ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಕೆಲಸಕ್ಕಿಂತ ಕುಟುಂಬ ರಾಜಕಾರಣದಲ್ಲಿ ಕೆಸಿಆರ್ ಬ್ಯುಸಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 23: ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸರ್ಕಾರವು ಕೆಲಸಕ್ಕಿಂತ ಹೆಚ್ಚು ರಾಜಕೀಯ ಮಾಡುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​ ದೇಶ ಮತ್ತು ತೆಲಂಗಾಣಕ್ಕಿಂತ ಕುಟುಂಬವೇ ಹೆಚ್ಚಾಗಿದೆ. ಟಿಆರ್‌ಎಸ್ ನಾಯಕರು ಅಕ್ಕಿ ಮರುಬಳಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪವಿದೆ ಎಂದು ಹೇಳಿದರು.

ರಾಷ್ಟ್ರಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳ ಖದರ್: ಕರ್ನಾಟಕದ ಎಚ್‌ಡಿಕೆ-ತೆಲಂಗಾಣ ಸಿಎಂ ಚರ್ಚೆರಾಷ್ಟ್ರಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳ ಖದರ್: ಕರ್ನಾಟಕದ ಎಚ್‌ಡಿಕೆ-ತೆಲಂಗಾಣ ಸಿಎಂ ಚರ್ಚೆ

ಎನ್​ಐಟಿಐ ಆಯೋಗದ ಸಭೆಗೆ ಕೆಸಿಆರ್ ಹಾಜರಾಗಲಿಲ್ಲ. ಡಬಲ್ ಬೆಡ್ ರೂಂ ಕೊಡುತ್ತಿಲ್ಲ, ಆವಾಸ್ ಯೋಜನೆ ಮನೆ ಕಟ್ಟುತ್ತಿಲ್ಲ, ಮೈಮ್ ಜೊತೆಗೂಡಿ ಹಳೆ ಪಟ್ಟಣಕ್ಕೆ ಮೆಟ್ರೋ ಬರದಂತೆ ತಡೆಯುತ್ತಿದ್ದಾರೆ. ಸಿಎಜಿ ವರದಿ ಬಗ್ಗೆ ಕೆಸಿಆರ್ ಮತ್ತು ಕೆಟಿಆರ್ ಯಾಕೆ ಉತ್ತರಿಸಲಿಲ್ಲ. ಅವರ ಕುಟುಂಬಕ್ಕೆ ಉದ್ಯೋಗ ನೀಡುವುದಾಗಿ ಕೆಸಿಆರ್ ಹೇಳಿದ್ದಾರೆ ಎಂದು ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.

Telangana Govt busy in politics more than development work: Pralhad Joshi allegation

ತೆಲಂಗಾಣದಲ್ಲಿ ಕೇಂದ್ರದ ಯೋಜನೆ ಜಾರಿ ಆಗುತ್ತಿಲ್ಲ:

ಭೂಸ್ವಾಧೀನವಾಗದ ಕಾರಣ ಹೈದರಾಬಾದ್-ಬಿಜಾಪುರ ಹೆದ್ದಾರಿ ಪೂರ್ಣಗೊಳ್ಳುತ್ತಿಲ್ಲ. ಈ ಸಂಬಂಧ ಕೇಂದ್ರದಿಂದ 2017ರಲ್ಲಿ 924 ಕೋಟಿ ಬಿಡುಗಡೆಯಾಗಿದೆ. ಮೂರು ವರ್ಷಗಳ ನಂತರ ಆಯುಷ್ಮಾನ್ ಭಾರತ್ ಜಾರಿಯಾಗುತ್ತಿದೆ. ರಾಜ್ಯದಲ್ಲಿ ಕೇಂದ್ರದ ಯೋಜನೆಗಳು ಸರಿಯಾಗಿ ಜಾರಿಯಾಗುತ್ತಿಲ್ಲ. ಹಣ ಬೇರೆಡೆಗೆ ತಿರುಗುತ್ತಿದೆ.

ತೆಲಂಗಾಣ ತನ್ನ ಕುಟುಂಬ ಎಂದು ಕೆಸಿಆರ್ ಹೇಳಿದ್ದರು, ಆದರೆ ರಾಷ್ಟ್ರ ರಾಜಕಾರಣಕ್ಕಿಂತ ತೆಲಂಗಾಣದಲ್ಲಿ ಕೆಸಿಆರ್ ಬಳಿ ಹೆಚ್ಚು ಹಣವಿದೆ ಎನ್ನಲಾಗುತ್ತಿದೆ. ದೇಶಾದ್ಯಂತ ನಡೆಯುತ್ತಿರುವ ಉಪಚುನಾವಣೆಗಳು ಮೋದಿಯವರನ್ನು ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಿವೆ ಎಂದು ಇದೇ ವೇಳೆ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.'

English summary
Telangana CM K Chandrashekhar rao Govt busy in politics more than development work, Central Minister Pralhad Joshi allegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X