ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಶತ್ರುಗಳ ಡ್ರೋನ್ ಹೊಡೆದುರುಳಿಸಲು ಹೊಸ ತಂತ್ರಜ್ಞಾನ

|
Google Oneindia Kannada News

ನವದೆಹಲಿ, ನವೆಂಬರ್.29: ಭಾರತದ ರಕ್ಷಣೆ ಮತ್ತು ಸಂಶೋಧನಾ ಅಭಿವೃದ್ಧಿ ಸಂಸ್ಥೆಯು ಭದ್ರತಾ ಪಡೆಗೆ ಅಗತ್ಯವಿರುವ ಡ್ರೋನ್ ವಿರೋಧಿ ವ್ಯವಸ್ಥೆ ಅಭಿವೃದ್ಧಿಪಡಿಸುವ ಮತ್ತು ಉತ್ಪಾದಿಸುವ ಪ್ರಮುಖ ಸಂಸ್ಥೆಯಾಗಿ ಭಾರತ್ ಎಲೆಕ್ಟ್ರಾನಿಕ್ ನ್ನು ನೇಮಿಸಿದೆ.

ನೂತನ ಡ್ರೋನ್ ವಿರೋಧಿ ವ್ಯವಸ್ಥೆಯು ಪ್ರಮುಖವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಗೃಹ ಕಚೇರಿ, ಕಾರು, ಅಶ್ವದಳದ ಒಂದು ಭಾಗವಾಗಿರಲಿದೆ. ಡ್ರೋನ್ ಬೆದರಿಕೆ ಎದುರಾದ ಹಿನ್ನೆಲೆಯಲ್ಲಿ ಕಳೆದ 2020ರ ಆರಂಭದಿಂದಲೂ ಈ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿತ್ತು.

ಚೀನಾ ಗಡಿ ಕಣ್ಗಾವಲಿಗಾಗಿ ಭಾರತ ಸೇನೆ ಸೇರಲಿವೆ ಇಸ್ರೇಲ್, ಅಮೆರಿಕದ ಡ್ರೋನ್‌ಗಳುಚೀನಾ ಗಡಿ ಕಣ್ಗಾವಲಿಗಾಗಿ ಭಾರತ ಸೇನೆ ಸೇರಲಿವೆ ಇಸ್ರೇಲ್, ಅಮೆರಿಕದ ಡ್ರೋನ್‌ಗಳು

ಪಾಕಿಸ್ತಾನ್ ಮೂಲದ ಉಗ್ರರು ಚೀನಾ ನಿರ್ಮಿತ ಡ್ರೋನ್ ಗಳನ್ನು ಬಳಸಿಕೊಂಡು ದುಷ್ಕೃತ್ಯವನ್ನು ಎಸಗಲು ಪ್ರಯತ್ನಿಸುತ್ತಿದ್ದರು. ಜಮ್ಮು ಕಾಶ್ಮೀರ ಮತ್ತು ಅಂತಾರಾಷ್ಟ್ರೀಯ ಗಡಿರೇಖೆಯಲ್ಲಿ ಬಳಕೆಯಾಗುತ್ತಿರುವ ಡ್ರೋನ್ ಗಳನ್ನು ಪತ್ತೆ ಮಾಡುವ ಮತ್ತು ಶತ್ರುಗಳ ಡ್ರೋನ್ ಗಳನ್ನು ಹೊಡೆದುರುಳಿಸುವ ಪರಿಣಾಮಕಾರಿ ಡ್ರೋನ್ ವಿರೋಧಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಕ್ಕೆ ಭಾರತದ ರಕ್ಷಣಾ ಮತ್ತು ಸಂಶೋಧನಾ ಅಭಿವೃದ್ಧಿ ಸಂಸ್ಥೆಯು ಮುಂದಾಗಿದೆ.

The Anti-Drone System For Armed Forces To Have Drone Killer Security To PM Narendra Modi: DRDO

ಡ್ರೋನ್ ವಿರೋಧಿ ವ್ಯವಸ್ಥೆ:

ರಕ್ಷಣೆ ಮತ್ತು ಸಂಶೋಧನಾ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಸತೀಶ್ ರೆಡ್ಡಿಯವರು ಸ್ಥಳೀಯ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಸಶಸ್ತ್ರ ಪಡೆಗಳಿಗೆ ಪತ್ರ ಬರೆಯಲಿದ್ದಾರೆ ಎಂದು ತಿಳಿದು ಬಂದಿದೆ. 2020ರ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭಗಳಲ್ಲಿ ಅಳವಡಿಸಿದ್ದ ಡ್ರೋನ್ ವಿರೋಧಿ ವ್ಯವಸ್ಥೆಯು ಸುತ್ತಮುತ್ತಲಿನ ಎರಡ್ಮೂರು ಕಿಲೋ ಮೀಟರ್ ವ್ಯಾಪ್ತಿಯ ರಾಡರ್ ಸಾಮರ್ಥ್ಯವನ್ನು ಪತ್ತೆ ಮಾಡುವ ಶಕ್ತಿ ಹೊಂದಿತ್ತು. ಮಾನವರಹಿತ ವೈಮಾನಿಕ ವಾಹನಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಈ ಡ್ರೋನ್ ವಿರೋಧಿ ವ್ಯವಸ್ಥೆಯು ಒಳಗೊಂಡಿರುತ್ತದೆ.

ಕಳೆದ 2019ರಲ್ಲಿ ಅಂತಾರಾಷ್ಟ್ರೀಯ ಗಡಿ ಪ್ರದೇಶ ಪಂಜಾಬ್ ಸುತ್ತಮುತ್ತಲು ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ಸಾಗಿಸುವುದಕ್ಕೆ ಪಾಕಿಸ್ತಾನದ ಉಗ್ರರ ತಂಡವು ಇದೇ ಡ್ರೋನ್ ಗಳನ್ನು ಬಳಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಅದೇ ತರನಾದ ಡ್ರೋನ್ ಗಳನ್ನು ಅಂತಾರಾಷ್ಟ್ರೀಯ ಗಡಿ ಮತ್ತು ಜಮ್ಮು ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಇತ್ತೀಚಿಗೆ ಬಳಕೆಯಾಗಿರುವು ಗೊತ್ತಾಗಿದೆ.

ಚೀನಾ ಅಭಿವೃದ್ಧಿಪಡಿಸಿದ ಈ ಡ್ರೋನ್ ಗಳಲ್ಲಿ 10 ಕೆಜಿ ತೂಕದ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ಸಾಗಿಸಬಹುದಾಗಿದೆ. ಇದೀಗ ಭಾರತದ ರಕ್ಷಣೆ ಮತ್ತು ಸಂಶೋಧನಾ ಅಭಿವೃದ್ಧಿ ಸಂಸ್ಥೆಯು ಇಂಥ ಡ್ರೋನ್ ಗಳಿಂದ ದೇಶಕ್ಕೆ ಎದುರಾಗುವ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

English summary
The Anti-Drone System For Armed Forces To Have Drone Killer Security To PM Narendra Modi: DRDO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X