ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೇಜ್ ಬಹದ್ದೂರ್ ಸಾವಿನ ವದಂತಿ, ಸತ್ಯ ಏನು ಎಂದು ಇಲ್ಲಿದೆ ಮಾಹಿತಿ

ಬಿಎಸ್ ಎಫ್ ಜವಾನ್ ತೇಜ್ ಬಹದ್ದೂರ್ ಸಾವನ್ನಪಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ವರದಿ ಇದು. ಸಂಬಂಧಪಟ್ಟವರ ಹೇಳಿಕೆಗಳು ಸಹ ಇವೆ

|
Google Oneindia Kannada News

ನವದೆಹಲಿ, ಮಾರ್ಚ್ 24: ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರವಿಡೀ ಬಿಎಸ್ ಎಫ್ ಜವಾನ್ ತೇಜ್ ಬಹದ್ದೂರ್ ಬಗ್ಗೆಯೇ ವದಂತಿ ಹರಿದಾಡುತ್ತಿತ್ತು. ಆತನನ್ನು ಕೊಲ್ಲಲಾಗಿದೆ ಎಂಬ ಗಾಳಿ ಸುದ್ದಿಯನ್ನು ಯಾರೋ ಜೋರಾಗಿಯೇ ಹರಿಬಿಟ್ಟಿದ್ದರು. ಒಂದ್ನಿಮಿಷ, ಈ ತೇಜ್ ಬಹದ್ದೂರ್ ಯಾರು ಗೊತ್ತಾಯ್ತಾ?

ಬಿಎಸ್ ಎಫ್ ನಲ್ಲಿ ಸರಿಯಾದ ಊಟ-ತಿಂಡಿ ಕೊಡ್ತಿಲ್ಲ ಎಂದು ವಿಡಿಯೋ ಮಾಡಿ ಹಾಕಿದ್ದ ತೇಜ್ ಬಹದ್ದೂರೇ ಇದು. ಆ ನಂತರ ಆತನ ಪತ್ನಿ ಕೂಡ ತನ್ನ ಪತಿಯ ಜೀವಕ್ಕೆ ತೊಂದರೆ ಇದೆ. ಅವರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದೆಲ್ಲ ಆರೋಪಿಸಿದ್ದರಲ್ಲಾ, ಆ ತೇಜ್ ಬಹದ್ದೂರ್ ಸತ್ತೇ ಹೋಗಿದ್ದಾರೆ ಎಂದೆಲ್ಲ ವದಂತಿ ಹರಿದಾಡಿತು.['ನನಗೆ ಕಿರುಕುಳ ನೀಡುತ್ತಿದ್ದಾರೆ' ತೇಜ್ ಬಹದ್ದೂರ್ ಮತ್ತೊಂದು ವಿಡಿಯೋ]

ಕೊನೆಗೆ ಗಡಿ ಭದ್ರತಾ ಪಡೆ ಹಾಗೂ ಅದೇ ಜವಾನ್ ನ ಹೆಂಡತಿ ಕೂಡ, ಇದೆಲ್ಲ ಗಾಳಿ ಸುದ್ದಿ. ತೇಜ್ ಬಹದ್ದೂರ್ ಬದುಕಿದ್ದಾರೆ ಹಾಗೂ ಆರೋಗ್ಯವಾಗಿದ್ದಾರೆ ಅಂತ ಹೇಳಿಕೆ ನೀಡಿದ್ದಾರೆ. ಇನ್ನೊಂದು ವಿಚಿತ್ರ ಏನೆಂದರೆ, ಬಹದ್ದೂರ್ ಹೋಲಿಕೆ ಇರುವ ವ್ಯಕ್ತಿಯ ಫೋಟೋ ಚಲಾವಣೆಯಲ್ಲಿದೆ. ಅದರಲ್ಲಿ ವ್ಯಕ್ತಿ ಮಿಲಿಟರಿ ದಿರಿಸಿನಲ್ಲಿದ್ದು, ಕಣ್ಣು ಮುಚ್ಚಿದ್ದಾನೆ. ಮೂಗಿನಿಂದ ರಕ್ತ ಸೋರುತ್ತಿದೆ. ಮುಖದ ಒಂದು ಭಾಗ ಬಟ್ಟೆಯಿಂದ ಮುಚ್ಚಲಾಗಿದೆ.[ಕಳಪೆ ಆಹಾರ ಪೂರೈಕೆ, ಯೋಧನಿಗೆ ಮಾನಸಿಕ, ದೈಹಿಕ ಹಿಂಸೆ ಆರೋಪ!]

ಫೋಟೋ ಹಾಕಿ ವದಂತಿ

ಭಾರತೀಯ ಸೇನೆಯ ಭ್ರಷ್ಟಾಚಾರ ಬಯಲು ಮಾಡಿದ ನಂತರ ಬಿಎಸ್ ಎಫ್ ಯೋಧ, ತೇಜ್ ಬಹದ್ದೂರ್ ಯಾದವ್ ನಾಪತ್ತೆಯಾಗಿದ್ದ, ಆತನನ್ನು ಕೊಲ್ಲಲಾಗಿದೆ ಎಂದು ಅಸ್ಫನ್ದ್ಯಾರ್ ಭಿತ್ತಾನಿ ಎಂಬಾತ ರೀಟ್ವೀಟ್ ಮಾಡಿದ್ದಾನೆ. ಅದರಲ್ಲಿ ಒಂದು ಕಡೆ ಜವಾನ್ ನ ಹೋಲುವ ವ್ಯಕ್ತಿಯ ಫೋಟೋ ಹಾಗೂ ಮತ್ತೊಂದು ಕಡೆ ತೇಜ್ ಬಹದ್ದೂರ್ ನ ಫೋಟೋ ಹಾಕಲಾಗಿದೆ.

