ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ದಾಳಿಗಳು ಕಾನೂನಾತ್ಮಕವಾಗಿದ್ದು, ರಾಜಕೀಯ ಪ್ರೇರಿತವಲ್ಲ: ಮೋದಿ

|
Google Oneindia Kannada News

ನವದೆಹಲಿ, ಏ.20: ಐಟಿ ದಾಳಿಯನ್ನು ಕೇಂದ್ರ ಸರ್ಕಾರವೇ ಮಾಡಿಸುತ್ತಿದೆ ಎನ್ನುವ ಆರೋಪಗಳ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಐಟಿ ದಾಳಿಗಳು ರಾಜಕೀಯ ಪ್ರೇರಿತವಲ್ಲ ಕಾನೂನಾತ್ಮಕವಾಗಿದ್ದು ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದಾಯ ತೆರಿಗೆ ಇಲಾಖೆ ದಾಳಿಗಳು ರಾಜಕೀಯ ದ್ವೇಷದ ಭಾಗವಲ್ಲ ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಎಲ್ಲವೂ ಕಾನೂನು ಪ್ರಕಾರವೇ ನಡೆಯುತ್ತದೆ ಎಂದರು.

'ಹೇಮಂತ್ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ': ವಿವಾದದ ಕಿಡಿ ಹಚ್ಚಿದ ಸಾಧ್ವಿ ಪ್ರಗ್ಯಾ 'ಹೇಮಂತ್ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ': ವಿವಾದದ ಕಿಡಿ ಹಚ್ಚಿದ ಸಾಧ್ವಿ ಪ್ರಗ್ಯಾ

ಮಾಲೇಗಾಂವ್‌ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್‌ರನ್ನು ಭೋಪಾಲ್‌ನಿಂದ ಲೋಕಸಭಾ ಚುನಾವಣೆ ಕಣಕ್ಕಿಳಿಸಿರುವ ಕುರಿತು ಸಮರ್ಥಿಸಿಕೊಂಡ ಮೋದಿ, ಯಾರು ಹಿಂದುಗಳನ್ನು ಭಯೋತ್ಪಾದಕರು ಎಂದು ಬಿಂಬಿಸುತ್ತಾರೋ ಅಂತವರಿಗೆಲ್ಲ ಇವರೊಂದು ಚಿಹ್ನೆಯಾಗಿದ್ದಾರೆ.

Tax Raids Happening As Per Law Not Part Of Political Vendetta PM Modi

ಅವರು ಕಾಂಗ್ರೆಸ್‌ಗೆ ಕಠಿಣ ಸ್ಪರ್ಧೆ ನೀಡಲಿದ್ದಾರೆ. ಸಾಧ್ವಿ ಪ್ರಜ್ಞಾರನ್ನು ಅಭ್ಯರ್ಥಿಯನ್ನಾಗಿ ಮಾಡಿರುವ ಈ ನಿರ್ಧಾರವು ಇಡೀ ಧರ್ಮ ಮತ್ತು ಸಂಸ್ಕೃತಿಯನ್ನು ಭಯೋತ್ಪಾದನೆಗೆ ಹೋಲಿಸುವ ವ್ಯಕ್ತಿಗಳಿಗೆ ನೀಡಿದ ಸೂಕ್ತ ಉತ್ತರವಾಗಿದೆ ಎಂದು ಹೇಳಿದರು.

ಮೇ 23ರಂದು ಕಾಂಗ್ರೆಸ್‌-ಜೆಡಿಎಸ್‌ಗೆ ಬಿಗ್ ಶಾಕ್ : ಮೋದಿ ಟ್ವೀಟ್ ಮೇ 23ರಂದು ಕಾಂಗ್ರೆಸ್‌-ಜೆಡಿಎಸ್‌ಗೆ ಬಿಗ್ ಶಾಕ್ : ಮೋದಿ ಟ್ವೀಟ್

ಬಿಜೆಪಿಯು ಮತ್ತು ಅಧಿಕ ಸ್ಥಾನಗಳೊಂದಿಗೆ ಅಧಿಕಾರಕ್ಕೆ ಮರಳಿ ಬರುತ್ತದೆ ಮತ್ತು ಎನ್‌ಡಿಎ ಮೈತ್ರಿಯು 2014ಕ್ಕಿಂತಲೂ ಈ ಭಾರಿ ಉತ್ತಮವಾಗಿರುತ್ತದೆ. ಬಹುಮತದೊಂದಿಗೆ ಜಯ ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಧ್ವಿ ಪ್ರಜ್ಞಾ ಸಿಂಗ್‌ರನ್ನು ಮಧ್ಯಪ್ರದೇಶದ ಭೂಪಾಲ್‌ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು, ಎದುರಾಳಿಯಾಗಿ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಕಣದಲ್ಲಿದ್ದಾರೆ, ಪ್ರಜ್ಞಾ ಗೆಲುವು ಸಾಧಿಸುವುದು ನಿಶ್ಚಿತವೆಂದರು.

English summary
Prime Minister Narendra Modi on Saturday said the recent Income Tax raids on certain politicians were not part of "political vendetta" and things were happening as per the law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X