ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಥಿಯೋಪಿಯಾ : ಭಾರತೀಯ ಮಹಿಳೆ ಕುಟುಂಬ ಸಂಪರ್ಕಿಸಲು ಸುಷ್ಮಾ ಮನವಿ

|
Google Oneindia Kannada News

ನವದೆಹಲಿ, ಮಾರ್ಚ್ 11 : ಇಥಿಯೋಪಿಯಾದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವಿಗೀಡಾದ 157 ಜನರಲ್ಲಿ ನಾಲ್ವರು ಭಾರತೀಯರು ಕೂಡ ಸೇರಿದ್ದು, ಅವರಲ್ಲಿ ಒಬ್ಬರ ಸಂಬಂಧಿಗಳನ್ನು ಸಂಪರ್ಕಿಸಲು, ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು ಟ್ವಿಟ್ಟರ್ ನಲ್ಲಿ ಕೋರಿದ್ದಾರೆ.

ಪರಿಸರ ಇಲಾಖೆಯಲ್ಲಿ ವಿಶ್ವಸಂಸ್ಥೆಯ ಸಲಹೆಗಾರ್ತಿಯಾಗಿರುವ ಶಿಖಾ ಗರ್ಗ್ ಅವರು ದುರಂತ ಸಾವಿಗೀಡಾದ ಭಾರತೀಯರಲ್ಲಿ ಒಬ್ಬರು. ಶಿಖಾ ಗರ್ಗ್ ಅವರನ್ನು ಹೊರತುಪಡಿಸಿ, ವೈದ್ಯ ಪನ್ನಗೇಶ್ ಭಾಸ್ಕರ್, ವೈದ್ಯ ಹನ್ಸಿನ್ ಅನ್ನಗೇಶ್, ನುಕವರಪು ಮನೀಷಾ ಅವರು ಕೂಡ ವಿಮಾನಪಘಾತದಲ್ಲಿ ಸಾವನ್ನಪ್ಪಿದ್ದಾರೆ.

149 ಪ್ರಯಾಣಿಕರಿದ್ದ ಇಥಿಯೋಪಿಯನ್ ಏರ್ ಲೈನ್ಸ್ ನ ವಿಮಾನ ಪತನ149 ಪ್ರಯಾಣಿಕರಿದ್ದ ಇಥಿಯೋಪಿಯನ್ ಏರ್ ಲೈನ್ಸ್ ನ ವಿಮಾನ ಪತನ

"ವಿಮಾನ ಅಪಘಾತದಲ್ಲಿ ದುರಾದೃಷ್ಟವಶಾತ್ ಸಾವಿಗೀಡಾಗಿರುವ ಶಿಖಾ ಗರ್ಗ್ ಅವರ ಕುಟುಂಬವನ್ನು ಸಂಪರ್ಕಿಸಲು ಯತ್ನಿಸುತ್ತಿದ್ದೇನೆ. ನಾನು ಹಲವಾರು ಸತಿ ಅವರ ಗಂಡನ ಸಂಖ್ಯೆಗೆ ಕರೆ ಮಾಡಲು ಯತ್ನಿಸಿದೆ. ದಯವಿಟ್ಟು ಅವರ ಕುಟುಂಬವನ್ನು ಸಂಪರ್ಕಿಸಲು ಸಹಾಯ ಮಾಡಿ" ಎಂದು ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿದ್ದಾರೆ.

Sushma Swaraj tweets on Indian woman killed in Ethiopia air crash

ನೈರೋಬಿಗೆ ಹೊರಟಿದ್ದ ಇಥಿಯೋಪಿಯಾ ಏರ್ ಲೈನ್ಸ್ ಟೆಕಾಫ್ ಆಗಿ ಕೆಲವೇ ನಿಮಿಷಗಳಲ್ಲಿ ನೆಲಕ್ಕಪ್ಪಳಿಸಿದ್ದರಿಂದ ವಿಮಾನದಲ್ಲಿದ್ದ ಎಲ್ಲ 157 ಜನರು ದುರಂತ ಅಂತ್ಯ ಕಂಡಿದ್ದಾರೆ. ಈ ಘಟನೆ ಭಾನುವಾರ ಸಂಭವಿಸಿದ್ದು, ಇವರಲ್ಲಿ ನಾಲ್ವರು ಭಾರತೀಯರು ಕೂಡ ಇದ್ದರು.

ಪರಿಸರ ಇಲಾಖೆಯಲ್ಲಿ ವಿಶ್ವಸಂಸ್ಥೆಯ ಸಲಹೆಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಶಿಖಾ ಗರ್ಗ್ ಅವರು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಯಣಿಸುತ್ತಿದ್ದರು. ಶಿಖಾ ಅವರು ಸಾವನ್ನಪ್ಪಿರುವ ವಿಷಯವನ್ನು ಕೇಂದ್ರ ಪರಿಸರ ಖಾತೆಯ ಸಚಿವ ಡಾ. ಹರ್ಷ ವರ್ಧನ್ ಖಚಿತಪಡಿಸಿದ್ದಾರೆ.

ಅದೃಷ್ಟ ಅಂದರೆ ಇದೆ: ಎರಡು ನಿಮಿಷ ತಡವಾಗಿದ್ದಕ್ಕೆ ಜೀವ ಉಳಿಯಿತು! ಅದೃಷ್ಟ ಅಂದರೆ ಇದೆ: ಎರಡು ನಿಮಿಷ ತಡವಾಗಿದ್ದಕ್ಕೆ ಜೀವ ಉಳಿಯಿತು!

ಭಾನುವಾರ ನಭಕ್ಕೆ ನೆಗೆಯುತ್ತಿದ್ದ ಆರು ನಿಮಿಷದೊಳಗೆ ನೆಲಕ್ಕಪ್ಪಳಿಸಿದ ಇಟಿ 302 ವಿಮಾನ, ಅಡಿಸ್ ಅಬಾಬಾದಿಂದ 60 ಕಿ.ಮೀ. ದೂರದಲ್ಲಿ ಬಿದ್ದು ಭಸ್ಮವಾಗಿದೆ. ಈ ವಿಮಾನದಲ್ಲಿ 35 ರಾಷ್ಟ್ರಗಳ ನಾಗರಿಕರು ಪ್ರಯಾಣಿಸುತ್ತಿದ್ದರು. ಇವರಲ್ಲಿ ಹೆಚ್ಚಿನವರು ಕೀನ್ಯಾದವರಿದ್ದರು. ಕೆನಡಾದಿಂದ 18 ಜನರಿದ್ದರೆ, ಇಥಿಯೋಪಿಯಾದ 9 ಜನ ಕೂಡ ಪ್ರಯಾಣಿಸುತ್ತಿದ್ದರು.

English summary
Union external affairs minister Sushma Swaraj has tweeted to help contact the family of Indian woman who killed in Ethiopia air crash. Shikha Garg, a UN consultant attached to the environment ministry, was among four Indians killed in the Ethiopian Airlines crash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X