ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿ'ಗೆ ನೆರವಾದ ಸುಷ್ಮಾ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

By Mahesh
|
Google Oneindia Kannada News

ನವದೆಹಲಿ, ಜೂ.14: ಇಂಡಿಯನ್ ಪ್ರಿಮಿಯರ್ ಲೀಗ್ ನ ಮಾಜಿ ಚೇರ್ಮನ್ ಲಲಿತ್ ಮೋದಿ ಅವರ ವೀಸಾ, ಇಂಗ್ಲೆಂಡ್ ಪ್ರಯಾಣಕ್ಕೆ ನೆರವಾದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಕುರ್ಚಿ ಅಲ್ಲಾಡುತ್ತಿದೆ. ಐಪಿಎಲ್ ಅವ್ಯವಹಾರ ಆರೋಪ ಹೊತ್ತಿದ್ದ ಮೋದಿ ಅವರು ಅಕ್ರಮವಾಗಿ ದೇಶದಿಂದ ತಪ್ಪಿಸಿಕೊಂಡು ಹೋಗಲು ಸುಷ್ಮಾ ನೆರವಾಗಿದ್ದರೆ. ಸುಷ್ಮಾ ತಲೆದಂಡವಾಗಬೇಕು ಎಂದು ಆರೋಪಿಸಿರುವ ಕಾಂಗ್ರೆಸ್ ಆಗ್ರಹಿಸಿದೆ.

ಲಲಿತ್ ಮೋದಿ ಅವರಿಗೆ ನೆರವಾದ ಬಗ್ಗೆ ಸರಣಿ ಟ್ವೀಟ್ ಮೂಲಕ ಸುಷ್ಮಾ ಸ್ವರಾಜ್ ಪ್ರತಿಕ್ರಿಯಿಸಿದ್ದಾರೆ. ಜುಲೈ 2014ರಲ್ಲಿ ಲಲಿತ್ ಮೋದಿ ಅವರು ತಮ್ಮ ಪತ್ನಿಗೆ ಕ್ಯಾನ್ಸರ್ ಇದ್ದು, ಚಿಕಿತ್ಸೆಗಾಗಿ ಪೋರ್ಚುಗಲ್ ಗೆ ತೆರಳಬೇಕು ಎಂದು ಕೇಳಿಕೊಂಡಿದ್ದರು. ಮಾನವೀಯತೆಯ ದೃಷ್ಟಿಯಿಂದ ಆಗಸ್ಟ್ 4ರಂದು ಆಕೆಯ ಶಸ್ತ್ರಚಿಕಿತ್ಸೆಗೆ ತೆರಳಲು ಮೋದಿಗೆ ಸರ್ಕಾರದ ಅನುಮತಿ ಬೇಕಿತ್ತು.

Sushma Swaraj

ಯುಪಿಎ ಸರ್ಕಾರ ಮಾಡದ ಕೆಲಸವನ್ನು ನಾನು ಮಾನವೀಯತೆಯ ದೃಷ್ಟಿಯಿಂದ ಮಾಡಿದೆ. ಬ್ರಿಟಿಷ್ ರಾಯಭಾರಿ ಜೊತೆ ಮಾತನಾಡಿ ಮೋದಿ ಅವರ ಪ್ರಯಾಣಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಬ್ರಿಟಿಷ್ ಸರ್ಕಾರ ಒದಗಿಸುವುದರಿಂದ ಭಾರತ ಹಾಗೂ ಬ್ರಿಟನ್ ನಡುವಿನ ಸಂಬಂಧವೇನು ಹಳಸುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟೆ. ಈ ಬಗ್ಗೆ ಅಂದಿನ ಸಂಸದ ಕೀತ್ ವಾಜ್ ಅವರಿಗೂ ಹೇಳಿದ್ದೆ ಎಂದು ಸುಷ್ಮಾ ಹೇಳಿಕೊಂಡಿದ್ದಾರೆ.

ಅದರೆ, ಸುಷ್ಮಾ ಸ್ಪಷ್ಟನೆಗೆ ಬಗ್ಗದ ಕಾಂಗ್ರೆಸ್ ನಾಯಕರು ರಾಜೀನಾಮೆಗೆ ಆಗ್ರಹಿಸಿದ್ದಾರ್. ರೆಡ್ ಕಾರ್ನರ್ ನೋಟಿಸ್ ಪಡೆದ ವ್ಯಕ್ತಿಗೆ ಸುಷ್ಮಾ ನೆರವಾಗುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ.


ವೀಸಾ ವಿವಾದದ ಬಗ್ಗೆ ಪ್ರಧಾನಿ ಕೂಡಲೇ ಗಮನ ಹರಿಸಲಿ, ಸುಷ್ಮಾ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ ಎಂದು ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದಾರೆ.

English summary
Trapped in a propreity tangle, Minister of External Affairs Sushma Swaraj has landed herself in a major trouble after reports claimed that she helped former IPL chairman Lalit Modi in clearing his travel-related documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X