• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿ ಶಾಸಕರ ಪತ್ನಿಯನ್ನು ಗುರಿಯಾಗಿಸಿಕೊಂಡ ಥಕ್‌ ಥಕ್‌ ಗ್ಯಾಂಗ್‌

|
Google Oneindia Kannada News

ನವದೆಹಲಿ, ಜು.24: ಥಕ್ ಥಕ್ ಗ್ಯಾಂಗ್‌ನ ಸದಸ್ಯರು ಶಾಸಕರೊಬ್ಬರ ಪತ್ನಿಯನ್ನು ಗುರಿಯಾಗಿಸಿಕೊಂಡು ಸುಮಾರು 2 ಲಕ್ಷ ರೂ. ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ವರದಿಯಾಗಿದೆ.

''ಆಗ್ನೇಯ ದೆಹಲಿಯ ಬಿಆರ್‌ಟಿ ವಿಸ್ತಾರದಲ್ಲಿ ತೃಣಮೂಲ ಕಾಂಗ್ರೆಸ್‌ನ ಮಾಜಿ ರಾಜ್ಯಸಭಾ ಸಂಸದ ಮತ್ತು ಪ್ರಸ್ತುತ ಶಾಸಕರಾಗಿರುವ ವಿವೇಕ್ ಗುಪ್ತಾರ ಪತ್ನಿ ಕನಿಕಾ ಗುಪ್ತಾರ ಕಾರನ್ನು ವಂಚಕರು ಗುರಿಯಾಗಿಸಿಕೊಂಡಿದ್ದಾರೆ,'' ಎಂದು ಪೊಲೀಸರು ತಿಳಿಸಿದ್ದಾರೆ.

ಕುರುಹುಗಳಿಲ್ಲದೆಯೇ ಎಟಿಎಂ ದರೋಡೆ: ಬ್ಯಾಂಕ್ ಅಧಿಕಾರಿಗಳಿಗೆ ತಲೆಬಿಸಿಕುರುಹುಗಳಿಲ್ಲದೆಯೇ ಎಟಿಎಂ ದರೋಡೆ: ಬ್ಯಾಂಕ್ ಅಧಿಕಾರಿಗಳಿಗೆ ತಲೆಬಿಸಿ

ಈ ದರೋಡೆಕೋರರು 1.9 ಲಕ್ಷ ರೂ. ನಗದು, ಐಫೋನ್, ಚಿನ್ನದ ನಾಣ್ಯ ಮತ್ತು ಕೆಲವು ದಾಖಲೆಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಮಧ್ಯಾಹ್ನ 2.30 ರ ಸುಮಾರಿಗೆ ಈ ಘಟನೆ ವರದಿಯಾಗಿದೆ. ತೃಣಮೂಲ ಕಾಂಗ್ರೆಸ್‌ನ ಶಾಸಕರಾಗಿರುವ ವಿವೇಕ್ ಗುಪ್ತಾರ ಪತ್ನಿ ಕನಿಕಾ ಗುಪ್ತಾ ತಾನು ತನ್ನ ವಾಹನ ಚಾಲಕರೊಂದಿಗೆ ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದರು ಎಂದು ವರದಿಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಶಾಸಕ ವಿವೇಕ್ ಗುಪ್ತಾರ ಪತ್ನಿ ಕನಿಕಾ ಗುಪ್ತಾ, ''ನಾನು ನನ್ನ ಕಾರಿನಲ್ಲಿ ಹೋಗುತ್ತಿದೆ. ನನ್ನ ಚಾಲಕ ಕಾರು ಚಲಾಯಿಸುತ್ತಿದ್ದ. ನಾವು ಡಿಫೆನ್ಸ್ ಕಾಲೋನಿ ಫ್ಲೈಓವರ್‌ಗೆ ತಲುಪಿದೆವು. ಅಷ್ಟರಲ್ಲಿ ಮೋಟಾರ್‌ಸೈಕಲ್‌ನಲ್ಲಿದ್ದ ವ್ಯಕ್ತಿಯೊಬ್ಬರು ನಮ್ಮ ಕಾರಿನ ಟೈರ್‌ನತ್ತ ಕೈ ತೋರಿಸಿ ಟೈರ್ ಪಂಚರ್‌ ಆಗಿದೆ ಎಂದು ತಿಳಿಸಿದರು,'' ಎಂದು ಪೊಲೀಸರಲ್ಲಿ ಹೇಳಿದ್ದಾರೆ.

ಮಹಾರಾಷ್ಟ್ರ: ಟ್ರಕ್‌ ಪಲ್ಟಿ- ಫೋನ್‌, ಟಿವಿ ಸೇರಿ 70 ಲಕ್ಷ ರು ಮೌಲ್ಯದ ವಸ್ತುಗಳು ಲೂಟಿಮಹಾರಾಷ್ಟ್ರ: ಟ್ರಕ್‌ ಪಲ್ಟಿ- ಫೋನ್‌, ಟಿವಿ ಸೇರಿ 70 ಲಕ್ಷ ರು ಮೌಲ್ಯದ ವಸ್ತುಗಳು ಲೂಟಿ

ಈ ಸಂದರ್ಭದಲ್ಲಿ ಬ್ಯಾನೆಟ್‌ನಿಂದ ಹೊಗೆ ಬರುತ್ತಿರುವುದನ್ನು ಬೇರೊಬ್ಬ ವ್ಯಕ್ತಿ ತಿಳಿಸಿದ, ಆ ಕೂಡಲೇ ಕನಿಕಾ ಗುಪ್ತಾರ ಚಾಲನ ಕಾರಿನಿಂದ ಇಳಿದು ವಾಹನದಲ್ಲಿ ಏನು ಸಮಸ್ಯೆಯಿದೆ ಎಂದು ಪರೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಮೊದಲು ಕಾರು ಪಂಚರ್‌ ಆಗಿದೆ ಎಂದು ಹೇಳಿದ್ದ ಬೈಕ್‌ನ ಚಾಲಕ ಹಿಂಬದಿ ಸೀಟ್‌ನಲ್ಲಿದ್ದ ಚೀಲವನ್ನು ಎತ್ತಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಇನ್ನು ಈ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ. ತನಿಖಾಧಿಕಾರಿಗಳು ಬಾನೆಟ್‌ನ ಮೇಲೆ ಎಂಜಿನ್ ಎಣ್ಣೆಯನ್ನು ಎಸೆದಿದ್ದು, ಅದು ಬಿಸಿಯಾಗಿ ಕಾರಿನಿಂದ ಹೊಗೆ ಬರುತ್ತಿದ್ದವು ಎಂದು ಪತ್ತೆ ಹಚ್ಚಿದ್ದಾರೆ. ಇದು ಈ ದರೋಡೆಕೋರರ ಸಂಚು ಎಂದು ಊಹಿಸಲಾಗಿದೆ.

English summary
Members of a Thak Thak gang targeted the wife of a TMC MLA and stole around Rs 2 lakh in cash and other valuables.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X