ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿಗಳ ಜೊತೆ ಕರ್ನಾಟಕದ 'ಟಾಟಾ ಸ್ಪರ್ಧೆ' ವಿಜೇತರು

By Mahesh
|
Google Oneindia Kannada News

ನವದೆಹಲಿ, ಜ.13: ಟಾಟಾ ಸಮೂಹದ 7 ಮತ್ತು 8ನೇ ವರ್ಷದ ವಾರ್ಷಿಕ ಪ್ರಬಂಧ ಸ್ಪರ್ಧೆ 'ಟಾಟಾ ಬಿಲ್ಡಿಂಗ್ ಇಂಡಿಯಾ ಶಾಲಾ ಪ್ರಬಂಧ ಸ್ಪರ್ಧೆ' ಯ ರಾಷ್ಟ್ರೀಯ ವಿಜೇತರು ದೆಹಲಿಯ ರಾಷ್ಟ್ರಪತಿಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ವಿಜೇತ ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಸಲ ರಾಷ್ಟ್ರಪತಿಭವನ ಪ್ರವಾಸ ಮಾಡುವ ಅವಕಾಶ ಪಡೆದರು.

2006ರಲ್ಲಿ 1 ಲಕ್ಷ ವಿದ್ಯಾರ್ಥಿಗಳೊಂದಿಗೆ 6 ನಗರಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಆರಂಭವಾದ ಸ್ಪರ್ಧೆ, ಇಂದು ದೇಶದ ಶಾಲಾ ಮಟ್ಟದ ಬೃಹತ್ ಸ್ಪರ್ಧೆ ಎನಿಸಿದೆ. 6-12ನೇ ತರಗತಿ ವಿದ್ಯಾರ್ಥಿಗಳಿಗೆ ದೇಶ ನಿರ್ಮಾಣದಲ್ಲಿ ತಮ್ಮ ಆಲೋಚನೆ ಹಂಚಿಕೊಳ್ಳಲು ವೇದಿಕೆ ಒದಗಿಸಿಕೊಟ್ಟಿದೆ. 2013-14ರ ಸ್ಪರ್ಧೆ ಪಂಜಾಬಿ ಮತ್ತು ಅಸ್ಸಾಂ ಭಾಷೆಗಳಿಗೂ ಸೇರ್ಪಡೆಗೊಂಡಿತು. ಪ್ರತಿ ಆವೃತ್ತಿ 170 ನಗರದ 6,500-7,000 ಶಾಲೆಯ ಸುಮಾರು 30 ಲಕ್ಷ ವಿದ್ಯಾರ್ಥಿಗಳನ್ನು ತಲುಪಿದೆ.[ಸ್ವಚ್ಛ ಭಾರತದ ಬಗ್ಗೆ ಪ್ರಬಂಧ ಸ್ಪರ್ಧೆ]

2 ಆವೃತಿಗಳ ರಾಷ್ಟ್ರೀಯ ವಿಜೇತರನ್ನು ಇದೇ ದಿನ ಟಾಟಾ ಸಮೂಹ ನವದಿಲ್ಲಿಯ ಫಿಕ್ಕಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಿತು. ಟಾಟಾ ಸನ್ಸ್ ಲಿ. ನಿರ್ದೇಶಕ ರೊನೆನ್ ಸೇನ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರನ್ನು ಅಭಿನಂದಿಸಿದರು. ಟಾಟಾ ಬಿಲ್ಡಿಂಗ್ ಇಂಡಿಯಾ ಟ್ರೋಫಿ ಹಾಗೂ ಲ್ಯಾಪ್‍ಟಾಪ್‍ಗಳನ್ನು ಬಹುಮಾನವಾಗಿ ನೀಡಿದರು.

