ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಷ್ಮಾ ಸ್ವರಾಜ್ ವಿಧಿವಶ: ಅಂತಿಮಕಾರ್ಯದ ಸ್ಥಳ, ಸಮಯದ ಮಾಹಿತಿ

|
Google Oneindia Kannada News

ನವದೆಹಲಿ, ಆಗಸ್ಟ್ 07: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇಂದು ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಪಟ್ಟು ಗಂಭಿರ ಸ್ಥಿತಿಯಲ್ಲಿ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದವರು, ಅಲ್ಲಿಯೇ ಕೊನೆ ಉಸಿರೆಳೆದಿದ್ದಾರೆ.

ಸುಷ್ಮಾ ಸ್ವರಾಜ್ ನೆನಪು ಹಸಿರಾಗಿಸುವ ಸುಂದರ ಚಿತ್ರಗಳು

ಸುಷ್ಮಾ ಸ್ವರಾಜ್ ಅವರ ಮೃತ ದೇಹವನ್ನು ಈಗಾಗಲೇ ದೆಹಲಿಯ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗಿದ್ದು, ಇಂದು ರಾತ್ರಿ ಪೂರ್ತಿ ಅಲ್ಲಿಯೇ ದರ್ಶನಕ್ಕೆ ಇಡಲಾಗಿರುತ್ತದೆ. ಈಗಾಗಲೇ ಹಲವು ಬಿಜೆಪಿ ಮುಖಂಡರು ಸುಷ್ಮಾ ಸ್ವರಾಜ್ ಅವರ ದೆಹಲಿಯ ನಿವಾಸಕ್ಕೆ ಧಾವಿಸಿದ್ದಾರೆ.

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ

ಸುಷ್ಮಾ ಸ್ವರಾಜ್ ಅವರ ಅಂತಿಮ ಕಾರ್ಯದ ಬಗ್ಗೆ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಮಾಧ್ಯಮಗಳೊಟ್ಟಿಗೆ ಮಾಹಿತಿ ಹಂಚಿಕೊಂಡಿದ್ದು, ಸುಷ್ಮಾ ಸ್ವರಾಜ್ ಅವರ ಮೃತ ದೇಹವನ್ನು ಬುಧವಾರ ಮಧ್ಯಾಹ್ನ 12 ಗಂಟೆ ವರೆಗೆ ಅವರ ದೆಹಲಿಯ ನಿವಾಸದಲ್ಲಿಯೇ ಇರಿಸಲಾಗುತ್ತದೆ.

Sushma Swaraj last rites will be performed at Wednesday 3 pm

12 ಗಂಟೆ ನಂತರ ಸುಷ್ಮಾ ಸ್ವರಾಜ್ ಅವರ ಮೃತದೇಹವನ್ನು ಮೆರವಣಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಕೇಂದ್ರ ಕಚೇರಿಗೆ ತೆಗೆದುಕೊಂಡು ಬಂದು ಅಲ್ಲಿ ಕಾರ್ಯಕರ್ತರ ದರ್ಶನಕ್ಕೆ ಇಡಲಾಗುತ್ತದೆ.

ಅಂಬಾಲ ಕಂಟೋನ್ಮೆಂಟ್ ನ ಗಟ್ಟಿಗಿತ್ತಿ ಹೆಣ್ಣುಮಗಳು ಸುಷ್ಮಾ ಸ್ವರಾಜ್ ಅಂಬಾಲ ಕಂಟೋನ್ಮೆಂಟ್ ನ ಗಟ್ಟಿಗಿತ್ತಿ ಹೆಣ್ಣುಮಗಳು ಸುಷ್ಮಾ ಸ್ವರಾಜ್

ನಂತರ ಮೂರು ಗಂಟೆ ವೇಳೆಗೆ ಲೋಧಿ ರಸ್ತೆಯ ರುದ್ರ ಭೂಮಿಯಲ್ಲಿ ಅಂತಿ ವಿಧಿವಿಧಾನ ನಡೆಯಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತಿಮಕಾರ್ಯ ಮಾಡಲಾಗುತ್ತದೆ.

ಬಳ್ಳಾರಿಯಲ್ಲಿ ಕಮಲ ಅರಳಲು ನೀರೆದಿದ್ದ ಸುಷ್ಮಾ ಸ್ವರಾಜ್ಬಳ್ಳಾರಿಯಲ್ಲಿ ಕಮಲ ಅರಳಲು ನೀರೆದಿದ್ದ ಸುಷ್ಮಾ ಸ್ವರಾಜ್

ನಾಳೆ ಸುಷ್ಮಾ ಸ್ವರಾಜ್ ಅವರ ಅಂತಿಮ ದರ್ಶನಕ್ಕೆ ಹಾಗೂ ಅಂತಿಮಕಾರ್ಯದಲ್ಲಿ ಭಾಗವಹಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ವಿದೇಶದ ಕೆಲವು ರಾಜಕೀಯ ಮುಖಂಡರೂ ಸಹ ಸುಷ್ಮಾ ಸ್ವರಾಜ್ ಅವರ ಅಂತಿಮ ದರ್ಶನಕ್ಕೆ ಆಗಮಿಸುವ ಸಾಧ್ಯತೆ ಇದೆ.

English summary
Sushama Swaraj mortal remains will be kept at her residence for people to pay last respects. Around 12 pm tomorrow. Her last rites will be performed on Wednesday at 3 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X