಳನ್ನು ನಾವು ತಿರುಚಲು ಸಾಧ್ಯ ಅಥವಾ ಪ್ರಭಾವ ಬೀರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

English summary
ED officials spent nearly 198 hours with former minister D.K. Shivakumar has inquired, said DK. Shivakumar's lawyer, Abhishek Manusinghvi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X