Array

ತೇಜ್ ಬಹದ್ದೂರ್ ಜೀವಂತ

ತೇಜ್ ಬಹದ್ದೂರ್ ಆರೋಗ್ಯವಾಗಿದ್ದಾರೆ. ಸದ್ಯ ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
-ಶುಭೇಂದು ಭಾರದ್ವಾಜ್, ಬಿಎಸ್ ಎಫ್ ಸಾರ್ವಜನಿಕ ಸಂಪರ್ಕಾಧಿಕಾರಿ

ಅವರು ಆರೋಗ್ಯವಾಗಿದ್ದಾರೆ

ಅವರು ಆರೋಗ್ಯವಾಗಿದ್ದಾರೆ

ಹಿರಿಯ ಯೋಧರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ನೋಡಿ, ನನಗೆ ಕರೆ ಮಾಡಿ, ನನ್ನ ಪತಿಯ ಬಗ್ಗೆ ವಿಚಾರಿಸಿದರು. ಆ ನಂತರ ನನ್ನ ಪತಿಗೆ (ಯಾದವ್) ಕರೆ ಮಾಡಿ, ಮಾತನಾಡಿದೆ. ಅವರು ಆರೋಗ್ಯವಾಗಿದ್ದಾರೆ. ಅವರ ವಿರುದ್ಧದ ತನಿಖೆ ಹಾಗೂ ಅವರು ಮಾಡಿದ್ದ ಆರೋಪದ ಬಗ್ಗೆ ತನಿಖೆ ನಡೆಸುವುದನ್ನು ಎದುರು ನೋಡುತ್ತಿದ್ದಾರೆ.[ಬಿಎಸ್ ಎಫ್ ಯೋಧನ ವಿಡಿಯೋ ಮಾಹಿತಿ ಇಲ್ಲ: ವಿಕೆ ಸಿಂಗ್]
-ಶರ್ಮಿಳಾ ಯಾದವ್ (ತೇಜ್ ಬಹದ್ದೂರ್ ಪತ್ನಿ) ಔಟ್ ಲುಕ್ ಗೆ ನೀಡಿದ ಮಾಹಿತಿ

ಮಾವೋವಾದಿಗಳಿಂದ ಹತ್ಯೆಯಾದ ಯೋಧನ ಫೋಟೋ

ಮಾವೋವಾದಿಗಳಿಂದ ಹತ್ಯೆಯಾದ ಯೋಧನ ಫೋಟೋ

ಇದೇ ವೇಳೆ ಯಾದವ್ ನ ಹೋಲುವಂತಿರುವ ವ್ಯಕ್ತಿಯ ಫೋಟೋ ಸಿಕ್ಕಿರುವುದು ಎರಡು ವಾರದ ಹಿಂದೆ. ಛತ್ತೀಸ್ ಗಢದಲ್ಲಿ ಮಾವೋವಾದಿಗಳಿಂದ ಹತ್ಯೆಯಾಗಿದ್ದ ಸಿಆರ್ ಪಿಎಫ್ ಯೋಧ ಆತ.

ವಿಚಾರಣೆ ನಡೆಯಬೇಕಿದೆ

ವಿಚಾರಣೆ ನಡೆಯಬೇಕಿದೆ

ಈ ವಿಚಾರದ ಬಗ್ಗೆ ಬಿಎಸ್ ಎಫ್ ನಿಂದ ಯಾವುದೇ ಅಧಿಕೃತ ವಿಚಾರಣೆ ಆರಂಭವಾಗಿಲ್ಲ. " ಈ ಕೆಲವು ಪೋಸ್ಟ್ ಗಳು ಹಂಚಿಕೊಂಡವರ ಹೆಸರು ಭಾರತೀಯರದ್ದು ಅನಿಸುವಂತಿವೆ. ಆದರೆ ಈ ಬಗ್ಗೆ ತನಿಖೆ ನಡೆಯಬೇಕು. ಮತ್ತು ಅವುಗಳನ್ನು ಎಲ್ಲಿಂದ ಪೋಸ್ಟ್ ಮಾಡಿದ್ದು ಎಂಬ ಬಗ್ಗೆ ಕೂಡ ಗೊತ್ತಾಗಬೇಕು" ಎಂದು ಬಿಎಸ್ ಎಫ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಔಟ್ ಲುಕ್ ವರದಿ ಮಾಡಿದೆ.

English summary
On Wednesday, social media was abuzz with the news that BSF ‘whistle-blower’ Tej Bahadur Yadav had been killed. A photo of a dead jawan, alleged to be Yadav, which is circulating on the internet had sparked the rumour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X