ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಸೆ. 15ರಂದು ಚಾಲನೆ: ಮೋದಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 12: ಮಹತ್ವಾಕಾಂಕ್ಷೆಯ 'ಸ್ವಚ್ಛತಾ ಹಿ ಸೇವಾ ಅಭಿಯಾನ'ಕ್ಕೆ ಸೆಪ್ಟೆಂಬರ್ 15ರಂದು ಚಾಲನೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.

ಅಕ್ಟೋಬರ್ 2ರಂದು ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನೋತ್ಸವದ ಆಚರಣೆಯ ಅಂಗವಾಗಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.

ಸ್ವಚ್ಛ ಭಾರತಕ್ಕೆ ನಿಜವಾದ ಅರ್ಥ ನೀಡಿದ ಜಮ್ಮು ಕಾಶ್ಮೀರದ ಅಜ್ಜಿ!ಸ್ವಚ್ಛ ಭಾರತಕ್ಕೆ ನಿಜವಾದ ಅರ್ಥ ನೀಡಿದ ಜಮ್ಮು ಕಾಶ್ಮೀರದ ಅಜ್ಜಿ!

ಸ್ವಚ್ಛ ಭಾರತವನ್ನು ನಿರ್ಮಿಸುವ ಪ್ರಯತ್ನವನ್ನು ಬಲಪಡಿಸಲು ಮತ್ತು ಈ ಅಭಿಯಾನದ ಭಾಗವಾಗಲು ಎಲ್ಲರೂ ಮುಂದಾಗುವಂತೆ ಅವರು ಮನವಿ ಮಾಡಿದ್ದಾರೆ.

swachhata Hi Seva Movement will be launched on sep 15: Modi

ಈ ಸಂಬಂಧ ಪ್ರಧಾನಿ ಮೋದಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

'ಅಕ್ಟೋಬರ್‌ 2ರಂದು ಗಾಂಧೀಜಿ ಅವರ 150ನೇ ಜನ್ಮದಿನವನ್ನು ಆಚರಿಸಲಿದ್ದೇವೆ. ಭಾರತವನ್ನು ಸ್ವಚ್ಛವಾಗಿರಿಸುವ ಬಾಪು ಅವರ ಕನಸನ್ನು ನನಸು ಮಾಡುವ ಗುರಿಯೊಂದಿಗೆ ಆರಂಭಗೊಂಡ ಐತಿಹಾಸಿಕ ಆಂದೋಲನ ಸ್ವಚ್ಛ ಭಾರತಕ್ಕೆ ಇದೇ ಸಂದರ್ಭದಲ್ಲಿ ನಾಲ್ಕು ವರ್ಷ ತುಂಬಲಿದೆ. ಸ್ವಚ್ಛ ಭಾರತಕ್ಕಾಗಿ ಕೆಲಸ ಮಾಡುತ್ತಿರುವ ಎಲ್ಲರಿಗೂ ನನ್ನ ವಂದನೆಗಳು' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಒರಿಸ್ಸಾದಲ್ಲಿ ಒಟ್ಟಾಗಿ ಬೀದಿ ಗುಡಿಸಿದ ಹಿಂದು-ಮುಸ್ಲಿಮರುಒರಿಸ್ಸಾದಲ್ಲಿ ಒಟ್ಟಾಗಿ ಬೀದಿ ಗುಡಿಸಿದ ಹಿಂದು-ಮುಸ್ಲಿಮರು

ಸೆ. 15ರಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಆಂದೋಲನಕ್ಕೆ ಸಂಬಂಧಿಸಿದ ಕೆಲವು ವ್ಯಕ್ತಿಗಳ ಜತೆ ಸಂವಾದ ನಡೆಸುವ ಮೂಲಕ 'ಸ್ವಚ್ಛತಾ ಹಿ ಸೇವಾ ಅಭಿಯಾನ'ವನ್ನು ಆರಂಭಿಸಲಿದ್ದಾರೆ.

ಸ್ವಚ್ಛ ಭಾರತ ಯೋಜನೆಯಡಿ 2 ಲಕ್ಷ ಶೌಚಾಲಯ ನಿರ್ಮಾಣಸ್ವಚ್ಛ ಭಾರತ ಯೋಜನೆಯಡಿ 2 ಲಕ್ಷ ಶೌಚಾಲಯ ನಿರ್ಮಾಣ

15ರಂದು ಬೆಳಿಗ್ಗೆ 9.30ಕ್ಕೆ ನಾವೆಲ್ಲರೂ ಒಂದುಗೂಡಿ ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಚಾಲನೆ ನೀಡೋಣ ಎಂದು ಟ್ವೀಟ್ ಮಾಡಿದ್ದಾರೆ.

English summary
Prime Minister Narendra Modi on Wednesday announced the launch of Swachhata Hi Seva Movement from Sep 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X