ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಬ್ಲೀಗ್ ಜಮಾತ್‌ ಸಭೆಯಿಂದಾಗಿ ಕೊರೊನಾ ವೇಗವಾಗಿ ಹಬ್ಬಿದ್ದು ಹೇಗೆ?

|
Google Oneindia Kannada News

ನವದೆಹಲಿ, ಏಪ್ರಿಲ್ 03 : ಮಾರ್ಚ್ ತಿಂಗಳಿನಲ್ಲಿ ದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲೀಗ್ ಜಮಾತ್ ಧಾರ್ಮಿಕ ಸಭೆ ಕೊರೊನಾ ವೇಗವಾಗಿ ಹರಡಲು ಕಾರಣವಾಗಿದೆ.

ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ವಿವಿಧ ದೇಶಗಳ 295 ಜನರಿಗೆ ಕೊರೊನಾ ಸೋಂಕು ತಗುಲಿದೆ. ಭಾರತದಲ್ಲಿಯೇ ಈ ಸಭೆಯಲ್ಲಿ ಪಾಲ್ಗೊಂಡ ಶೇ 60 ರಷ್ಟು ಜನರಿಗೆ ಸೋಂಕು ತಗುಲಿದೆ.

ಕೊರೊನಾ: ದೆಹಲಿ ಮಸೀದಿ ಪ್ರಾರ್ಥನೆಯಲ್ಲಿ ಕರ್ನಾಟಕದ 300 ಜನ ಇದ್ದರು!ಕೊರೊನಾ: ದೆಹಲಿ ಮಸೀದಿ ಪ್ರಾರ್ಥನೆಯಲ್ಲಿ ಕರ್ನಾಟಕದ 300 ಜನ ಇದ್ದರು!

ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ 2 ಸಾವಿರದ ಗಡಿ ದಾಟಿದೆ. ದೆಹಲಿಯಲ್ಲಿ 141, ಮಹರಾಷ್ಟ್ರದಲ್ಲಿ 88, ತಮಿಳುನಾಡಿನಲ್ಲಿ 75 ಹೀಗೆ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇವರೆಲ್ಲರೂ ಸಭೆಯಲ್ಲಿ ಪಾಲ್ಗೊಂಡವರು.

ತಬ್ಲೀಗ್ ಜಮಾತ್‌ಗೆ ಯಾವ ದೇಶದಿಂದ ಹೆಚ್ಚು ಜನರು ಆಗಮಿಸಿದ್ದರು?ತಬ್ಲೀಗ್ ಜಮಾತ್‌ಗೆ ಯಾವ ದೇಶದಿಂದ ಹೆಚ್ಚು ಜನರು ಆಗಮಿಸಿದ್ದರು?

Tablighi Jamaat Has Become The Super Spreader Of The Coronavirus

ದೆಹಲಿಯಲ್ಲಿ 141 ಪ್ರಕರಣಗಳಲ್ಲಿ 129 ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಸೇರಿದಂತೆ ವಿವಿಧ ರಾಜ್ಯದ ಜನರಿಗೆ ಕೊರೊನಾ ಸೋಂಕು ಹಬ್ಬಿದೆ.

ಕೊರೊನಾ : ಕಲಬುರಗಿಯಲ್ಲಿ ಮತ್ತೊಂದು ಕಂಟೇನ್‍ಮೆಂಟ್ ಝೋನ್ ಕೊರೊನಾ : ಕಲಬುರಗಿಯಲ್ಲಿ ಮತ್ತೊಂದು ಕಂಟೇನ್‍ಮೆಂಟ್ ಝೋನ್

ತಮಿಳುನಾಡಿನಲ್ಲಿ 75 ಪ್ರಕರಣಗಳಲ್ಲಿ 74 ಪ್ರಕರಣ ತಬ್ಲೀಗ್ ಜಮಾತ್‌ಗೆ ಸಂಪರ್ಕ ಹೊಂದಿದೆ. ತೆಲಂಗಾಣದಲ್ಲಿ 27 ರಲ್ಲಿ 26, ಕರ್ನಾಟಕದಲ್ಲಿ 14ರಲ್ಲಿ 13, ಆಂಧ್ರದಲ್ಲಿನ ಎಲ್ಲಾ 32 ಪ್ರಕರಣ ತಬ್ಲೀಗ್ ಜಮಾತ್‌ಗೆ ಸಂಪರ್ಕ ಹೊಂದಿದೆ.

ರಾಜಸ್ಥಾನದಲ್ಲಿ 13ರಲ್ಲಿ 3, ಮಹಾರಾಷ್ಟ್ರದಲ್ಲಿ 88ರಲ್ಲಿ 8 ಪ್ರಕರಣ ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಿಗೆ ಸಂಬಂಧಿಸಿದ್ದು, ಇಡೀ ದೇಶದಲ್ಲಿಯೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಈ ಸಭೆಯೇ ಕಾರಣವಾಗಿದೆ.

"ಕಳೆದ ಎರಡು ದಿನದಲ್ಲಿ 647 ಮಂದಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಗುರುವಾರ 12 ಜನರು ವಿವಿಧ ರಾಜ್ಯಗಳಲ್ಲಿ ಸಾವನ್ನಪ್ಪಿದ್ದಾರೆ. ಹೀಗೆ ಸಾವಿಗೀಡಾದವರು ತಬ್ಲೀಗ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು" ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಹೇಳಿದ್ದಾರೆ.

English summary
Those who attended the Tablighi Jamaat congregation at Nizamuddin in Delhi have been rightly called as the super spreaders of the coronavirus by many.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X