ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಂದಾ ಪುಷ್ಕಳ ಆಸ್ತಿ ಯಾರ ಪಾಲಾಗುತ್ತದೆ?

By Srinath
|
Google Oneindia Kannada News

ನವದೆಹಲಿ, ಜ.21: ಕಳೆದ ವಾರ ಮೃತಪಟ್ಟ ಸುನಂದಾ ಪುಷ್ಕರ್ ಅವರು ತಮ್ಮ ಪತಿ, ಕೇಂದ್ರ ಸಚಿವ ಶಶಿ ತರೂರ್ ಅವರ ನೆರಳಿನಾಚೆಗೂ ದುಡಿದು ಯಶಸ್ವೀ ಉದ್ಯಮಿ ಎನಿಸಿಕೊಂಡಿದ್ದರು. ತನ್ಮೂಲಕ ಅವರು ಗಳಿಸಿದ್ದು ನೂರು ಕೋಟಿ ರೂ. ಹೆಚ್ಚು ಆಸ್ತಿಯನ್ನು.

ಒಂದು ಲೆಕ್ಕಾಚಾರದ ಪ್ರಕಾರ 52 ವರ್ಷದ ಸುನಂದಾ ಪುಷ್ಕರ್ ಅವರು 112 ಕೋಟಿ ರೂ. ಆಸ್ತಿಯ ಒಡತಿಯಾಗಿದ್ದರು. ಶಶಿ ತರೂರ್ ಮತ್ತು ಸುನಂದಾ ಪುಷ್ಕರ್ ಅತಿ ಶ್ರೀಮಂತ ದಂಪತಿಯಾಗಿದ್ದರು. ( ಬಾಳಾ ಆಸ್ತಿ: ಕೋರ್ಟ್ ಮೆಟ್ಟಿಲೇರಿದ ಠಾಕ್ರೆ ಸೋದರರು! )

Union Minister Shashi Tharoor wife Sunanda Pushkar death who can inherit her property

ಶಶಿ ತರೂರ್ ಅವರು 2012-13 ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಸುನಂದಾ ಪುಷ್ಕರ್ ಆಸ್ತಿಪಾಸ್ತಿ 112 ಕೋಟಿ ರೂ. ನಷ್ಟಿತ್ತು. ಅಂದರೆ ದೇಶ ವಿದೇಶಗಳಲ್ಲಿ ಅಪಾರ್ಟ್ ಮೆಂಟುಗಳು, ಪ್ಲಾಟಿನಂ, ಚಿನ್ನಾಭರಣ, ಕಾರುಗಳು ಮತ್ತು ಅಮೂಲ್ಯ ವಸ್ತುಗಳು ಅವರ ಬಳಿಯಿದ್ದವು. ಅದೇ ಶಶಿ ತರೂರ್ ಆಸ್ತಿ 6.34 ಕೋಟಿ ರೂ. ಗಳಿತ್ತು. ಜತೆಗೆ, ದುಬೈನಲ್ಲಿ ಸುನಂದಾ ಪುಷ್ಕರ್ ಮಾಡಿಕೊಂಡಿದ್ದ ಸಾಲವನ್ನು ತೀರಿಸಲು 20 ಲಕ್ಷ ಡಾಲರ್ ಹಣವನ್ನು ಶಶಿ ತರೂರ್ ಅವರೇ ನೀಡಿದ್ದರು.

ಸೋ ಇದನ್ನೆಲ್ಲಾ ಪರಿಶೀಲಿಸಿದಾಗ ಸುನಂದಾ ಪುಷ್ಕಳ ಆಸ್ತಿಯಲ್ಲಿ ಶಶಿ ತರೂರ್ ಕೊಡುಗೆ ಅಪಾರವಾಗಿದೆ ಅನ್ನಬಹುದು. ಹಾಗಾಗಿ ಒಂದು ವೇಳೆ, ಆಸ್ತಿವಂತೆ ಸುನಂದಾ ಉಯಿಲು ಬರೆದಿಟ್ಟಿಲ್ಲವೆಂದರೆ ಹಿಂದೂ ಉತ್ತರಾಧಿಕಾರ ಕಾಯಿದೆಯಡಿ ಸುನಂದಾರ ಆಸ್ತಿ ಆಕೆಯ ಪತಿ ಶಶಿ ತರೂರ್ ಮತ್ತು ಆಕೆಯ ಎರಡನೆಯ ಪತಿಯ ಮಗ ಶಶಿ ಮೆನನ್ ಅವರಿಗೆ ಸಮಪಾಲು ಸಲ್ಲುತ್ತದೆ.

English summary
After the death of Union Minister Shashi Tharoor wife Sunanda Pushkar who can inherit her property worth more than Rs. 100 crore. Union minister of State for Human Resource Development Shashi Tharoor's wife Sunanda Pushkar was found dead at The Leela Hotel, Delhi on Jan17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X