ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಯುದ್ಧನೌಕೆಗಳ ಮೇಲೆ ದಾಳಿಗೆ ತಂತ್ರ ರೂಪಿಸಿದೆ ಪಾಕ್ ಉಗ್ರಸಂಘಟನೆ

By Manjunatha
|
Google Oneindia Kannada News

ನವದೆಹಲಿ, ಜುಲೈ 19: ಭಾರತ ಯುದ್ಧನೌಕೆಗಳ ಮೇಲೆ ದಾಳಿಕೆ ಪಾಕ್‌ನ ಉಗ್ರ ಸಂಘಟನೆ ಜೈಷೆ-ಇ-ಮೊಹಮ್ಮದ್ ಭಾರಿ ತಂತ್ರವನ್ನೇ ರೂಪಿಸಿದೆ.

ಗುಪ್ತಚರ ಇಲಾಖೆ ವರದಿ ಪ್ರಕಾರ ಜೈಷೆ-ಇ-ಮೊಹಮ್ಮದ್ ಉಗ್ರ ಸಂಘಟನೆಯು ಭಾರತದ ಯುದ್ಧ ನೌಕೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲೆಂದೇ ತನ್ನ ಭಯೋತ್ಪಾದಕರಿಗೆ ಆಳ ಸಮುದ್ರದ ಮುಳುಗು ತರಬೇತಿ ನೀಡುತ್ತಿದೆ.

ಪಾಕಿಸ್ತಾನವು ಭಯೋತ್ಪಾದಕರ ಗಾಡ್‌ಫಾದರ್‌ : ಎಫ್‌ಎಟಿಎಫ್‌ ವರದಿ ಪಾಕಿಸ್ತಾನವು ಭಯೋತ್ಪಾದಕರ ಗಾಡ್‌ಫಾದರ್‌ : ಎಫ್‌ಎಟಿಎಫ್‌ ವರದಿ

ಪಾಕಿಸ್ತಾನದ ಬಹುವಲ್ಪುರ ಬಳಿ ಸಮುದ್ರದಲ್ಲಿ ಈ ತರಬೇತಿಯನ್ನು ಉಗ್ರರಿಗೆ ನೀಡಲಾಗುತ್ತಿದ್ದು, ಆಳ ಸಮುದ್ರದಲ್ಲಿ ಈಜುವುದು, ದಾಳಿ ಸಾಮಗ್ರಿಗಳನ್ನು ಹೊತ್ತೊಯ್ಯುವುದು ಇದೇ ಮೊದಲಾದ ಪಿತೂರಿಗಳು ತರಬೇತಿಯ ಭಾಗವಾಗಿವೆ.

Terrorists being trained to attack on Indian navy

ಗುಪ್ತಚರ ಇಲಾಖೆಯ ಎಚ್ಚರಿಕೆಯನ್ನು ಭಾರತೀಯ ಜಲ ಸೇನೆ ಗಂಭಿರವಾಗಿ ಪರಿಗಣಿಸಿದ್ದು, ಭಯತ್ಪಾದಕರ ದಾಳಿಯನ್ನು ವಿಫಲಗೊಳಿಸಲು ಹಾಗೂ ದಾಳಿಯನ್ನು ಎದುರಿಸಲು ಸರ್ವ ರೀತಿಯಲ್ಲಿ ಸಜ್ಜಾಗಿದೆ.

ಉಗ್ರರ ಹುಟ್ಟಡಗಿಸಿದ್ದ ಸರ್ಜಿಕಲ್ ಸ್ಟ್ರೈಕ್‌ನ ವಿಡಿಯೋ ಬಿಡುಗಡೆ ಉಗ್ರರ ಹುಟ್ಟಡಗಿಸಿದ್ದ ಸರ್ಜಿಕಲ್ ಸ್ಟ್ರೈಕ್‌ನ ವಿಡಿಯೋ ಬಿಡುಗಡೆ

Terrorists being trained to attack on Indian navy

ಉಗ್ರರು ಭಾರತೀಯ ಸಬ್‌ಮೆರಿನ್‌ಗಳು, ಯುದ್ಧನೌಕೆಗಳು, ಕ್ಷಿಪಣಿ ಉಡಾಯನಾ ನೌಕೆಗಳನ್ನು ಗುರಿಯಾಗಿಸಿಕೊಳ್ಳಲು ಪ್ರಮುಖ ಕಾರಣ ತಿಳಿದಿಲ್ಲ, ಆದರೆ ತಜ್ಞರು ಇದೊಂದು ಪಾಕ್ ಮಿಲಿಟರಿ ಪ್ರೇರಿತ ತಂತ್ರ ಇರಬಹುದೆಂಬ ಲೆಕ್ಕಾಚಾರ ಹಾಕಿದ್ದಾರೆ.

English summary
Jaish-e-Mohammad terrorists being trained in Pakistan to attack on Indian Navy. Terrorists were getting trained about deep see swimming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X