ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್ ನಲ್ಲಿ ಉಗ್ರ ದಾಳಿಗೆ ಭಾರತೀಯ ಸೇರಿ ನಾಲ್ವರು ಬಲಿ

|
Google Oneindia Kannada News

ನವದೆಹಲಿ, ಜನವರಿ 15: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಸೋಮವಾರ ನಡೆದ ಉಗ್ರಗಾಮಿಗಳ ದಾಳಿಯಲ್ಲಿ ಭಾರತೀಯ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ದಾಳಿಯ ಹಿಂದೆ ಇರುವವರು ಹಾಗೂ ಆ ಉಗ್ರರಿಗೆ ನೆಲೆ ಒದಗಿಸಿರುವವರನ್ನು ನ್ಯಾಯದ ಎದುರು ನಿಲ್ಲಿಸಬೇಕು ಎಂದು ಸಚಿವಾಲಯ ಹೇಳಿದೆ.

ಕಾಬೂಲ್ ನಲ್ಲಿ ವಿದೇಶಿಯರೇ ಹೆಚ್ಚಿರುವ ಕಾಂಪೌಂಡ್ ಬಳಿ ಬಾಂಬ್ ಸ್ಫೋಟಗೊಂಡಿದ್ದು, ನಾಲ್ವರು ಮೃತಪಟ್ಟು, ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮಂಗಳವಾರದಂದು ಈ ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರ ಸಂಘಟನೆಯು ಹೊತ್ತಿಕೊಂಡಿದೆ.

ಪ್ರವಾದಿ ಮಹಮ್ಮದ್ ಜನ್ಮದಿನ ಕಾರ್ಯಕ್ರಮದಲ್ಲೇ ಆತ್ಮಹತ್ಯಾ ಬಾಂಬ್ ಸ್ಫೋಟ, 50ಕ್ಕೂ ಹೆಚ್ಚು ಸಾವುಪ್ರವಾದಿ ಮಹಮ್ಮದ್ ಜನ್ಮದಿನ ಕಾರ್ಯಕ್ರಮದಲ್ಲೇ ಆತ್ಮಹತ್ಯಾ ಬಾಂಬ್ ಸ್ಫೋಟ, 50ಕ್ಕೂ ಹೆಚ್ಚು ಸಾವು

"ಕಾಬೂಲ್ ನಲ್ಲಿ ಸೋಮವಾರ ನಡೆದ ಉಗ್ರಗಾಮಿಗಳ ಕ್ರೂರ ದಾಳಿಯಲ್ಲಿ ಭಾರತೀಯರೊಬ್ಬರು ಸೇರಿದಂತೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಯನ್ನು ಭಾರತವು ಪ್ರಬಲವಾಗಿ ಖಂಡಿಸುತ್ತದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ಹೇಳಿಕೆ ನೀಡಿದೆ.

 Terror attack in Kabul: Including Indian 4 dead, over 100 injured

ಇಂಥ ಹೇಯ ಕೃತ್ಯಕ್ಕೆ ಬಲಿಯಾದವರ ಕುಟುಂಬಕ್ಕೆ ನಮ್ಮ ಸಾಂತ್ವನ ಇದೆ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇವೆ ಎಂದು ತಿಳಿಸಲಾಗಿದೆ.

English summary
An Indian national was among the four killed in the terror attack in Afghanistan's capital Kabul on Monday, the Ministry of External Affairs (MEA) said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X