ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಬರಲಿರುವ ಟೆಸ್ಲಾ ಕಾರುಗಳು: ಎಲೋನ್ ಮಸ್ಕ್‌ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಜನವರಿ 14: ವಿಶ್ವದ ಅತ್ಯಂತ ಖ್ಯಾತ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ ಭಾರತದಲ್ಲಿ ಕಾರುಗಳ ಮಾರಾಟಕ್ಕೆ ಬೆಂಗಳೂರಿನಲ್ಲಿ ತನ್ನ ಘಟಕವನ್ನು ಆರಂಭಿಸಲು ಈಗಾಗಲೇ ಯೋಜಿಸಿದೆ. ಈ ಕುರಿತು ಈಗಾಗಲೇ ಸುದ್ದಿ ಹೊರಬಿದ್ದಿದ್ದು, ಯಾವಾಗ ಶುರು ಆಗಲಿದೆ ಅನ್ನೋದಷ್ಟೇ ಅಧಿಕೃತವಾಗಿ ತಿಳಿಯಬೇಕಿದೆ.

ವಿಶ್ವದ ಶ್ರೀಮಂತ ವ್ಯಕ್ತಿ ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಸಿಇಒ ಎಲೋನ್ ಮಸ್ಕ್‌ ಈ ಸುದ್ದಿ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಭಾರತದಲ್ಲಿ ಟೆಸ್ಲಾ ತನ್ನ ಮಾರುಕಟ್ಟೆಯನ್ನು ಪ್ರಾರಂಭಿಸಲಿದೆ ಎಂಬ ಸುದ್ದಿಗೆ ಉತ್ತರಿಸಿರುವ ಮಸ್ಕ್‌ ಕೇವಲ ಎರಡು ಪದಗಳಲ್ಲಿ ತಿಳಿಸಿದ್ದಾರೆ.

ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್‌ರ ಟೆಸ್ಲಾ ಕಂಪನಿಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್‌ರ ಟೆಸ್ಲಾ ಕಂಪನಿ

ಐದು ರಾಜ್ಯಗಳಲ್ಲಿ ಟೆಸ್ಲಾ ಕೇಂದ್ರಗಳಿಗಾಗಿ ತನ್ನ ಭಾರತ ಯೋಜನೆಗಳನ್ನು ಎರಡು ಪದಗಳ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. "ಭರವಸೆ ನೀಡಿದಂತೆ," ಎಂದು ಹೇಳುವ ಮೂಲಕ ತನ್ನ ಬಹುಕಾಲದ ಯೋಜನೆಯನ್ನು ಎಲೋನ್ ಮಸ್ಕ್‌ ಖಚಿತಪಡಿಸಿದ್ದಾರೆ.

Tesla Cars: Elon Musks Two-Word Tweet On Teslas India Plan

ಇನ್ನೂ ಜಗತ್ತಿನ ಅಗ್ರ ಎಲೆಕ್ಟ್ರಿಕ್ ಕಾರುಗಳಾದ ಟೆಸ್ಲಾ ಸ್ವಲ್ಪ ದುಬಾರಿ ಬೆಲೆಗಳ ಕಾರುಗಳನ್ನೇ ಹೊಂದಿದೆ. ಆದರೆ ಪನಿಯು ಉತ್ಪಾದನೆಯನ್ನು ಪ್ರಾರಂಭಿಸಿದಾಗ ಅಂತಿಮವಾಗಿ ಭಾರತೀಯ ಮಧ್ಯಮ ವರ್ಗಕ್ಕೆ ಹೆಚ್ಚು ಕೈಗೆಟುಕುವಂತಾಗುವ ಕಾರುಗಳನ್ನು ತಯಾರಿಸುತ್ತದೆ ಎಂದು ಕಂಪನಿಯ ಬ್ಲಾಗ್‌ನಲ್ಲಿ ಎಲೋನ್ ಮಸ್ಕ್‌ ಬರೆದಿದ್ದಾರೆ.

ಟೆಸ್ಲಾ ಸಿಇಒ ಇತ್ತೀಚಿನ ವರ್ಷಗಳಲ್ಲಿ ತಮ್ಮ ಭಾರತ ಯೋಜನೆಗಳ ಬಗ್ಗೆ ಹಲವಾರು ಬಾರಿ ಟ್ವೀಟ್ ಮಾಡಿದ್ದಾರೆ. ಅಕ್ಟೋಬರ್‌ನಲ್ಲಿ, "ಮುಂದಿನ ವರ್ಷ ಖಚಿತವಾಗಿ" ಎಂದು ತಿಳಿಸಿದ್ದರು.

English summary
Elon Musk has confirmed his India plans for Tesla centres in five states with a two-word tweet. "As promised," wrote the world's richest man
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X