The Tata Building India School Essay Competition winners meet President Pranab Mukherjee

ಈ ಸಂದರ್ಭದಲ್ಲಿ ಮಾತನಾಡಿದ ರೋಹನ್ ಸೇನ್, ಇದರಲ್ಲಿ ಭಾಗವಹಿಸಿದ ಎಲ್ಲರೂ ವಿಜೇತರು. ಅವರು ತಮ್ಮ ಪಾಲಕರು, ಶಿಕ್ಷಕರು, ಶಾಲೆ, ನಗರ ಮತ್ತು ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ. ಟಾಟಾ ಬಿಲ್ಡಿಂಗ್ ಇಂಡಿಯಾ ಸ್ಕೂಲ್ ಎಸ್ಸೆ ಸ್ಪರ್ಧೆ ದೇಶದಾದ್ಯಂತ ವಿಶೇಷವಾಗಿ 2,3 ಮತ್ತು 4ನೇ ದರ್ಜೆಯ ನಗರಗಳನ್ನು ತಲುಪಿದೆ. ಈ ಯಶಸ್ಸು ಟಾಟಾ ಸಮೂಹದ ಡಿಎನ್‍ಎಯ ಒಂದು ಭಾಗ ಎಂದರು.

ಪ್ರತಿ ವರ್ಷ ಈ ಪ್ರಬಂಧ ಸ್ಪರ್ಧೆ ಒಂದು ಸ್ಪೂರ್ತಿದಾಯಕ ಮತ್ತು ಸವಾಲಿನ ವಿಷಯವನ್ನು ಹುಡುಕುತ್ತದೆ. 7ನೇ ಆವೃತಿ ಭಾರತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ವಿಷಯ ಹೊಂದಿತ್ತು. 8ನೇ ಆವೃತಿ ಸಂತೋಷ ಮತ್ತು ಸಮೃದ್ಧಯುತ ದೇಶ ಎಂಬ ಧ್ಯೇಯ ಹೊಂದಿತ್ತು. ವಿಜೇತ ಪ್ರಬಂಧಗಳು ಈ ವಿಷಯದಲ್ಲಿ ಭಿನ್ನವಾದ, ಸ್ಪೂರ್ತಿದಾಯಕ ಆಲೋಚನೆ ಹೊಂದಿರುವಂಥದ್ದು.

ಟಾಟಾ ಬಿಲ್ಡಿಂಗ್ ಇಂಡಿಯಾ ಸ್ಪರ್ಧೆ 7 ಮತ್ತು 8ನೇ ಆವೃತಿ 2 ಹಂತದಲ್ಲಿತ್ತು. 2012-13ರಲ್ಲಿ ಮೊದಲು ಟಾಟಾ ಬಿಲ್ಡಿಂಗ್ ಇಂಡಿಯಾದ ಆಡಿಯೊ ವಿಷ್ಯುವಲ್ಸ್ ಜೊತೆ ಸ್ಪೂರ್ತಿ ನೀಡುವ ಟಾಟಾದ ಸ್ಪೀಕ್ ಆಫ್ ದಿ ಅರ್ಥ್ ಹಾಗೂ 2013-14ರಲ್ಲಿ ಕೀಪರ್ಸ್ ಆಫ್ ದಿ ಫ್ಲೇಮ್' ಸಿನಿಮಾ ಪ್ರದರ್ಶನವಿತ್ತು. ನಂತರ ವಿದ್ಯಾರ್ಥಿಗಳು ನೀಡಿದ ಈ ವರ್ಷದ ವಿಚಾರ ಸಂತೋಷ ಮತ್ತು ಸಮೃದ್ಧಯುತ ರಾಷ್ಟ್ರ'ದ ಮೇಲೆ ಪ್ರಬಂಧ ಬರೆದಿದ್ದರು.

ಸ್ಪರ್ಧೆ 2 ಮಟ್ಟದಲ್ಲಿ ನಡೆದಿತ್ತು. ಜೂನಿಯರ್ ಮಟ್ಟದಲ್ಲಿ 6-8ನೇ ತರಗತಿ ಮಕ್ಕಳು ಮತ್ತು ಸಿನಿಯರ್ ಮಟ್ಟದಲ್ಲಿ 9-12ನೇ ತರಗತಿ ಮಕ್ಕಳು ಪ್ರಬಂಧ ಬರೆದರು. ವಿಷಯದ ಆಳ, ಸ್ವರೂಪ, ಕ್ರಿಯಾಶೀಲತೆ ಮತ್ತು ಸಂವಹನ, ಆಲೋಚನೆ ಆಧಾರದ ಮೇಲೆ ಪ್ರಬಂಧವನ್ನು ಪರಿಶೀಲಿಸಲಾಗಿತ್ತು. ಶಾಲೆ, ನಗರ ಮತ್ತು ರಾಷ್ಟ್ರಮಟ್ಟದಲ್ಲಿ ಬಹುಮಾನ ನೀಡಲಾಗಿತ್ತು. ಅಂತಿಮವಾಗಿ ರಾಷ್ಟ್ರಮಟ್ಟದಲ್ಲಿ ದಕ್ಷ ತೀರ್ಪುಗಾರರ ತಂಡ ಪರಿಶೀಲನೆ ನಡೆಸಿ ಬಹುಮಾನ ಘೋಷಿಸಿದೆ.
ಟಾಟಾ ಸಮೂಹದ ಕಂಪನಿಗಳ ಕುರಿತು

