ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಸ್ವಿಸ್ ಬ್ಯಾಂಕ್ ಖಾತೆದಾರರ ಮಾಹಿತಿ ಭಾರತಕ್ಕೆ ಹಸ್ತಾಂತರ

|
Google Oneindia Kannada News

ನವದೆಹಲಿ, ಅಕ್ಟೋಬರ್ 07: ಸ್ವಿಟ್ಜರ್‌ಲ್ಯಾಂಡ್‌ನ ಸ್ವಿಸ್‌ ಬ್ಯಾಂಕ್ ಬ್ಯಾಂಕ್‌ನಲ್ಲಿ ಖಾತೆ ತೆರೆದಿರುವ ಭಾರತೀಯರ ಮಾಹಿತಿಯನ್ನು ಸ್ವಿಟ್ಜರ್‌ಲ್ಯಾಂಡ್ ದೇಶವು ಭಾರತ ಸರ್ಕಾರಕ್ಕೆ ಹಸ್ತಾಂತಿರಿಸಿದೆ.

ಇದೇ ಮೊದಲ ಬಾರಿಗೆ ಸ್ವಿಟ್ಜರ್‌ಲೆಂಡ್ ಹೀಗೆ ಸ್ವಿಸ್‌ ಬ್ಯಾಂಕ್ ಖಾತೆದಾರರ ಮಾಹಿತಿಯನ್ನು ಭಾರತಕ್ಕೆ ಹಸ್ತಾಂತರಿಸಿದ್ದು, ಬ್ಯಾಂಕ್ ಖಾತೆದಾರರ ಮಾಹಿತಿಯ ಮೊದಲ ಭಾಗ ಮಾತ್ರವೇ ಆಗಿದೆ. ಖಾತೆ ಹೊಂದಿದವರ ಎಲ್ಲ ಮಾಹಿತಿಯನ್ನೂ ಸ್ವಿಸ್ ಬ್ಯಾಂಕ್ ಭಾರತದೊಂದಿಗೆ ಹಂಚಿಕೊಳ್ಳಲಾಗಿಲ್ಲ.

Swiss Bank Shares Account Holders Information With India

ಸ್ವಿಟ್ಜರ್‌ಲ್ಯಾಂಡ್‌ನ ತೆರಿಗೆ ಆಡಳಿತ ಇಲಾಖೆ ಈ ಮಾಹಿತಿಯನ್ನು ಸ್ವಯಂಚಾಲಿತ ಮಾಹಿತಿ ವರ್ಗಾವಣೆ ಅಡಿಯಲ್ಲಿ ಹಸ್ತಾಂತರಿಸಲಾಗಿದ್ದು, ಮುಂದಿನ ಮಾಹಿತಿ ಹಸ್ತಾಂತರವು ಮುಂದಿನ ವರ್ಷ ಸೆಪ್ಟೆಂಬರ್ ನಲ್ಲಿ ನಡೆದಿದೆ.

ಪ್ರಸ್ತುತ ಚಾಲ್ತಿಯಲ್ಲಿರುವ ಹಾಗೂ 2018 ರ ಒಳಗೆ ಮುಚ್ಚಲ್ಪಟ್ಟ ಸ್ವಿಸ್‌ ಬ್ಯಾಂಕ್ ಭಾರತೀಯ ಗ್ರಾಹಕರ ಮಾಹಿತಿಯನ್ನು ಸ್ವಿಟ್ಜರ್‌ಲೆಂಡ್ ದೇಶವು ಭಾರತ ಸರ್ಕಾರಕ್ಕೆ ನೀಡಿದೆ. ಎಲ್ಲ ಭಾರತೀಯ ಗ್ರಾಹಕರ ಮಾಹಿತಿಯನ್ನು ನೀಡದೆ ಕೇವಲ ಸ್ವಲ್ಪ ಮಾಹಿತಿಯನ್ನು ಮಾತ್ರವೇ ಈಗ ನೀಡಲಾಗಿದೆ.

75 ದೇಶಗಳಿಗೆ ಬ್ಯಾಂಕ್ ಖಾತೆ ನೀಡಲಾಗಿದೆ

75 ದೇಶಗಳಿಗೆ ಬ್ಯಾಂಕ್ ಖಾತೆ ನೀಡಲಾಗಿದೆ

ಒಟ್ಟು 75 ದೇಶಗಳಿಗೆ ಈ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಲಾಗಿದ್ದು, ಇದರಲ್ಲಿ ಭಾರತವೂ ಒಂದಾಗಿದೆ. 75 ದೇಶಗಳಿಗೆ ಆಯಾ ದೇಶಗಳ ವ್ಯಕ್ತಿಗಳ ಸ್ವಿಸ್‌ ಬ್ಯಾಂಕ್ ಖಾತೆಯ ಮಾಹಿತಿ ನೀಡಲಾಗಿದೆ.

