ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ಎಸೆದ 100 ಪ್ರಶ್ನೆಗಳಿಗೆ ಮಾಜಿ ಮಂತ್ರಿ ಮಾರನ್ ತತ್ತರ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜು. 01: ಏರ್ ಸೆಲ್ ಕಂಪನಿಗೆ 2ಜಿ ತರಂಗಾಂತರ ಗುಚ್ಛ ಕೊಡಿಸಲು ಲಂಚ ಪಡೆದಿರುವ ಆರೋಪ ಹೊತ್ತಿರುವ ಮಾಜಿ ಕೇಂದ್ರ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಅವರಿಗೆ ಸಿಬಿಐ ತಂಡ ನೂರಾರು ಪ್ರಶ್ನೆಗಳ ಬಾಣ ಬಿಟ್ಟಿದೆ. ಟೆಲಿಕಾಂ ಹಗರಣದ ತೀವ್ರಗೊಳಿಸಿರುವ ಸಿಬಿಐ ಮೊದಲಿಗೆ ಮಾರನ್ ಅವರನ್ನು ವಿಚಾರಣೆಗೊಳಪಡಿಸಿದೆ.

ಸುಮಾರು 440 ಕೋಟಿ ಮೌಲ್ಯದ ಟೆಲಿಕಾಂ ಹಗರಣದಲ್ಲಿ ತನ್ನ ಆಪ್ತ ಸಂಸ್ಥೆಗಳಿಗೆ ಡೀಲ್ ಕುದುರುವಂತೆ ಮಾಡಿದ ಮಾರನ್ ಅವರಿಂದ ಬಿಎಸ್ಎನ್ ಎಲ್ ಗೆ ಭಾರಿ ನಷ್ಟ ಉಂಟಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ತನಿಖೆ ನಡೆಸಿರುವ ಸಿಬಿಐ ಈಗ ಏಕಾಏಕಿ ಸನ್ ಟಿವಿ ನೆಟ್ವರ್ಕ್ ಮಾಲೀಕತ್ವ ಹೊಂದಿರುವ ಮಾರನ್ ಬ್ರದರ್ಸ್ ಮೇಲೆ ಎರಗಿದೆ.[ಮಾರನ್ ಪರಮಾಪ್ತರಿಗೆ ಸಿಬಿಐ ಹೊಡೆತ]

ದಯಾನಿಧಿ ಮಾರನ್ ಅವರ ಆಪ್ತರಾದ ಗೌತಮನ್, ದಯಾನಿಧಿ ಮದನ್, ಎಸ್ ಕಮ್ಮಂ, ಮುಖ್ಯ ತಾಂತ್ರಿಕ ಅಧಿಕಾರಿ ಹಾಗೂ ಕೆಎಸ್ ರವಿ ಅವರನ್ನು ಇನ್ನೊಂದು ಸುತ್ತಿನ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.

CBI has over 100 questions for Dayanidhi Maran

2004 ಹಾಗೂ 2007ರಲ್ಲಿ ಕೇಂದ್ರ ಟೆಲಿಕಾಂ ಸಚಿವರಾಗಿದ್ದ ದಯಾನಿಧಿ ಮಾರನ್ ಅವರು ಏರ್ ಸೆಲ್ ಗೆ ತರಂಗ ಗುಚ್ಛ ಗುತ್ತಿಗೆ ಸಿಗುವಂತೆ ಮಾಡಿದ್ದರು. ಇದಕ್ಕೆ ಬದಲಾಗಿ ಮಲೇಷಿಯಾ ಮೂಲದ ಮ್ಯಾಕ್ಸಿಸ್ ಕಮ್ಯೂನಿಕೇಷನ್ ಸಂಸ್ಥೆ ಸನ್ ನೆಟ್ವರ್ಕ್ ಮಾರಲು ಮಾರನ್ ಮುಂದಾಗಿದ್ದರು.ಸನ್ ನೆಟ್ವರ್ಕ್ ನಲ್ಲಿ ಮ್ಯಾಕ್ಸಿಸ್ 69 ಕೋಟಿ ರು ಹೂಡಿಕೆ ಮಾಡಿತ್ತು ಎನ್ನಲಾಗಿದೆ.

ಸುಮಾರು 549,96,01,793 ಲಂಚ ರೂಪದಲ್ಲಿ ಪಡೆದು ಸನ್ ಡೈರೆಕ್ಟ್ ನಲ್ಲಿ ಬಂಡವಾಳ ರೂಪದಲ್ಲಿ ಹೂಡಲಾಗಿತ್ತು. ಆಸ್ಟ್ರೋ ಆಲ್ ಏಷ್ಯಾ ನೆಟ್ವರ್ಕ್ಸ್ ಒಡೆತನದ ಸೌಥ್ ಏಷ್ಯಾ ಎಂಟರ್ ಟ್ರೈನ್ ಮೆಂಟ್ ಹೋಲಿಂಗ್ಸ್ ಹಣ ಪಾವತಿಸಿರುವ ಬಗ್ಗೆ ಮಾಹಿತಿ, ಪುರಾವೆ ಸಿಕ್ಕಿತು.

ಬಹುಕೋಟಿ ಟೆಲಿಕಾಂ ಹಗರಣದಲ್ಲಿ ಆರೋಪಗಳು ಕೇಳಿ ಬಂದ ನಂತರ ಕೇಂದ್ರ ಜವಳಿ ಖಾತೆಗೆ ದಯಾನಿಧಿ ಮಾರನ್ ರಾಜೀನಾಮೆ ನೀಡಿದ್ದರು.

ಚೆನ್ನೈನ ತಮ್ಮ ನಿವಾಸಕ್ಕೆ ಅಕ್ರಮವಾಗಿ 300 ದೂರವಾಣಿ ಸಂಪರ್ಕ ಪಡೆದು ನಂತರ ಸೋದರ ಕಲಾನಿಧಿ ಮಾರನ್ ಒಡೆತನದ ಸನ್ ನೆಟ್ವರ್ಕ್ ಕಚೇರಿಗೆ ನೀಡಲಾಗಿತ್ತು ಎಂಬ ಆರೋಪ ಮಾರನ್ ಸೋದರರು ಹೊತ್ತಿದ್ದರು. ಇದರ ಜೊತೆಗೆ ಏರ್ ಸೆಲ್ ಹಾಗೂ ಮಾಕ್ಸಿಸ್ ಒಪ್ಪಂದ, 2ಜಿ ಹಗರಣ, ಟೆಲಿಕಾಂ ನಿಯಮ ಉಲ್ಲಂಘನೆ ಮುಂತಾದ ಆರೋಪಗಳು ಮಾರನ್ ವಿರುದ್ಧ ಕೇಳಿ ಬಂದಿದೆ

English summary
The Central Bureau of Investigation has some tough questions for Dayanidhi Maran, former union telecom minister in connection with the telephone exchange scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X