1868ರಲ್ಲಿ ಜೆಮ್‍ಶೆಡ್‍ಜಿ ಟಾಟಾರಿಂದ ಸ್ಥಾಪಿತ ಟಾಟಾ ಸಮೂಹ, ಭಾರತದಲ್ಲಿ ಕೇಂದ್ರ ಕಚೇರಿ ಹೊಂದಿದೆ. 100ಕ್ಕೂ ಹೆಚ್ಚು ಕಂಪನಿಗಳನ್ನು 6 ವಹಿವಾಟು ವಲಯಗಳಲ್ಲಿ ಹೊಂದಿದೆ. ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ, ಎಂಜಿನಿಯರಿಂಗ್, ಮೆಟಿರಿಯಲ್ಸ್, ಸೇವೆ, ಇಂಧನ, ಗ್ರಾಹಕ ಉಪಯೋಗಿ ಉತ್ಪನ್ನಗಳು ಮತ್ತು ಕೆಮಿಕಲ್ಸ್ ಕ್ಷೇತ್ರದಲ್ಲಿ ಅಸ್ತಿತ್ವ ಹೊಂದಿದೆ. 6 ಖಂಡಗಳ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವಹಿವಾಟು ನಡೆಸುತ್ತಿದೆ. 150 ರಾಷ್ಟ್ರಗಳಿಗೆ ಉತ್ಪನ್ನ ರಫ್ತು ಮತ್ತು ಸೇವೆ ನೀಡುತ್ತಿದೆ.

2014-15ರಲ್ಲಿ ಕಂಪನಿಯ ಆದಾಯ 108.78 ಶತಕೋಟಿ ಡಾಲರ್. ಇದರಲ್ಲಿ ಶೇ.58ರಷ್ಟು ಪಾಲು ಭಾರತದ ಹೊರಗಿನದ್ದು. ವಿಶ್ವದಾದ್ಯಂತ 600000 ನೌಕರರನ್ನು ಹೊಂದಿದೆ. ಪ್ರತಿ ಟಾಟಾ ಕಂಪನಿ ಪ್ರತ್ಯೇಕವಾಗಿ ವಹಿವಾಟು ನಡೆಸುತ್ತದೆ. ತನ್ನದೇ ಸ್ವಂತ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಷೇರುದಾರರನ್ನು ಹೊಂದಿದೆ. 30 ಸಾರ್ವಜನಿಕ ನೋಂದಣಿಗೊಂಡ ಕಂಪನಿಗಳಿವೆ. ಮಾರುಕಟ್ಟೆ ಬಂಡವಾಳ 134 ಶತಕೋಟಿ ಡಾಲರ್‍ಗೂ ಅಧಿಕ. ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಕನ್ಸಲ್ಟೆನ್ಸಿ, ಟಾಟಾ ಪವರ್, ಟಾಟಾ ಕೆಮಿಕಲ್, ಟಾಟಾ ಗ್ಲೋಬಲ್ ಬಿವರೇಜಸ್, ಟಾಟಾ ಟೆಲಿಸರ್ವೀಸಸ್, ಟೈಟಾನ್, ಟಾಟಾ ಕಮ್ಯುನಿಕೇಷನ್, ಇಂಡಿಯನ್ ಹೋಟೆಲ್ಸ್ ಪ್ರಮುಖ ಕಂಪನಿಗಳು.

English summary
The Tata Building India School Essay Competition is one of the key initiatives undertaken by the Tata group of companies to motivate the youth of India towards thinking about nation building. The essay competition provides a unique platform to encourage young leaders of tomorrow to showcase their expressions
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X