75 ದೇಶಗಳಿಗೆ 31 ಲಕ್ಷ ಬ್ಯಾಂಕ್ ಖಾತೆ ಹಸ್ತಾಂತರ

75 ದೇಶಗಳಿಗೆ 31 ಲಕ್ಷ ಬ್ಯಾಂಕ್ ಖಾತೆ ಹಸ್ತಾಂತರ

75 ದೇಶಗಳಿಗೆ 31 ಲಕ್ಷ ಬ್ಯಾಂಕ್ ಖಾತೆ ಮಾಹಿತಿಯನ್ನು ಸ್ವಿಡ್ಜರ್‌ಲ್ಯಾಂಡ್ ನೀಡಿದ್ದು, ಸುಮಾರು 24 ಲಕ್ಷ ಖಾತೆ ಅಥವಾ ಖಾತೆದಾರರ ಮಾಹಿತಿಯನ್ನು ತಾನು ಪಡೆದುಕೊಂಡಿದೆ.

ಹೆಸರು, ವಿಳಾ, ಹಣಕಾಸು ವರ್ಗಾವಣೆ ಮಾಹಿತಿ

ಹೆಸರು, ವಿಳಾ, ಹಣಕಾಸು ವರ್ಗಾವಣೆ ಮಾಹಿತಿ

ಸ್ವಿಸ್‌ ಬ್ಯಾಂಕ್ ಹಂಚಿಕೊಂಡಿರುವ ಮಾಹಿತಿಯಲ್ಲಿ ಖಾತೆದಾರನ ಹೆಸರು, ವಿಳಾಸ, ಖಾತೆಯಲ್ಲಿ ನಡೆಸಿರುವ ವ್ಯವಹಾರದ ಮಾಹಿತಿ, ಒಟ್ಟು ಹಣ, ಆದಾಯ, ಆದಾಯದ ಮೂಲದ ಬಗ್ಗೆ ಖಾತೆದಾರ ನೀಡಿರುವ ಮಾಹಿತಿ ಎಲ್ಲವೂ ಒಳಗೊಂಡಿದೆ.

2014 ರಲ್ಲಿ ಹೇಳಿದ್ದ ನರೇಂದ್ರ ಮೋದಿ

2014 ರಲ್ಲಿ ಹೇಳಿದ್ದ ನರೇಂದ್ರ ಮೋದಿ

2014 ರ ಲೋಕಸಭೆ ಚುನಾವಣೆಗೆ ಮುನ್ನಾ ನರೇಂದ್ರ ಮೋದಿ ಅವರು ಕಪ್ಪು ಹಣ ವಿಶೇಷವಾಗಿ ಸ್ವಿಸ್ ಬ್ಯಾಂಕ್‌ನಲ್ಲಿನ ಕಪ್ಪು ಹಣವನ್ನು ವಾಪಸ್ ತರುವುದಾಗಿ ಹೇಳಿದ್ದರು. ನಂತರ ಮೋದಿ ಅಧಿಕಾರಕ್ಕೆ ಬಂದು ಈ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಿದ್ದರು. ಅದು ಈಗ ಸಾಧ್ಯವಾಗಿದೆ. ಸ್ವಿಸ್‌ ಬ್ಯಾಂಕ್ ಖಾತೆ ಮಾಹಿತಿ ವರ್ಗಾವಣೆ ಮಾತು ಪ್ರಾರಂಭವಾಗಿ ಇಷ್ಟು ವರ್ಷವಾದ ಮೇಲೆ ಈಗಲೂ ಕಪ್ಪುಹಣವನ್ನು ಅಲ್ಲೇ ಇಟ್ಟಿರುತ್ತಾರೆಯೇ? ಎಂಬುದು ಪ್ರಶ್ನೆ. ಆದರೆ ಹಣ ಇಲ್ಲದಿದ್ದರೇನಂತೆ ಮಾಹಿತಿ ದೊರೆತರೂ ಸಾಕು ಅದು ಸರ್ಕಾರದ ಪಾಲಿಗೆ ಅಮೂಲ್ಯವೇ ಆಗಿರುತ್ತದೆ.

English summary
Swiss bank of Switzerland shares its accont holders information with Indian government. This is first time swiss bank sharing its information with India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X